ಪ್ರಧಾನ ಸುದ್ದಿ

ಸರ್ಕಾರಿ ಗೌರವದೊಂದಿಗೆ ಕೃಷ್ಣಪ್ಪ ಅಂತ್ಯ ಸಂಸ್ಕಾರ

ಸರ್ಕಾರಿ ಗೌರವದೊಂದಿಗೆ ಕೃಷ್ಣಪ್ಪ ಅಂತ್ಯ ಸಂಸ್ಕಾರ
Published On :

ಕೃಷ್ಣರಾಜಪುರ: ಮಾಜಿ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ 5.30ರ ವೇಳೆಗೆ ಎಸ್ಇಎ ಕಾಲೇಜು ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ತೀವ್ರ ಹೃದಯಾಘಾತದಿಂದಾಗಿ ಬುಧವಾರ ಸಂಜೆ ಕೃಷ್ಣಪ್ಪ ಮೃತಪಟ್ಟಿದ್ದರು. ಮನೆ ಬಳಿಯಿರುವ ಬಿವಿಎನ್ ಎಚ್ಎಸ್ ಶಾಲೆ ಆವರಣದಲ್ಲಿ ಗುರುವಾರ 3.30ರತನಕ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು.
ನಂತರ ಸಾವಿರಾರು ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ತಂದು ದೇವಸಂದ್ರದಲ್ಲಿರುವ ಕೃಷ್ಣಪ್ಪ ಅವರ  ಕಾಲೇಜಿಗೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು. ನಂತರ ಸರ್ಕಾರಿ ಗೌರವ ಮತ್ತು ಯಾದವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕೃಷ್ಣಪ್ಪ ಅವರ ಪುತ್ರ ಹರಿಶ್ ಯಾದವ್ ಅನಾರೋಗ್ಯದಿಂದ ಬಳುತ್ತಿರುವ ಕಾರಣ ಮೊಮ್ಮಗ ಬ್ರಿಜೇಷ್ ಅಂತಿಮ ವಿಧಿ ವಿಧಾನಗಳನ್ನು  ನೆರವೇರಿಸಿದರು.
ಅಂತ್ಯ ಸಂಸ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ. ಪತ್ನಿ ಚನ್ನಮ್ಮ, ಮಾಜಿ ಸಚಿವ ರೇವಣ್ಣ ಹಾಗೂ ಎ. ಕೃಷ್ಣಪ್ಪ ಕುಟುಂಬದ ಸದಸ್ಯರು, ಸಂಭಂಧಿಕರು ಮತ್ತು ಅಪಾರ ಅಭಿಮಾನಿಗಳು ಸಾಕ್ಷಿಯಾದರು.
ಯಾದವ ಜನಾಂಗದ ಗುರುಗಳಾದ ಯಾದವಾನಂದ ಸ್ವಾಮೀಜಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ,  ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಮಹಾದೇವಪ್ರಸಾದ್, ಡಾ. ಎಚ್.ಸಿ. ಮಹದೇವಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಎಂ.ವಿ. ರಾಜಶೇಖರನ್, ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ, ಶಾಸಕ ಬೈರತಿ ಬಸವರಾಜ್, ಅರವಿಂದ ಲಿಂಬಾವಳಿ, ಬೈರತಿ ಸುರೇಶ್, ಎಸ್.ಟಿ. ಸೋಮಶೇಖರ್, ಪ್ರಿಯಾಕೃಷ್ಣ, ಮಾಜಿ ಶಾಸಕರಾದ ನಂದೀಶ್ ರೆಡ್ಡಿ, ವಾಟಾಳ್ ನಾಗರಾಜ್,  ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಸೇರಿದಂತೆ ಸಾವಿರಾರು ಗಣ್ಯರು ಅಂತಿಮ ದರ್ಶನ ಪಡೆದರು.
ಕೃಷ್ಣರಾಜಪುರದಲ್ಲಿ ಸಾರ್ವಜನಿಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ನಾಯಕರಿಗೆ ಗೌರವ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.