ಇಂದು ದೇಶದ ಮೂರನೇ ದೊಡ್ಡ ಹಂತದ ಮತದಾನ 117 ಕ್ಷೇತ್ರಗಳಿಗೆ ಚುನಾವಣೆ

ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ |ಇಂದು ನಮೋ ನಾಮಪತ್ರ
ದೇಶಾದ್ಯಂತ ಗುರುವಾರ ಆರನೇ ಹಂತದ ಮತದಾನ ಪ್ರಗತಿಯಲ್ಲಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿನ 117 ಸ್ಥಾನಗಳಿಗೆ ಹಕ್ಕು ಚಲಾವಣೆ ನಡೆದಿದೆ. ಒಟ್ಟು 9 ಹಂತಗಳ ಮತದಾನದ ಪೈಕಿ ಈ ಹಂತ ಮೂರನೇ ಅತಿದೊಡ್ಡ ಹಂತವಾಗಿದೆ. ದಯಾನಿಧಿ ಮಾರನ್, ವೈಕೋ, ಕಾರ್ತಿ ಚಿದಂಬರಂ, ಸಲ್ಮಾನ್ ಖುರ್ಷಿದ್, ಅಜಿತ್ ಸಿಂಗ್ ಕಣದಲ್ಲಿರುವ ಪ್ರಮುಖರು. ತಮಿಳುನಾಡಿನ 39, ಮಹಾರಾಷ್ಟ್ರದ 19, ಉತ್ತರಪ್ರದೇಶದ 12, ಬಿಹಾರದ 7, ಅಸ್ಸಾಂನ 6, ಜಾರ್ಖಂಡ್ನ4, ಕಾಶ್ಮೀರದ 1 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಕದ್ದಾಲಿಸುವ ನಾಯಕರು ಬೇಕೇ?
ಪ್ರಿಯಾಂಕಾ ವಾದ್ರಾ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬೇಹುಗಾರಿಕಾ ಪ್ರಕರಣ ಪ್ರಸ್ತಾಪಿಸಿದ ಅವರು ಮಹಿಳೆಯರ ಸಬಲೀಕರಣವೆಂದರೆ ಬೇಹುಗಾರಿಕೆ ಮಾಡಿಕೊಂಡು ನಾಲ್ಕು ಗೋಡೆಗಳ ನಡುವೆ ದೂರವಾಣಿಯನ್ನು ಕದ್ದಾಲಿಸುವುದೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಮೋದಿ 60 ವರ್ಷಗಳಿಂದ ಗಾಂಧಿ ಕುಟುಂಬ ಗಟ್ಟಿಯಾಗುತ್ತಿದೆ ಎಂದಿದ್ದಾರೆ.
ನಾಮಪತ್ರಕ್ಕೆ ಮುನ್ನ ಅದ್ದೂರಿ ರೋಡ್ ಶೋ
ಉತ್ತರಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮೊದಲು 2 ಕಿಮೀಅದ್ಧೂರಿ ರೋಡ್ಶೋ ನಡೆಸಲಿದ್ದಾರೆ. ಅದರಲ್ಲಿ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆಗೆ ಮುನ್ನ ಬನಾರಸ್ ಹಿಂದೂ ವಿವಿ ಆವರಣಕ್ಕೆ ತೆರಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ಪಟೇಲ್, ಮದನ್ ಮೋಹನ್ ಮಾಳವೀಯ ಅವರಿಗೆ ಗೌರವ ಅರ್ಪಿಸಲಿದ್ದಾರೆ. ನಂತರ ಅವರು ವಡೋದರಾಕ್ಕೆ ತೆರಳಿ ರ್ಯಾಲಿ ನಡೆಸಲಿದ್ದಾರೆ.
ಉಮೇದುವಾರಿಕೆ ಸಲ್ಲಿಸಿದ ಕೇಜ್ರಿವಾಲ್
ವಾರಾಣಸಿಯಿಂದ ಸ್ಪರ್ಧಿಸಿರುವ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಬರೋಬ್ಬರಿ ಎರಡೂವರೆ ಗಂಟೆಗಳ ರೋಡ್ಶೋ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ, ಮೋದಿ ವಿರುದ್ಧ ಕಿಡಿ ಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


