ಪ್ರಧಾನ ಸುದ್ದಿ

ಸಿಎಂ ಪುತ್ರನಿಂದ ಅಕ್ರಮ ಮರಳು ಗಣಿಗಾರಿಕೆ: ಈಶ್ವರಪ್ಪ

ಸಿಎಂ ಪುತ್ರನಿಂದ ಅಕ್ರಮ ಮರಳು ಗಣಿಗಾರಿಕೆ: ಈಶ್ವರಪ್ಪ
Published On :

ಕ.ಪ್ರ. ವಾರ್ತೆ, ಟಿ. ನರಸೀಪುರ, ಏ.3
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪುತ್ರರು ನಿರಂತರವಾಗಿ ಅಕ್ರಮ ಮರಳು ಹಾಗೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಗುರುವಾರ ನಡೆದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿದ ಅವರು, ತಮ್ಮ ಆಸ್ತಿಯ ಬಗ್ಗೆಯೂ ಸಿಬಿಐ ತನಿಖೆಯಾಗಲಿ. ಮುಖ್ಯಮಂತ್ರಿ ಹಾಗೂ ಸಚಿವರೊಬ್ಬರ ಪುತ್ರರತ್ನರು ಮಾಡುತ್ತಿರುವ ವರ್ಗಾವಣೆ ಮತ್ತು ಮರಳು ದಂಧೆಯ ತನಿಖೆಯನ್ನು ಮಾಡಿಸುವಂತೆ ತವರು ಕ್ಷೇತ್ರದಲ್ಲಿಯೇ ಸಿಎಂಗೆ ಬಹಿರಂಗ ಸವಾಲು ಹಾಕಿದರು.

ಜಿಲ್ಲೆಯಲ್ಲಿರುವ ಪ್ರಾಮಾಣಿಕ ದಲಿತ ಸಚಿವರೊಬ್ಬರು ಪುತ್ರರಿಬ್ಬರ ವರ್ಗಾವಣೆಗೆ ನೀಡಿದ ಕಡತವನ್ನೇ ಅಪ್ಪ ಮಕ್ಕಳು ಹೇಳಿದಂತೆ ಕೇಳಿಕೊಂಡು ಸಚಿವರಾಗಿರೋಕೆ ಆಗಲ್ಲವೆಂದು ಎಸೆದಿದ್ದಾರೆ. ನಮ್ಮ ಆಸ್ತಿ ಪಾಸ್ತಿ ತನಿಖೆಗೆ ಸಿದ್ಧನಿದ್ದೇನೆ. ಅಪ್ಪಂದಿರೇ ಬೇಡವೆಂದು ಮಕ್ಕಳೇ ವರ್ಗಾವಣೆ, ಮರಳಿನ ಲೂಟಿ ಹೊಡೆಯುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಅಪ್ಪಂದಿರು (ಸಿದ್ದರಾಮಯ್ಯ ಮತ್ತು ಮಹದೇವಪ್ಪ) ಅಧಿಕಾರ ಕಳೆದುಕೊಳ್ಳುವುದರಿಂದ, ಲೆಕ್ಕವಿಲ್ಲದಷ್ಟು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.