ಕೆಪಿಎಸ್ಸಿ ಸದಸ್ಯರೊಬ್ಬರಿಗೆ ಸಿಎಂ 72 ಬಾರಿ ಕರೆ ಮಾಡಿದ್ದೇಕೆ?

ಬೆಂಗಳೂರು: 2011ರ ಕೆಪಿಎಸ್ಸಿ ಸಂದರ್ಶನ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಎಸ್ಸಿ ಸದಸ್ಯರಿಗೆ 72 ಬಾರಿ ಕರೆ ಮಾಡಿದ್ದು ಏಕೆ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೆಪಿಎಸ್ಸಿ ನೇಮಕಾತಿಯನ್ನು ರದ್ದು ಪಡಿಸಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಂದರ್ಶನ ವೇಳೆ ಕೆಪಿಎಸ್ಸಿ ಸದಸ್ಯರೊಬ್ಬರಿಗೆ ಕರೆ ಮಾಡಿದ್ದು ಏಕೆ? ಅದನ್ನು ಮೊದಲು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ನೇಮಕಾತಿ ಕುರಿತಂತೆ ಕೆಪಿಎಸ್ಸಿ ಸದಸ್ಯೆ ಮಂಗಳ ಶ್ರೀಧರ್ ಸಹಾಯಕ ಅಶೋಕ್ಗೆ ಡಾ. ಮೈತ್ರಿ ಕರೆ ಮಾಡಿದ್ದು ಯಾಕೆ ಇವೆಲ್ಲಾ ಪ್ರಶ್ನೆಗಳಿಗೆ ಸಿಎಂ ಬಳಿ ಉತ್ತರವಿದೆಯೇ? ಕೆಪಿಎಸ್ಸಿ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿ ಸಿಎಂ ಕರೆ ಮಾಡಿರುವ ವಿಷಯದ ಕುರಿತು ಯಾಕೆ ಉಲ್ಲೇಖಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
2011ರ ಕೆಪಿಎಸ್ಸಿ ಪರೀಕ್ಷೆಯನ್ನು ಗೃಹ ಸಚಿವ ಸಚಿವ ಕೆ.ಜೆ. ಜಾರ್ಜ್ರ ಸಲಹೆಗಾರ ಕೆಂಪಯ್ಯ ಅವರ ಸಂಬಂಧಿ ಚಂದ್ರಶೇಖರ್ ಎಂಬುವರು ಬರೆದಿದ್ದರು. ಆದರೆ ನೇಮಕಾತಿ ಪಟ್ಟಿಯಲ್ಲಿ ಚಂದ್ರಶೇಖರ್ ಹೆಸರು ಇಲ್ಲದೆ ಇರುವುದರಿಂದ ಸರ್ಕಾರ ಈ ಪಟ್ಟಿಯನ್ನು ರದ್ದು ಪಡಿಸಿ ಅಧಿಕಾರ ದುರುಪಯೋಗ ಮಾಡಿದೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
ಕೆಪಿಎಸ್ಸಿ ನೇಮಕಾತಿ ರದ್ದು ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ. ಆ ಅಧಿಕಾರ ಇರುವುದು ವಿಧಾನಸಭೆ, ವಿಧಾನಪರಿಷತ್ಗೆ ಮಾತ್ರ. ಹೀಗಾಗಿ ಕೆಪಿಎಸ್ಸಿ ನೇಮಕಾತಿಯನ್ನು ಏಕಾಏಕಿ ರದ್ದು ಪಡಿಸಿರುವ ಸರ್ಕಾರದ ಕ್ರಮದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


