ವಿಜ್ಞಾನ ಕಲಿಕೆಗೆ 'ಲ್ಯಾಬ್' ಲಾಭ
ಕ.ಪ್ರ.ವಾರ್ತೆ ಬೆಂಗಳೂರು ಸೆ. 8
ಶಾಲಾ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಬರಲಿವೆ 'ಲ್ಯಾಬ್ ಇನ್ ಬಾಕ್ಸ್'.
ಸರ್ವ ಶಿಕ್ಷಣ ಅಭಿಯಾನ ಶಿಕ್ಷಕರಿಗೆ ಈ ಲ್ಯಾಬ್ ಇನ್ ಬಾಕ್ಸ್ ವೈಜ್ಞಾನಿಕ ಉಪಕರಣಗಳನ್ನು ವಿತರಿಸಿ, ಆ ಮೂಲಕ ಮಕ್ಕಳಿಗೆ ಬೋಧಿಸುವುದರ ಜತೆಗೆ ಅವರಲ್ಲಿ ಕಲಿಕಾ ಆಸಕ್ತಿಯನ್ನು ವೃದ್ಧಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಜಾರಿಗೆ ತಂದಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನದ ಪಾಠಗಳನ್ನು ಬಹಳ ಸುಲಭವಾಗಿ ಅರ್ಥೈಸಲು ಇದರಿಂದ
ಅನುಕೂಲವಾಗುತ್ತದೆ ಎಂಬುದು ಶಿಕ್ಷಣ ಇಲಾಖೆ ಅಭಿಪ್ರಾಯ.
ಈ ನಿಟ್ಟಿನಲ್ಲಿ ಲ್ಯಾಬ್ ಇನ್ ಬಾಕ್ಸ್ ವಿಜ್ಞಾನ ಉಪಕರಣಗಳನ್ನು ಶಾಲೆಗೆ ಒದಗಿಸಲು ಆಗಸ್ತ್ಯ ಫೌಂಡೇಷನ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಅಕ್ಟೋಬರ್ ತಿಂಗಳಿನಿಂದ ಉಪಕರಣಗಳು ಶಾಲೆಗಳಿಗೆ
ತಲುಪಲಿದೆ.
ಈ ರೀತಿಯ ಕಲಿಕಾ ಯೋಜನೆ ರಾಜ್ಯದಲ್ಲಿ ಇದೇ ಮೊದಲ ಬಾರಿ ಜಾರಿಗೆ ಬರುತ್ತಿದ್ದು, ಪ್ರಾಯೋಗಿಕವಾಗಿ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿರುವ ಕ್ಲಸ್ಟರ್ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಮತ್ತು ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಳವಾಗಿದ್ದು ಕಂಡುಬಂದಲ್ಲಿ ಯೋಜನೆಯನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ವಿಸ್ತರಿಸಲು ಕೂಡ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಈ ಮೊದಲು ಭೂಗೋಳ ಶಾಸ್ತ್ರದ ಬಗ್ಗೆ ಮಕ್ಕಳಿಗೆ ತಿಳಿಸಲು ಜಿಯೋಕಿಟ್‌ಅನ್ನು ಸರ್ವ ಶಿಕ್ಷಣ ಅಭಿಯಾನ ನೀಡಿತ್ತು. ಆದರೆ, ಕೇವಲ ಭೂಗೋಳ ಶಾಸ್ತ್ರದ ಬಗ್ಗೆ ಮಕ್ಕಳಿಗೆ ಪ್ರಯೋಗಿಕವಾಗಿ ತಿಳಿಸಿದರೆ ಸಾಲದು, ವಿಜ್ಞಾನದ ಬಗ್ಗೆಯೂ ತಿಳಿಸುವ ಅಗತ್ಯವಿದೆ ಎಂಬ ಉದ್ದೇಶದಿಂದ ಈ ಲ್ಯಾಬ್ ಇನ್ ಬಾಕ್ಸ್ ನೀಡಲು ತೀರ್ಮಾನಿಗಿದೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳು ಲ್ಯಾಬ್ ಇನ್ ಬಾಕ್ಸ್ ಉಪಕರಣಗಳ ಸದುಪಯೋಗ ಪಡೆದುಕೊಳ್ಳಬಹುದು. ಪಠ್ಯಕ್ರಮದ ಅನುಗುಣವಾಗಿ ಈ ಬಾಕ್ಸ್‌ಗಳನ್ನು ರಚಿಸಲಾಗಿದೆ.
ಪ್ರಾಯೋಗಿಕವಾಗಿ ನಾಲ್ಕು ಕ್ಲಸ್ಟರ್‌ಗಳಲ್ಲಿ ಮಾತ್ರ ಆರಂಭದಲ್ಲಿ ಯೋಜನೆ ಜಾರಿಯಾಗುತ್ತಿರುವುದರಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಗೆ ಆರಂಭಿಕವಾಗಿ ಸುಮಾರು 1.5 ಲಕ್ಷ ವೆಚ್ಚ ಮಾಡುತ್ತಿದೆ.
