ಪ್ರಧಾನ ಸುದ್ದಿ

ಸಪ್ತ ಭ್ರಷ್ಟರಿಗೆ ಲೋಕ ಬರೆ

ಸಪ್ತ ಭ್ರಷ್ಟರಿಗೆ ಲೋಕ ಬರೆ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಏ.25
ಭ್ರಷ್ಟರ ಬೇಟೆ ಮುಂದುವರೆಸಿರುವ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ರಾಜ್ಯದ ವಿವಿಧೆಡೆ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯೇ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಕೊಪ್ಪಳ
ಬಸನಗೌಡ ಪಾಟೀಲ್, ಕೊಪ್ಪಳ ಜಿಪಂ ಸಾಂಖ್ಯಿಕ ಅಧಿಕಾರಿ
*    ಕೊಪ್ಪಳದ ಮನೆ, ಕಚೇರಿ, ಒಡೆತನದ ಎಂಆರ್‌ಎಫ್ ಟೈರ್ ಶೋರೂಮ್, ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ಬಸನಗೌಡರ ಸಹೋದರ ಶಂಕರಗೌಡ ನಿವಾಸದ ಮೇಲೆ ದಾಳಿ
*    1.80 ಲಕ್ಷ ನಗದು, ಶಂಕರಗೌಡ ನಿವಾಸದಲ್ಲಿ 1.37 ಲಕ್ಷ ಸೇರಿ 2.45 ಲಕ್ಷ ನಗದು
*    ಎರಡು ಜೆಸಿಬಿ, ಮೋಟರ್ ಬೈಕ್, ಚರಾಸ್ತಿಗೆ ಸಂಬಂಧಿತ ದಾಖಲೆ ಪತ್ತೆ

ಕೋಲಾರ
ಮುನಿರಾಜು ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಆಧೀಕ್ಷಕ
*    3.10ಲಕ್ಷ ನಗದು, 8.40 ಲಕ್ಷ ಮೌಲ್ಯದ 360 ಗ್ರಾಂ ತೂಕದ ಚಿನ್ನಾಭರಣ, 22.54 ಲಕ್ಷ ಮೌಲ್ಯದ ಬೆಳ್ಳಿ
*    2.41 ಲಕ್ಷ ಗೃಹೋಪಯೋಗಿ ವಸ್ತು
*    ಕನಕನಪಾಳ್ಯದಲ್ಲಿನ ಭವ್ಯ ವಸತಿ ಗೃಹ

ಚಿಕ್ಕಬಳ್ಳಾಪುರ
ರಾಮಯ್ಯ ಜಿಲ್ಲಾಧಿಕಾರಿಗಳ ಕಚೇರಿ ಡಿ ಗ್ರೂಫ್ ನೌಕರ
*    5 ಮನೆಗಳು, ಒಂದು ನಿವೇಶನದ ದಾಖಲೆಗಳು
*    500 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, 3 ಸಾವಿರ ನಗದು, 2 ಬೈಕ್,1 ಕಾರು ವಶ.

ಲಿಂಗಸ್ಗೂರು
ಮಹಾಂತೇಶ ಕಣ್ಣೂರ್ ಲೋಕೋಪಯೋಗಿ ಇಲಾಖೆ ಎಇಇ
*    ಇಳಕಲ್ ಹಾಗೂ ಲಿಂಗಸ್ಗೂರಿನಲ್ಲಿರುವ ನಿವಾಸ, ಇಲಾಖೆ ಕಚೇರಿ ಮೇಲೆ ದಾಳಿ
*    10 ಸಾವಿರ ನಗದು
*    ಚತುಷ್ಪಥ ರಸ್ತೆ ಬದಿಯ 22 ಲಕ್ಷ ಮೌಲ್ಯದ ಎರಡು ಅಂತಸ್ತಿನ 2 ಮನೆ
*    ಆರು ಕಾಂಪ್ಲೆಕ್ಸ್‌ನ ಮೌಲ್ಯ 1 ಕೋಟಿ
*    4 ಲಕ್ಷ ಮೌಲ್ಯದ ಫರ್ನಿಚರ್
*    4 ಲಕ್ಷ ಮೌಲ್ಯದ 6 ಎಕರೆ ಜಮೀನು

