ಕೆ- ಸೆಟ್ ಪರೀಕ್ಷೆ ಫಲಿತಾಂಶ
ಕ.ಪ್ರ. ವಾರ್ತೆ, ಮೈಸೂರು, ಏ.28
ಮೈಸೂರು ವಿಶ್ವವಿದ್ಯಾಲಯವು ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ಫಲಿತಾಂಶವನ್ನು ಸೋಮವಾರ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಪ್ರತಿ ವಿಷಯವಾರು ಮತ್ತು ವರ್ಗವಾರು ಶೇ.15 ಅನುಪಾತದಲ್ಲಿ ಒಟ್ಟು 5,116 ಅಭ್ಯರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಅರ್ಹತೆ ನೀಡಲಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ನೀಡಿದರು. ಕೆ-ಸೆಟ್ ಪರೀಕ್ಷೆಗೆ ಸುಮಾರು 83,755 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 70,813 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸುಮಾರು ಶೇ.15 ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಉಳಿದ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಮೊದಲನೇ ಹಂತದಲ್ಲಿ ಶೇ.31.5 ರಷ್ಟು ಅಭ್ಯರ್ಥಿಗಳು ಕನಿಷ್ಠ ಅಂಕಗಳನ್ನು ಗಳಿಸಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದರು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ವಿವಿಧ ಭಾಷಾ ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮೈಸೂರು, ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಿಗೆ ಸೇರಿದವರಾಗಿದ್ದಾರೆ. ವಿಜ್ಞಾನ ವಿಷಯದಲ್ಲಿ ಮೈಸೂರು ಹಾಗೂ ಕಲೆ ವಿಷಯಗಳಲ್ಲಿ ಬೆಂಗಳೂರಿನ ಅಭ್ಯರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿ ಅರ್ಹತೆ ಪಡೆದಿದ್ದಾರೆ ಎಂದರು.
ರಾಜ್ಯದಲ್ಲಿ ಮಾತ್ರ ಅರ್ಹರು: ಕೆ-ಸೆಟ್ ಪರೀಕ್ಷೆಯಲ್ಲಿ 5,116 ಅಭ್ಯರ್ಥಿಗಳು ಉಪನ್ಯಾಸಕರಾಗಲು ಅರ್ಹತೆ ಪಡೆದಿದ್ದಾರೆ. ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಯು ಕರ್ನಾಟಕದಲ್ಲಿ ಮಾತ್ರ ಉಪನ್ಯಾಸಕ ಹುದ್ದೆಗೆ ನೇಮಕಗೊಳ್ಳುತ್ತಾರೆ. ಈ ಅರ್ಹತೆ ಪಡೆದವರಿಗೆಲ್ಲ ಕೆ-ಸೆಟ್ಅರ್ಹತಾ ಪತ್ರ ನೀಡಲಾಗುತ್ತದೆ.
ಮೈಸೂರು ವಿವಿ ಯು ನೋಡೆಲ್ ಏಜೆನ್ಸಿಯಾಗಿ ಯುಜಿಸಿ ನವದೆಹಲಿಯಿಂದ ಮಾನ್ಯತೆ ಪಡೆದಿದ್ದು, ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು 2013ರ ಡಿ.8 ನಡೆಸಿತ್ತು. ಕೆ-ಸೆಟ್ ಪರೀಕ್ಷೆಯನ್ನು 32 ವಿಷಯಗಳಲ್ಲಿ ಹಾಗೂ ಕರ್ನಾಟಕದ 11 ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬಿಜಾಪುರ, ದಾವಣಗೆರೆ, ಧಾರವಾಡ, ಗುಲ್ಪರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ನೋಡೆಲ್ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಮೈಸೂರಿನ ಕೆ-ಸೆಟ್ ಪರೀಕ್ಷೆಯು ಯುಜಿಸಿ ನಿಯಮಾನುಸಾರ, ಶಿಸ್ತು ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗಿದೆ ಎಂದು ಪ್ರೊ.ರಂಗಪ್ಪ ಹೇಳಿದರು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಿಕೆ, ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರವೇಶ ಪತ್ರ ಮುದ್ರಿಸಿಕೊಳ್ಳುವ ಅನುಕೂಲತೆ ಮಾಡಲಾಗಿತ್ತು. ಕೆ-ಎಸ್ಇಟಿ ಪರೀಕ್ಷೆಯಲ್ಲಿ ಮೂರು ಪ್ರಶ್ನೆಪತ್ರಿಕೆಗಳಿರುತ್ತವೆ. ಪತ್ರಿಕೆ-ಖ, ಪತ್ರಿಕೆ-ಖಖ ಮತ್ತು ಪತ್ರಿಕೆ-ಖಖಖರ ಪರೀಕ್ಷೆಯು ಎರಡು ಅವಧಿಗಳಲ್ಲಿ ನಡೆಯುವುದು. ಮೊದಲನೇ ಪತ್ರಿಕೆಯು ಸಾಮಾನ್ಯ ಜ್ಞಾನ ಮತ್ತು ಉಳಿದೆರಡು ಪತ್ರಿಕೆ ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದಲ್ಲಿಯೇ ಇರುತ್ತದೆ. ಮೂರು ಪತ್ರಿಕೆಗಳು ವಸ್ತುನಿಷ್ಠ ಮಾದರಿಯಲ್ಲಿರುತ್ತದೆ ಎಂದರು.
ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಆಸನದ ವ್ಯವಸ್ಥೆ, ಪ್ರಶ್ನೆ ಪತ್ರಿಕೆಯನ್ನು ಹಾಗೂ ಓಎಂಆರ್ ಹಾಳೆಯನ್ನು ವಿತರಿಸುವ ಮತ್ತು ಹಿಂಪಡೆಯುವ ವ್ಯವಸ್ಥೆಯ ನಮ್ಮ ಕೇಂದ್ರದಿಂದಲೇ ಮಾಡಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಅಂತರ್ಜಾಲದಲ್ಲಿ ನೀಡಲಾಗಿದ್ದು, ಅದರಲ್ಲಿ ಬಂದ ಕೆಲವು ತಕರಾರು ಕೀ ಉತ್ತರಗಳನ್ನು ನುರಿತ ಅಧ್ಯಾಪಕರಿಂದ ಪುನರ್ ಪರಿಶೀಲಿಸಿದ ನಂತರ ಅಂತಿಮ ಉತ್ತರ ನೀಡಲಾಯಿತು. ಅಂತಿಮ ಉತ್ತರಗಳನ್ನು ಆಧರಿಸಿ ಓಎಂಆರ್ ಹಾಳೆಯನ್ನು ಸ್ಕ್ಯಾನ್ ಮಾಡಿ ಫಲಿತಾಂಶಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಡೆಸಲಾಯಿತು ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಶ್ರೀಜಯದೇವರಾಜ ಅರಸು, ಕೆ- ಸೆಟ್ ಸಂಯೋಜನಾಧಿಕಾರಿ ಪ್ರೊ.ಬಸವಲಿಂಗು ಇದ್ದರು.
ಹೆಚ್ಚು ಅಂಕಗಳಿಸಿದವರು
- ಇಲಿಯಾಸ್ ಅಹಮ್ಮದ್ ಖಾಜಾಪುರ್ (ಧಾರವಾಡ) ಉರ್ದು ಭಾಷೆ- ಒಟ್ಟು ಅಂಕ 292 (ಶೇ. 83.43),
- ಎಸ್.ಎಂ. ಸಂಪ್ರೀತ್ (ದಾವಣಗೆರೆ) ಅರ್ಥಶಾಸ್ತ್ರ, ಒಟ್ಟು ಅಂಕ 284 (ಶೇ. 81.14),
- ಸಿ.ಎಚ್. ಪುಟ್ಟಲಕ್ಷಮ್ಮಯ್ಯ(ಶಿವಮೊಗ್ಗ) ಕನ್ನಡ, ಒಟ್ಟು ಅಂಕ- 274 (ಶೇ. 78.29),
- ರಾಮಕೃಷ್ಣ ಸಭಾಹಿತ್ (ಮೈಸೂರು) ಸಂಸ್ಕೃತ, ಒಟ್ಟು ಅಂಕ-272 (ಶೇ.77.71),
- ಎ. ಪ್ರತಿಮಾ(ಮೈಸೂರು) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಒಟ್ಟು ಅಂಕ- 268 (ಶೇ. 76.57),
- ಟಿ. ಮೇಘನಾ(ಮೈಸೂರು) ಮನೋವಿಜ್ಞಾನ, ಒಟ್ಟು ಅಂಕ- 268 (ಶೇ. 76.57),
- ಎಸ್.ಪಿ. ಸುಮಾ(ಮೈಸೂರು) ಭೌತಿಕ ವಿಜ್ಞಾನ, ಒಟ್ಟು ಅಂಕ- 246 (ಶೇ. 70.29).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

