ಪ್ರಧಾನ ಸುದ್ದಿ

ಸಿಎಂಗೆ 10 ಎಕರೆ ಜಮೀನು ಬೇಡಿಕೆ ಇಟ್ಟ ಸ್ವಯಂ ಘೋಷಿತ ಸ್ವಾಮೀಜಿ

ಸಿಎಂಗೆ 10 ಎಕರೆ ಜಮೀನು ಬೇಡಿಕೆ ಇಟ್ಟ ಸ್ವಯಂ ಘೋಷಿತ ಸ್ವಾಮೀಜಿ
Published On :

ಬೆಂಗಳೂರು: ಸಿದ್ದರಾಮನಹುಂಡಿಯಲ್ಲಿ 10 ಎಕರೆ ಜಾಗ ಕೊಡಿ...!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಯಂಘೋಷಿತ 'ಸರ್ವ ಧರ್ಮ' ಸ್ವಾಮಿಜಿಯೊಬ್ಬರು ಸೋಮವಾರ ಇಂಥದೊಂದು ವಿಚಿತ್ರ ಬೇಡಿಕೆ ಸಲ್ಲಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾಕ್ಕೆ ಬಂದ ರಾಮಮೂರ್ತಿ ನಾಮಾಂಕಿತ ಸರ್ವಧರ್ಮ ಸ್ವಾಮೀಜಿ ಮೂರು ಗಂಟೆಗಳ ಕಾಲ ಕಾಯ್ದು ಸಿಎಂ ಭೇಟಿಯಾಗಿ ತಮ್ಮ ವಿಚಿತ್ರ ಮನವಿ ಸಲ್ಲಿಸಿದ್ದಾರೆ. ಸಿದ್ದರಾಮನಹುಂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು.
ಮೂಲತಃ ಹಿಂದೂ ಧರ್ಮೀಯನಾದ ನಾನು ಬಡವರು, ದೀನ ದಲಿತರು, ಕುಷ್ಠ ರೋಗಿಗಳ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿದ್ದೆ. ಇದಕ್ಕೆ ಏಸುಕ್ರಿಸ್ತನೇ ನನಗೆ ಪ್ರೇರಣೆ. ಹೀಗಾಗಿ ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡೆ. ಆದರೆ ಅಲ್ಲಿ ನನ್ನ ಆಸೆ ಈಡೇರಲಿಲ್ಲ. ಹೀಗಾಗಿ ದಯವೇ ಧರ್ಮದ ಮೂಲವಯ್ಯ ಎಂದು ಬಣ್ಣಿಸಿದ ವೀರಶೈವ ಧರ್ಮವನ್ನು ಸ್ವೀಕರಿಸಿದೆ. ನಂತರ ಇಸ್ಲಾಂಗೆ ಪರಿವರ್ತನೆಗೊಂಡೆ. ಆದರೆ ಅಲ್ಲಿಯೂ ನನ್ನ ಕನಸು ನನಸಾಗದೇ ಇದ್ದುದರಿಂದ ರಾಮಕೃಷ್ಣ ಆಶ್ರಮ ಸೇರಬಯಸಿದೆ. ಆದರೆ ಎಲ್ಲೂ ನನ್ನ ಉದ್ದೇಶ ಈಡೇರಿಲ್ಲ. ಹೀಗಾಗಿ ನಿಮ್ಮಲ್ಲಿಗೆ ಬಂದಿದ್ದೇನೆ ಎಂದು ಸರ್ವಧರ್ಮಸ್ವಾಮಿ ಸಿದ್ದರಾಮಯ್ಯನವರ ಬಳಿ ತನ್ನ ಪೂರ್ವಾಪರ ವಿವರಿಸಿದ.
ಇದಕ್ಕೆ ನಾನೇನು ಮಾಡಬೇಕು? ಎಂಬ ಅರ್ಥದಲ್ಲಿ ಸಿದ್ದರಾಮಯ್ಯನವರು ಸ್ವಾಮೀಜಿ ಮುಖ ನೋಡಿದಾಗ, ನಿಮ್ಮ ಸಿದ್ದರಾಮನಹುಂಡಿಯಲ್ಲಿ 10 ಎಕರೆ ಜಾಗ ಕೊಡಿ. ಆಶ್ರಮಕಟ್ಟಿಕೊಂಡು ದಾನ-ಧರ್ಮ ಮಾಡುತ್ತೇನೆ ಎಂದು ಸ್ವಾಮಿಜೀ ಬೇಡಿಕೆ ಇಟ್ಟಾಗ, ಸಿಎಂ ಸಾಹೇಬ್ರು ಸಿಟ್ಟಾಗಿ ಆಚೆ ನಡೆದರು. ನಂತರ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ ಎಲ್ಲ ಕಡೆಯೂ ನನಗೆ ವಂಚನೆಯಾಗಿದೆ. ಯಾವ ಧರ್ಮದಲ್ಲೂ ನನ್ನ ಉದ್ದೇಶಿತ ಕಾರ್ಯ ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ ಅವರು  ಯಾವುದೇ ಆಸಕ್ತಿ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.