ಕಾದಂಬರಿಯಲ್ಲಿನ ಕಲಾತ್ಮಕತೆ ನನ್ನ ಸೃಷ್ಟಿ: ಎಸ್.ಎಲ್.ಭೈರಪ್ಪ
ಬೆಂಗಳೂರು: ಕಾದಂಬರಿಯಲ್ಲಿರುವ ವಸ್ತು ನನ್ನ ಸೃಷ್ಟಿಯಲ್ಲ ಅದರ ಕಲಾತ್ಮಕತೆ ನನ್ನ ಸೃಷ್ಟಿ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಆವರಣ ಕೃತಿಯ ಇಂಗ್ಲಿಷ್ ಅನುವಾದ 'ಅನಾವರಣ ದಿ ವೇಲ್' ಪುಸ್ತಕ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು. ಎರಡು ಬಗೆಯ ಪ್ರಚಾರಗಳಿವೆ, ಓದುಗರು ಪುಸ್ತಕವನ್ನು ಓದಿದ ನಂತರ ತಮ್ಮ ಸ್ನೇಹಿತರಿಗೆ ಹಾಗೂ ಬಂಧುಗಳ ಜತೆ ಚರ್ಚಿಸಿ ಓದುವಂತೆ ಪ್ರಚೋದಿಸುವುದು. ಎಡಪಂಕ್ತಿ ವಿರೋಧವು ಕೂಡ ಜನರು ಪುಸ್ತಕ ಕೊಳ್ಳುವಂತೆ ಮಾಡುತ್ತದೆ ಎಂದರು.
ಕೆಲವೊಂದು ಸ್ಥಳಗಳಿಗೆ ಭೇಟಿ ನೀಡಿದರೆ ಅದರ ಇತಿಹಾಸದ ಬಗ್ಗೆ ಮಾಹಿತಿಯೇ ದೊರೆಯುವುದಿಲ್ಲ, ಇನ್ನೂ ಹೆಚ್ಚಾಗಿ ಕೇಳಲು ಹೋದವರ ವಿರುದ್ಧ ಜನ ತಿರುಗಿ ಬೀಳುತ್ತಾರೆ. ಜನತೆ ರಾಜಕೀಯ ಬಲ ಉಪಯೋಗಿಸಿಕೊಂಡು ಇತಿಹಾಸವನ್ನೇ ತಿರುಚುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ತತ್ವಶಾಸ್ತ್ರ ಹಾಗೂ ಸಾಹಿತ್ಯ ವಿದ್ಯಾರ್ಥಿಯಾದ ನಾನು ಒಂದೊಮ್ಮೆ ಸಾಹಿತ್ಯ ಕ್ಷೇತ್ರಕ್ಕೆ ಮರಳುವ ಸಂದರ್ಭ ಬಂದರೂ ಕೂಡ ಮೂಲ ತತ್ವವಾದ ಸತ್ಯದ ಹುಡುಕಾಟ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಭೈರಪ್ಪ ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಬಚಾವೋ ಆಂದೋಲನ ಸಂಚಾಲಕ ಅತುಲ್ ಕೊಠಾರಿ, ಆವರಣ ದಿ ವೇಲ್ ಕಾದಂಬರಿ ಅನುವಾದಕ ಸಂದೀಪ್ ಬಾಲಕೃಷ್ಣ, ಸಿಇಎಸ್ಎಸ್ನ ಅಧ್ಯಕ್ಷ ಪಿ.ವಿ. ಕೃಷ್ಣಭಟ್, ಶತಾವಧಾನಿ ಆರ್. ಗಣೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