ಏನಿದು ಲ್ಯಾಬ್ ಇನ್ ಬಾಕ್ಸ್?: ಲ್ಯಾಬ್ ಇನ್ ಬಾಕ್ಸ್‌ನ ಒಂದು ಸೆಟ್‌ನಲ್ಲಿ 10 ವಿವಿಧ ಉಪಕರಣಗಳು, ಭೂಪಟಗಳು, ರಸಾಯನಶಾಸ್ತ್ರಕ್ಕೆ ಬೇಕಾಗುವ ಇತರೆ ರಸಾಯನಿಕ ವಸ್ತುಗಳು ಇರುತ್ತದೆ. ಈ ಬಾಕ್ಸ್‌ನಲ್ಲಿರುವ ವಿವಿಧ ರಾಸಾಯನಿಕಗಳ ಮಾದರಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಓದಿನ ಜತೆಗೆ ಪ್ರಯೋಗದ ಮೂಲಕವೂ ವಿಜ್ಞಾನ ಪಾಠವನ್ನು ಅರಿತುಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡುವುದರ ಜತೆಗೆ ಪ್ರಯೋಗದ ಬಗ್ಗೆ ಆಸಕ್ತಿಯೂ ಮೂಡುತ್ತದೆ ಎನ್ನುವುದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ನಿರ್ದೇಶಕ ಸುಬೋಧ್ ಯಾದವ್ ಅವರ ಅಭಿಪ್ರಾಯ.
ಆರಂಭದಲ್ಲಿ ಒಂದು ಕ್ಲಸ್ಟ್‌ರ್‌ಗೆ ಒಂದರಂತೆ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಶಿಕ್ಷಕರು ವಿಜ್ಞಾನದ ಪಾಠ ಬೋಧಿಸಿದ ನಂತರ ಅದನ್ನು ಶಿಕ್ಷಣ ಇಲಾಖೆಗೆ ಹಿಂತಿರುಗಿಸಬೇಕು.
ಇದನ್ನು ಮತ್ತೊಂದು ಶಾಲೆಗೆ ಕೊಂಡೊಯ್ದು ಅಲ್ಲಿಯೂ ಇದೇ ರೀತಿ ಪ್ರಯೋಗದ ಮೂಲಕ ಬೋಧನೆ ಮಾಡಲಾಗುತ್ತದೆ. ಪ್ರಯೋಗಾಲಯಗಳಿಲ್ಲದ ಶಾಲೆಗಳಲ್ಲಿ ಇದು ಹೆಚ್ಚು ಉಪಯೋಗವಾಗುತ್ತದೆ ಎನ್ನುತ್ತಾರೆ ಅವರು.
ಶಿಕ್ಷಕರಿಗೆ ತರಬೇತಿ: ಸರ್ಕಾರ ನೀಡುವ ಲ್ಯಾಬ್ ಇನ್ ಬಾಕ್ಸ್‌ಗಳನ್ನು ಯಾವ ರೀತಿ ಉಪಯೋಗಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಇದರ ಸಹಾಯದಿಂದ ಹೇಗೆ ಪಠ್ಯ ಬೋಧಿಸಬೇಕು ಎಂಬ ಬಗ್ಗೆ ಈ ಬಾಕ್ಸ್‌ಗಳನ್ನು ನೀಡುವ ಆಗಸ್ತ್ಯ ಫೌಂಡೇಷನ್ ಶಿಕ್ಷಕರಿಗೆ ತರಬೇತಿ ನೀಡಲಿದೆ. ಮೊದಲಿಗೆ ಅಗಸ್ತ್ಯ ಫೌಂಡೇಷನ್ ಸಂಪನ್ಮೂಲ ವ್ಯಕ್ತಿಗಳೇ ವಿದ್ಯಾರ್ಥಿಗಳಿಗೆ ಲ್ಯಾಬ್ ಇನ್ ಬಾಕ್ಸ್ ಉಪಯೋಗದ ಬಗ್ಗೆ ತಿಳಿಸುತ್ತಾರೆ. ಆನಂತರ ಶಿಕ್ಷಕರು ಈ ಉಪಕರಣದಿಂದ ಬೋಧಿಸುತ್ತಾರೆ.
ಇದೊಂದು ನೂತನ ಯೋಜನೆಯಾಗಿದ್ದು, ಪ್ರಯೋಗಶಾಲೆ ಇಲ್ಲದಿರುವ ಶಾಲೆಗಳಲ್ಲಿ ಈ ಲ್ಯಾಬ್ ಇನ್ ಬಾಕ್ಸ್ ಉಪಯೋಗ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠವನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಾಗುತ್ತದೆ.
ಸುಬೋಧ್ ಯಾದವ್, ರಾಜ್ಯ ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ
ಸರ್ವ ಶಿಕ್ಷಣ ಅಭಿಯಾನದಡಿ ಇದೊಂದು ವಿಶೇಷ ಯೋಜನೆಯಾಗಿದೆ. ಹೆಚ್ಚು ಕ್ಲಿಷ್ಟವಾದ ವಿಷಯವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ತಿಳಿಸಲು ಅನುಕೂಲಕಾರಿಯಾಗಲಿದೆ ಲ್ಯಾಬ್‌ಇನ್ ಬಾಕ್ಸ್.
ಸುರೇಶ್, ಮ್ಯಾನೇಜರ್, ಅಗಸ್ತ್ಯ ಫೌಂಡೇಷನ್
ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

