ಪ್ರಧಾನ ಸುದ್ದಿ

ಮಾವು, ತರಕಾರಿಗಳ ಮೇಲಿನ ನಿಷೇಧ ತೆರವಿಗೆ ಭಾರತ ಮನವಿ

Published On :

ನವದೆಹಲಿ: ಆಲ್ಫೊನ್ಸೊ ಮಾವು ಹಾಗೂ ತರಕಾರಿಗಳ ಮೇಲೆ ಹೇರಲಾಗಿರುವ ನಿಷೇಧ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಐರೋಪ್ಯ ಒಕ್ಕೂಟಕ್ಕೆ ಮನವಿ ಮಾಡಿದೆ.
ಕೀಟನಾಶಕಗಳು ಮತ್ತು ಕೀಟಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಲ್ಫೊನ್ಸೊ ಹಾಗೂ ಕೆಲ ತರಕಾರಿಗಳ ಆಮದಿನ ಮೇಲೆ ಮೇ1ರಿಂದ ಡಿಸೆಂಬರ್ 2015ರ ವರೆಗೆ ನಿಷೇಧ ಹೇರಿ ಐರೋಪ್ಯ ಒಕ್ಕೂಟ ಆದೇಶ ಹೊರಡಿಸಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ರಫ್ತು ಮಾಡುವ ಮಾವು ಹಾಗೂ ತರಕಾರಿಗಳ ಪರೀಕ್ಷೆಯನ್ನು ತೀವ್ರಗೊಳಿಸಿದ್ದೇವೆ ಮತ್ತು ಪ್ರಮಾಣೀಕರಣ ಕಾರ್ಯವನ್ನೂ ಆರಂಭಿಸಿದ್ದೇವೆ ಎಂದು ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್(ಎಫ್‌ಐ ಇಒ)ನ ಮಹಾ ನಿರ್ದೇಶಕ ಅಧ್ಯಕ್ಷ ಅಜಯ್ ಸಹಾಯ್ ಹೇಳಿದ್ದಾರೆ. ಇದೇ ವೇಳೆ, ನಿಷೇಧ ತೆರವಿಗೆ ಸಂಬಂಧಿಸಿ ಎಫ್‌ಐಇಒ ಮತ್ತು ವಾಣಿಜ್ಯ ಸಚಿವಾಲಯ ಈ ಸಂಬಂಧ ಐರೋಪ್ಯ ಒಕ್ಕೂಟದ ಜತೆಗೆ ಮಾತುಕತೆ ನಡೆಸಿದೆ ಎಂದೂ ಸಹಾಯ್ ಮಾಹಿತಿ ನೀಡಿದ್ದಾರೆ. ಭಾರತೀಯ ಮಾವುಗಳಿಗೆ ಯುರೋಪ್ ಅತಿದೊಡ್ಡ ಮಾರುಕಟ್ಟೆಯಲ್ಲ. ಆದರೂ ಐರೋಪ್ಯ ಒಕ್ಕೂಟದ ನಿಷೇಧ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಈಗಾಗಲೇ ಶೇ.15ರಷ್ಟು ಕುಸಿತ ಕಂಡಿದೆ ಎಂದು ಸಹಾಯ್  ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.