ಪ್ರಧಾನ ಸುದ್ದಿ

ಟಿವಿ ನಿರೂಪಕಿಯ ಜೊತೆ ದಿಗ್ವಿಜಯ್ ಸಿಂಗ್ ಪ್ರಣಯ, ಮದುವೆಗೆ ಟ್ವಿಟರ್‌ನಲ್ಲೇ ಮುಹೂರ್ತ, ಡಿಗ್ಗಿಗೆ ಮಕ್ಕಳು, ಅಮೃತಾಗೆ ಗಂಡ ಅಡ್ಡಿ

ಟಿವಿ ನಿರೂಪಕಿಯ ಜೊತೆ ದಿಗ್ವಿಜಯ್ ಸಿಂಗ್ ಪ್ರಣಯ, ಮದುವೆಗೆ ಟ್ವಿಟರ್‌ನಲ್ಲೇ ಮುಹೂರ್ತ, ಡಿಗ್ಗಿಗೆ ಮಕ್ಕಳು, ಅಮೃತಾಗೆ ಗಂಡ ಅಡ್ಡಿ
Published On :

ನವದೆಹಲಿ: 'ನಾನು ವಿಧುರ, ಒಂದೊಮ್ಮೆ ನಾನು ಮರುಮದುವೆಯಾಗುವುದಾದರೆ ನಿಮ್ಮಂತೆ ಅಡಗಿಸಿಡಲ್ಲ ಫೇಕು!'
ಇದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಬುಧವಾರವಷ್ಟೇ 'ಇನ್ನೊಮ್ಮೆ ಮದುವೆಯಾಗುವೆ' ಎಂದು ಘೋಷಿಸಿಕೊಂಡಿರುವ ದಿಗ್ವಿಜಯ ಸಿಂಗ್(69) ಅವರ ನರೇಂದ್ರ ಮೋದಿ ಕುರಿತಾದ ಟ್ವೀಟ್. ಚುನಾವಣಾ ಅಫಿಡವಿಟ್‌ನಲ್ಲಿ ಮೋದಿ ಪತ್ನಿ ಹೆಸರು ನಮೂದಿಸಿದಾಗ ಇಂಥ ಟೀಕೆ ಮಾಡಿದ್ದ ಡಿಗ್ಗಿ, ಇದೀಗ ಅಕ್ರಮ(?) ಅಥವಾ ಮದುವೆಯಾಚೆಗಿನ ಸಂಬಂಧ ಇಟ್ಟುಕೊಂಡಿರುವ ಸಲುವಾಗಿ ಸುದ್ದಿಯಾಗಿದ್ದಾರೆ.  ಕೆಲ ದಿನಗಳಿಂದ ದಿಗ್ವಿಜಯ ಸಿಂಗ್ ಮತ್ತು ರಾಜ್ಯಸಭಾ ಟಿವಿ ನಿರೂಪಕಿ ಅಮೃತಾ ರಾಯ್ ನಡುವಿನ ತೀರಾ ಕ್ಲೋಸ್ ಫೋಟೋಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಬುಧವಾರ ಸ್ಪಷ್ಟನೆ ನೀಡಿದ್ದು, ನಾವಿಬ್ಬರು ಸದ್ಯದಲ್ಲೇ ವಿವಾಹವಾಗುವುದಾಗಿ ಟ್ವೀಟಿಸಿಕೊಂಡಿದ್ದಾರೆ. ಅಲ್ಲದೆ ಇದು ನಮ್ಮಿಬ್ಬರ 'ಖಾಸಗಿ' ವಿಚಾರ. ಈ ಬಗ್ಗೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಸಿಡಿಮಿಡಿಗೊಂಡಿದ್ದಾರೆ.     

