ಪ್ರಧಾನ ಸುದ್ದಿ

ಆದ್ಯತಾ ಕ್ಷೇತ್ರಕ್ಕೆ 89,821 ಕೋಟಿ ಸಾಲ: ಸಿಂಡಿಕೇಟ್ ಬ್ಯಾಂಕ್ ಗುರಿ

ಆದ್ಯತಾ ಕ್ಷೇತ್ರಕ್ಕೆ 89,821 ಕೋಟಿ ಸಾಲ: ಸಿಂಡಿಕೇಟ್ ಬ್ಯಾಂಕ್ ಗುರಿ
Published On :

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಆದ್ಯತಾ ಕ್ಷೇತ್ರಕ್ಕೆ 89,821 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆಂಜನೇಯ ಪ್ರಸಾದ್ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2014-15 ನೇ ಸಾಲಿನಲ್ಲಿ 89,821 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ಕೃಷಿ ಕ್ಷೇತ್ರಕ್ಕೆ ನೀಡಲಾಗುವ 57,247 ಕೋಟಿಯಲ್ಲಿ ಬೆಳೆ ಸಾಲಕ್ಕೆ 39,252 ಕೋಟಿ ಮೀಸಲಿಟ್ಟಿದ್ದು, ಒಟ್ಟು ಶೇ.68.57 ಪಾಲು ಕೃಷಿ ಸಾಲಕ್ಕೆ ನೀಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 16,930 ಕೋಟಿ ಹಾಗೂ ಸೇವಾ ಕ್ಷೇತ್ರಕ್ಕೆ 15,643 ಕೋಟಿ ಸಾಲ ನೀಡುವ ಗುರಿಯಿದೆ ಎಂದರು.
ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆಯಂತೆ 7.50 ಕೋಟಿ ಕುಟುಂಬಗಳ ಖಾತೆ ತೆರೆಯಲು ಉದ್ದೇಶಿಸಲಾಗಿದೆ.
ಮೊದಲ ಹಂತದಲ್ಲಿ ಸಮಗ್ರ ಬ್ಯಾಂಕಿಂಗ್ ಸೇವೆ, ಪ್ರಾಥಮಿಕ ಬ್ಯಾಂಕ್ ಖಾತೆ, 12 ತಿಂಗಳ ನಂತರ ಓವರ್ ಡ್ರಾಫ್ಟ್ ನೀಡಲಾಗುವುದು. ಎರಡನೇ ಹಂತದಲ್ಲಿ ಸಾಲ ಭದ್ರತಾ ನಿಧಿ ಸ್ಥಾಪನೆ, ಕಿರು ವಿಮೆ ನೀಡಲಾಗುವುದು ಎಂದರು.
'ಭೂಮಿ-ಬ್ಯಾಂಕ್ ವಿಲೀನ' ರಾಜ್ಯಾದ್ಯಂತ ಜಾರಿಯಾಗಿದ್ದು, ಆನ್‌ಲೈನ್ ಮೂಲಕ 1,39,677 ವ್ಯವಹಾರ ನಡೆಸಲಾಗಿದೆ. ಕಂದಾಯ ಇಲಾಖೆಯು 'ನಮ್ಮ ಭೂಮಿ ಯೋಜನೆಯಡಿ ಏಕಕಾಲಕ್ಕೆ ಭೂ ದಾಖಲೆ ಹಾಗೂ ಋಣಭಾರ ಪ್ರಮಾಣಪತ್ರಗಳಲ್ಲಿ ಸಾಲ ನೋಂದಣಿ ಮಾಡಲು ಪ್ರಯತ್ನಿಸುತ್ತಿದ್ದು, 'ಭೂಮಿ ಮತ್ತು ಕಾವೇರಿ' ಯೋಜನೆಗಳನ್ನು ಒಂದುಗೂಡಿಸಲಾಗಿದೆ. ಇದರ ನಿರ್ವಹಣೆಗೆ ತಂತ್ರಾಂಶ ಸಲಹೆಗಾರರನ್ನು ನೇಮಿಸಲಾಗಿದೆ ಎಂದರು. ರಾಜ್ಯ ಅಭಿವೃದ್ಧಿ ಆಯುಕ್ತ ಜಿ.ವಿ.ಕೃಷ್ಣರಾವ್, ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕ ಉಮಾ ಶಂಕರ್, ನಬಾರ್ಡ್ ಮುಖ್ಯ ಮಹಾಪ್ರಬಂಧಕಿ ಜಿ.ಆರ್.ಚಿಂತಲಾ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.