ಪ್ರಧಾನ ಸುದ್ದಿ

ಗ್ರಾಮೀಣಾಭಿವೃದ್ಧಿಗೆ 10480 ಕೋಟಿ ಬಂಪರ್

ಗ್ರಾಮೀಣಾಭಿವೃದ್ಧಿಗೆ 10480 ಕೋಟಿ ಬಂಪರ್
Published On :

ಬೆಳಗಾವಿ: ಅಭಿವೃದ್ಧಿ ಕಾಮಗಾರಿಗಳನ್ನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಚುನಾವಣೆ ಆಯೋಗ ನೀತಿ ಸಂಹಿತೆ ಸಡಿಲಿಕೆ ಮಾಡಿ ಹಸಿರು ನಿಶಾನೆ ತೋರುತ್ತಿದ್ದಂತೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಥಳೀಯ ಸಂಸ್ಥೆಗಳ ಯೋಜನಾ ಕಾಮಗಾರಿಗಳಿಗೆ ಮತ್ತು ಯೋಜನೇತರ ಕಾರ್ಯಕ್ರಮಗಳ ಅನುದಾನಕ್ಕೆ ಮಂಜೂರಾತಿ ನೀಡಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ರಾಜ್ಯದ 30 ಜಿಪಂ, 176 ತಾಪಂ ಹಾಗೂ 5627 ಗ್ರಾಪಂಗಳಿಗಾಗಿ 2014-15ನೇ ಸಾಲಿಗಾಗಿ 10,480 ಕೋಟಿ ಮತ್ತು ಯೋಜನೇತರ ಕಾರ್ಯಗಳಿಗಾಗಿ 15,862 ಕೋಟಿ ಅನುದಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
10 ಸಾವಿರ ಕೋಟಿ ಅನುದಾನದಲ್ಲಿ ಎರಡು ಪ್ರಕಾರಗಳು. ಸಾಮಾನ್ಯ ಶಿಕ್ಷಣದ ವಿವಿಧ ಯೋಜನಾ ಕಾರ್ಯಕ್ರಮಗಳಿಗಾಗಿ ಸುಮಾರು 3 ಸಾವಿರ ಕೋಟಿ (2995.64) ಸಿಂಹಪಾಲು ಹಣವನ್ನ್ನು ಮೀಸಲಿಟ್ಟಿವೆ. ಎರಡನೇ ಆದ್ಯತೆ ವಸತಿ ಸೌಕರ್ಯ. ವಸತಿ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ 1019 ಕೋಟಿ ಅನುದಾನ್ನ
ತೆಗೆದಿರಿಸಿದ್ದು, ಇನ್ನುಳಿದ ಅನುದಾನದಲ್ಲಿ ವೈದ್ಯಕೀಯ ಮತ್ತು ಜನರ ಆರೋಗ್ಯ, ಗ್ರಾಮೀಣ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ಜೊತೆಗೆ ನೀರು ಸರಬರಾಜು ಮತ್ತು ನೈರ್ಮಲ್ಯ, ರಸ್ತೆ ಹಾಗೂ ಸೇತುವೆಗಳ ದುರಸ್ತಿಗಾಗಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಲು ಉದ್ದೇಶಿಸಲಾಗಿದೆ. ಯೋಜನಾ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಒಟ್ಟು 9676.07 ಕೋಟಿ ನೀಡಿದ್ದರೆ, ಕೇಂದ್ರ ಸರ್ಕಾರ 804.63 ಕೋಟಿ ಸೇರಿ ಒಟ್ಟು 10480 ಕೋಟಿ ಯೋಜನಾ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಹಣದಲ್ಲಿ ರಾಜ್ಯದ 30 ಜಿಪಂಗಳಿಗೆ 5136 ಕೋಟಿ, 176 ತಾಪಂಗಳಿಗೆ 3362 ಕೋಟಿ ಹಾಗೂ 5627 ಗ್ರಾಪಂಗಳಿಗೆ 1982 ಕೋಟಿ ಅನುದಾನ ದೊರೆಯಲಿದೆ.
ಯೋಜನೇತರ ಕಾರ್ಯಕ್ರಮಕ್ಕೆ 15 ಸಾವಿರ ಕೋಟಿ: ಆಡಳಿತಾತ್ಮಕ ವೆಚ್ಚ, ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ, ಆರೋಗ್ಯ ಇಲಾಖೆ, ಆಯುಷ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತನಕ್ಕಾಗಿ ಬಹುಪಾಲು ಹಣ ವ್ಯಯವಾಗಲಿದ್ದು, ಯೋಜನೇತರ ಕಾರ್ಯಕ್ರಮಕ್ಕಾಗಿ 2014-15ನೇ ಸಾಲಿಗಾಗಿ ಒಟ್ಟು ಜಿಪಂಗೆ 4521.04 ಕೋಟಿ, ತಾಪಂಗಳಿಗೆ 10,397.57 ಕೋಟಿ, ಗ್ರಾಪಂಗಳಿಗಾಗಿ 943.62 ಕೋಟಿ ಸೇರಿದಂತೆ ಒಟ್ಟು 15862.24 ಕೋಟಿ ಅನುದಾನ ಸ್ಥಳೀಯ ಸಂಸ್ಥೆಗಳಿಗೆ ಹರಿದು ಹೋಗಲಿದೆ.