ಮೂಲಗಳ ಪ್ರಕಾರ ಇವರಿಬ್ಬರ ವಿವಾಹಕ್ಕೆ ಡಿಗ್ಗಿ ಮನೆಯವರ ಅಡ್ಡಿ ಇದೆ. ಐವರು ಮಕ್ಕಳ ತಂದೆಯಾಗಿರುವ ದಿಗ್ವಜಯ ಸಿಂಗ್ ಅವರ ಒಬ್ಬ ಪುತ್ರ ಶಾಸಕ ಕೂಡ. ತಮ್ಮ ತಂದೆ ಅಮೃತಾ ರಾಯ್ ಅವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಗೊತ್ತಾದ ಕೂಡಲೇ ಕೋಪಿಸಿಕೊಂಡಿದ್ದಾರೆ. ಇಂಥ ವಯಸ್ಸಲ್ಲಿ ಏಕೆ ವಿವಾಹ ಎಂದು ಕಳೆದ 6 ತಿಂಗಳ ಹಿಂದೆಯೇ ಕೇಳಿದ್ದರು ಎಂಬುದು ಆಂಗ್ಲ ವಾಹಿನಿಯೊಂದರ ಸುದ್ದಿ.
ಇನ್ನು ಅಮೃತಾ ರಾಯ್ ಅವರಿಗೆ ಸ್ವತಃ ತಮ್ಮ ಪತಿಯ ಅಡ್ಡಿ ಇದೆ. ಏಕೆಂದರೆ ಇನ್ನೂ ಇವರಿಬ್ಬರ ನಡುವೆ ಡೈವೋರ್ಸ್ ಆಗಿಲ್ಲ. ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಸಿಗುತ್ತೆ ಎಂದು ಅಮೃತಾ ಹೇಳಿಕೊಂಡಿದ್ದಾರೆ.
ದಿಗ್ವಿಜಯ ಸಿಂಗ್ ಅವರ ಪತ್ನಿ ವರ್ಷದ ಹಿಂದಷ್ಟೇ ಕ್ಯಾನ್ಸರ್‌ನಿಂದಾಗಿ ಸಾವಿಗೀಡಾಗಿದ್ದರು. ವಿಚಿತ್ರವೆಂದರೆ ಇವರ ಪ್ರೇಮಪುರಾಣ ಆರಂಭವಾಗಿರುವುದು 6 ತಿಂಗಳಿಂದ! ಈ ವಿಚಾರ ಟ್ವಿಟರ್‌ನಲ್ಲಿ ಬಹುವಾಗಿಯೇ ಚರ್ಚೆಯಾಗಿದೆ.
ಅಬ್ಬಾ, ಈ ಪ್ರೇಮಪುರಾಣ ನೋಡಲು ಅವರ ಹೆಂಡತಿ ಬದುಕಿಲ್ಲವಲ್ಲ ಎಂದು ಒಬ್ಬರು ಟ್ವೀಟಿಸಿದರೆ, ಇನ್ನೂ ಡೈವೋರ್ಸ್ ಸಿಗದ ಮಹಿಳೆ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಕೆಲವರು ಟ್ವೀಟ್‌ನಲ್ಲೇ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅವರ ಮಹಿಳೆಯರ ಸಬಲೀಕರಣ ಎಂದರೆ ಇದೇ ಇರಬೇಕು, ದಿಗ್ವಿಜಯ ಸಿಂಗ್ ಸರಿಯಾಗಿಯೇ ಪಾಲಿಸುತ್ತಿದ್ದಾರೆ ಎಂಬುದು ಮತ್ತೊಬ್ಬರ ವ್ಯಂಗ್ಯ ಮಿಶ್ರಿತ ಟ್ವೀಟ್!

'ಅಮೃತಾರಾಯ್ ಜೊತೆಗಿನ ಸಂಬಂಧದ
ಬಗ್ಗೆ ಹೇಳಿಕೊಳ್ಳಲು ಹಿಂಜರಿಯಲ್ಲ.
ಅಮೃತಾ ರಾಯ್ ದಂಪತಿ ಡೈವೋರ್ಸ್‌ಗೆ
 ಅಪ್ಲೆ ೈ ಮಾಡಿದ್ದಾರೆ. ಬಳಿಕ ಮದುವೆಯಾಗುತ್ತೇವೆ'.
- ದಿಗ್ವಿಜಯ ಸಿಂಗ್

'ಈಗಾಗಲೇ ನಾನು ಪತಿಯಿಂದ ದೂರಾಗಿ, ಪರಸ್ಪರ ಸಮ್ಮತಿಯಿಂದಲೇ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಬಳಿಕವಷ್ಟೇ ನಾನು ದಿಗ್ವಿಜಯ ಸಿಂಗ್ ಮದುವೆಯಾಗಲು ನಿರ್ಧರಿಸಿದೆ'.   
- ಅಮೃತಾ ರಾಯ್


