ಪ್ರಧಾನ ಸುದ್ದಿ

ನಿಲೇಕಣಿ ಆಸ್ತಿ ಹಂಚಿಕೆಗೆ ಸಾಹಿತಿಗಳು ಆಗ್ರಹಿಸಲಿ

Published On :

ಮೈಸೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಂದನ್ ನಿಲೇಕಣಿ ಒಂದು ಪಕ್ಷ ಗೆದ್ದರೆ, ಅವರ ಆಸ್ತಿಯ ಮುಕ್ಕಾಲು ಭಾಗವನ್ನು ಜನರಿಗೆ ಹಂಚುವಂತೆ ಅವರ ಪರ ಪ್ರಚಾರ ಮಾಡಿರುವ ಸಾಹಿತಿಗಳು ಆಗ್ರಹಿಸಬೇಕು ಎಂದು ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಒತ್ತಾಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಶ್ರೀಮಂತರಲ್ಲಿ ನಂದನ್ ನಿಲೇಕಣಿ ಕೂಡ ಒಬ್ಬರು. ಅವರು ಜನಪ್ರತಿನಿಧಿಯಾದ ಮೇಲೆ ಜನರ ಸೇವೆ ಮಾಡಬೇಕಾಗುತ್ತದೆ. ಮಿತಿಗಿಂತ ಹೆಚ್ಚು ಆಸ್ತಿ ಹೊಂದುವ ಹಾಗಿಲ್ಲ. ಆದ್ದರಿಂದ ಅವರು ಆಸ್ತಿಯಲ್ಲಿ ಮುಕ್ಕಾಲು ಭಾಗವನ್ನು ಸಮಾಜಕ್ಕೆ ವಿನಿಯೋಗಿಸುವಂತೆ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ ದನಿ ಎತ್ತಬೇಕು. ಹೀಗೆ ದೇಶಾದ್ಯಂತ ಇರುವ ಶ್ರೀಮಂತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅನಂತ ಪದ್ಮನಾಭ ದೇವಾಲಯದಲ್ಲಿರುವ ಹಣವನ್ನು ಜನರ ಏಳಿಗೆಗಾಗಿ ಖರ್ಚು ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.