ಭೌಗೋಳಿಕವಾಗಿ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಬೆಳಗಾವಿ ಜಿಪಂ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲಾ ಪಂಚಾಯಿತಿಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬೆಳಗಾವಿ ಜಿಲ್ಲೆಯ ಜಿಪಂ, ತಾಪಂ ಮತ್ತು ಗ್ರಾಪಂಗಳ ಯೋಜನೆ ಕಾರ್ಯಕ್ರಮಗಳಿಗಾಗಿ ಒಟ್ಟು 609.23 ಕೋಟಿ ಅತಿಹೆಚ್ಚು ಅನುದಾನ ನೀಡಿದೆ.  ಯೋಜನೇತರ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ 1387.11 ಕೋಟಿ ದೊರೆಯಲಿದೆ.
ಟಿ ಶಾಂತಾ ಕಲ್ಲೋಳಿಕರ, ಬೆಳಗಾವಿ ಜಿ.ಪಂ ಅಧ್ಯಕ್ಷೆ


(ಕೋಟಿ ಗಳಲ್ಲಿ)
ಜಿಲ್ಲಾವಾರು    ಯೋಜನಾ     ಯೋಜನೇತರ     ಅನುದಾನ     ಅನುದಾನ
ಬೆಂಗಳೂರು ನಗರ     298.77    739.51
ಬೆಂಗಳೂರು ಗ್ರಾಮೀಣ     128.94    252.90
ಚಿತ್ರದುರ್ಗ    240.13    612.46
ಕೋಲಾರ    187.22    410.40
ಶಿವಮೊಗ್ಗ    251.85    485.79
ತುಮಕೂರು    352.00    791.95
ಮೈಸೂರು    301.97    618.57
ಚಿಕ್ಕಮಗಳೂರು    190.03    392.68
ದಕ್ಷಿಣಕನ್ನ್ನಡ    204.25    383.49
ಹಾಸನ    238.06    530.79
ಕೊಡಗು    83.47    159.10
ಮಂಡ್ಯ    230.93    454.78
ಬೆಳಗಾವಿ    609.23    1387.11
ಬಿಜಾಪುರ    332.12    545.11
ಧಾರವಾಡ    207.93    406.85
ಉತ್ತರ ಕನ್ನ್ನಡ    269.42    500.31
ಗುಲ್ಬರ್ಗ    388.63    604.95
ಬಳ್ಳಾರಿ     295.97    449.10
ಬೀದರ್    221.01    530.46
ರಾಯಚೂರು    308.31    354.98
ಯಾದಗಿರಿ    157.30    189.40
ದಾವಣಗೆರೆ    238.33    510.75
ರಾಮನಗರ    145.36    258.51
ಚಿಕ್ಕಬಳ್ಳಾಪುರ    169.67    321.65
ಚಾಮರಾಜನಗರ    143.81    238.40
ಉಡುಪಿ    118.46    247.30
ಬಾಗಲಕೋಟೆ     277.11    425.30
ಗದಗ    143.74    276.38
ಹಾವೇರಿ    221.25    388.30
ಕೊಪ್ಪಳ    209.27    282.34
ಒಟ್ಟು    10,480.70    15,862.24


 ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.