ಅಮೃತಾ ರಾಯ್ ಜತೆಗಿದ್ದ ಸಂಬಂಧವನ್ನು ದಿಗ್ವಿಜಯ ಸಿಂಗ್ ಒಪ್ಪಿಕೊಂಡಿದ್ದಾರೆ. ಇದು ರಾಹುಲ್ ಗಾಂಧಿ ಮಾತನಾಡುವ ಕಾಂಗ್ರೆಸ್-ಶೈಲಿಯ ಮಹಿಳಾ ಸಬಲೀಕರಣವೇ? 
 -ಕಿರಣ್ ಕುಮಾರ್ ಎಸ್

ಪತ್ರಕರ್ತೆ ಅಮೃತಾ ರಾಯ್ ಜತೆಗಿದ್ದ ಸಂಬಂಧವನ್ನು ದಿಗ್ವಿಜಯ ಸಿಂಗ್ ಒಪ್ಪಿಕೊಂಡಿದ್ದಾರೆ. ಈ ದಿನ ನೋಡಲು ಅವರ ಪತ್ನಿ ಬದುಕದೇ ಇದ್ದಿದ್ದು ಒಳ್ಳೆಯದೇ ಆಯಿತು.                         
- ಮಮತಾ ದಾಸ್

ಕಪಟವೇಷಧಾರಿ ದಿಗ್ವಿಜಯ ಸಿಂಗ್ ಮೋದಿ ಪತ್ನಿ ಬಗ್ಗೆ ಮಾತನಾಡುತ್ತಲೇ ಇದ್ದರು. ಆದರೆ ತನ್ನ ಪತ್ನಿ ಬದುಕಿದ್ದಾಗಲೇ ಅಮೃತಾ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಒಂದು ಬಾರಿ ಕೂಡ ಮಾತನಾಡಲೇ ಇಲ್ಲ.
-ಮನೀಷ್ ತ್ರಿವೇದಿ

ಪ್ರೀತಿಯ ದಿಗ್ವಿಜಯ ಸಿಂಗ್, ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ಬೇರೆಯವರು ಮಾತನಾಡುವುದು ತಾಳದೇ ಇದ್ದಾಗ, ನೀವು ಕೂಡಾ ಇದನ್ನೇ ಮಾಡುತ್ತಿದ್ದಿರಿ ಅನ್ನೋದು ಗೊತ್ತಾಗುತ್ತದೆ!      
 - ಅಶೋಕ್

ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ವಿಚ್ಛೇದನೆಗೆ ಮೊರೆ ಹೋದ ನಂತರ ನಿಮ್ಮ ಸಂಬಂಧ ಬೆಳೆಯಿತೇ? ಅಥವಾ ನಿಮ್ಮ ಸಂಬಂಧದಿಂದಾಗಿ ವಿಚ್ಛೇದನ ಮೊರೆ ಹೋಗಬೇಕಾಯಿತೇ?            
 - ಅತುಲ್ ಜೈನ್

ಎರಡು ದಿನಗಳ ಹಿಂದೆ ತನ್ನ ಮೊಮ್ಮಗಳ ಮದುವೆಯಲ್ಲಿ ಪಾಲ್ಗೊಂಡವನು ಈಗ ತನ್ನ ಮದುವೆಯ ವಿಚಾರ ಘೋಷಿಸಿದ್ದಾನೆ. ಚೆನ್ನಾಗಿದೆ.                             
- ಶಿಶಿರ್ ಹೆಗಡೆ

ದಿಗ್ವಿಜಯ ಸಿಂಗ್ ಚಾಚಾ... ಅವಳಿನ್ನೂ ವಿಚ್ಛೇದನೆ ಪಡೆದಿಲ್ಲ. ಪರರ ಪತ್ನಿಯ ಜತೆ ಅಕ್ರಮ ಸಂಬಂಧವಿಟ್ಟಕೊಂಡ ನಿಮಗೆ ನಾಚಿಕೆಯಾಗಬೇಕು.                                      
 - ಮುಕೇಶ್ ದವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.