ಶಿವಮೊಗ್ಗ
ಆರ್. ನಾಗರಾಜ್, ನಗರ ಯೋಜಕ
*    ಆದಾಯಕ್ಕಿಂತ ಶೇಕಡಾ 258.74ರಷ್ಟು ಹೆಚ್ಚು ಆಸ್ತಿ ಪತ್ತೆ
*   ಗೋಪಾಲಗೌಡ ಬಡಾವಣೆಯಲ್ಲಿ ಎರಡು ನಿವೇಶನ, ವಾಜಪೇಯಿ ಬಡಾವಣೆಯಲ್ಲಿ ನಿವೇಶನ, ಗೋಪಾಲಗೌಡ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ
*    1 ಹೋಂಡಾ ಆ್ಯಕ್ಟಿವಾ ಬೈಕ್, 1 ಮಾರುತಿ ಎಸ್ಟರ್ ಕಾರು, 1 ಯಮಹಾ ಬೈಕ್
*    3,12,100 ಮೌಲ್ಯದ ಬಂಗಾರ, 204 ಗ್ರಾಂ ಬೆಳ್ಳಿ, 33,420 ನಗದು
*    12,01,755 ಮೌಲ್ಯದ ಗೃಹೋಪಯೋಗಿ ವಸ್ತುಗಳು
*    ಅನಿಲ್ ಇಂಡಸ್ಟ್ರಿಯಲ್ಲಿ 5 ಲಕ್ಷ ಬಂಡವಾಳ ತೊಡಗಿಸಿದ ದಾಖಲೆ
*    ಹಾಯ್ ಹೊಳೆ ಗ್ರಾಮದಲ್ಲಿ 3 ಎಕರೆ ಭೂಮಿ, ಅಡಕೆ ತೋಟದ ದಾಖಲೆ

ದಾವಣಗೆರೆ
ಸೋಮ್ಲಾ ನಾಯ್ಕ್, ಬಸವನಗರ ಠಾಣೆ ಎಸ್‌ಐ
*    ಕಚೇರಿ, ಬಾಡಿಗೆ ಮನೆ, ಹರಪನಹಳ್ಳಿ ಹಾಗೂ ಸ್ವಗ್ರಾಮದ ಕಾಳವಿ ತಾಂಡಾದ ನಿವಾಸಗಳ ಮೇಲೆ ದಾಳಿ
*    ಆದಾಯಕ್ಕಿಂತ ಶೇ.181ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆ
*    61 ಸಾವಿರ ನಗದು, 250 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ವಸ್ತು, ಆಭರಣ
*    5 ಬ್ಯಾಂಕ್ ಖಾತೆಗಳು, ಸ್ವಿಪ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ, ಆಂಜನೇಯ ಬಡಾವಣೆ, ಹರಪನಹಳ್ಳಿ ಪಟ್ಟಣ ಸೇರಿದಂತೆ 3 ನಿವೇಶನ, ಜೋಡಿ ಮನೆ
*    4 ಎಕರೆ ಜಮೀನು, ಪತ್ನಿ ಹೆಸರಿನ ನಿವೇಶನ ಸೇರಿದಂತೆ 63.53 ಲಕ್ಷ ಮೌಲ್ಯದ ಆಸ್ತಿ ಪತ್ತೆ

ಬ್ಯಾಡಗಿ
ಬಸವರಾಜ ಕೊಪ್ಪದ, ಉಪತಹಸೀಲ್ದಾರ್
*    4 ಕೆಜಿ ಬೆಳ್ಳಿ, 522 ಗ್ರಾಂ ಬಂಗಾರ, 57 ಸಾವಿರ ನಗದು
*    ಒಂದು ಟಿಪ್ಪರ್, ಕಾರು, ಮೂರು ಬೈಕ್
*    ಪಟ್ಟಣದ ವಿದ್ಯಾನಗರದಲ್ಲಿ ಎರಡು ಮನೆ, ರೇಲ್ವೆ ನಿಲ್ದಾಣ ರಸ್ತೆಯಲ್ಲಿ ಜಮೀನು ಹಾಗೂ ನಿವೇಶನ

ಬಿಡಿಎ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಬೆಂಗಳೂರು:
ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಜಮೀನು ಮಾಲೀಕರಿಗೆ ಪರಿಹಾರವಾಗಿ ನೀಡಲಾದ ಸೈಟ್‌ಗಳ ಮಂಜೂರಾತಿ ಮಾಡಲು 7 ಲಕ್ಷ ಲಂಚ ಪಡೆದ ಬಿಡಿಎ ಕಾರ್ಯದರ್ಶಿ ರಾಜಮ್ಮ ಚೌಡರೆಡ್ಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.