ಪ್ರಧಾನ ಸುದ್ದಿ

ಎಚ್‌ಡಿಕೆ ಅಕ್ರಮವಾಗಿ ದಲಿತರ ಭೂಮಿ ಖರೀದಿಸಿದ್ದಾರೆ: ಸಿದ್ದಪ್ಪ

ಎಚ್‌ಡಿಕೆ ಅಕ್ರಮವಾಗಿ ದಲಿತರ ಭೂಮಿ ಖರೀದಿಸಿದ್ದಾರೆ: ಸಿದ್ದಪ್ಪ
Published On :

ರಾಮನರಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಕೇತಗಾನಹಳ್ಳಿಯಲ್ಲಿ ಬಡವರಿಗೆ ಹಾಗೂ ದಲಿತರಿಗೆ ಮಂಜೂರಾಗಿದ್ದ 200 ಎಕರೆ ಭೂಮಿಯನ್ನು ಅಕ್ರಮವಾಗಿ ಖರೀಸಿದ್ದಾರೆ ಎಂದು ರಾಮನಗರ ಉಪ ವಿಭಾಗಾಧಿಕಾರಿ ಬಿ.ಎಚ್.ಸಿದ್ದಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದಪ್ಪ, ಸರ್ವೇ ನಂ. 6, 7, 8, 9, 10, 16 ಹಾಗೂ 17ರಲ್ಲಿ ಭೂ ರಹಿತರಿಗೆ ಮಂಜೂರಾಗಿದ್ದ ಭೂಮಿಯನ್ನು ಕುಮಾರ­ಸ್ವಾಮಿ ಅಕ್ರಮವಾಗಿ ಖರೀದಿಸಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ದೂರಿದರು.

ಭೂ ಮಂಜೂರಾತಿ ಬಗ್ಗೆ ಕಡತಗಳನ್ನು ಹುಡುಕಿದರೆ ತಾಲ್ಲೂಕು ಕಚೇರಿಯಲ್ಲಿ ಒಂದೇ ಒಂದು ಕಡತ ಇಲ್ಲ. ಈ ಭೂಮಿಗೆ ಸಂಬಂಧಿಸಿದ ಎಲ್ಲ ಕಡತಗಳು ಕಣ್ಮರೆಯಾಗಿವೆ. ಆದ್ದರಿಂದ, ಸರ್ಕಾರ ಮಧ್ಯ ಪ್ರವೇಶಿಸಿ ಈ ಭೂಮಿಯನ್ನು ಕೂಡಲೇ ಮುಟ್ಟು­ಗೋಲು ಹಾಕಿಕೊಳ್ಳಬೇಕು' ಎಂದರು.

2011ರ ಕೆಪಿಎಸ್‌ಸಿ ಆಯ್ಕೆ ಪಟ್ಟಿ ರದ್ದು ಸಂಬಂಧ ದೂರುದಾರರಾದ ಡಾ.ಮೈತ್ರಿ ಅವರ ತಂದೆ ಎನ್ನುವ ಕಾರಣಕ್ಕೆ ತಮ್ಮ ಹೆಸರನ್ನು ಕುಮಾರಸ್ವಾಮಿ ಅವರು ಅನಗತ್ಯವಾಗಿ ವಿವಾದಕ್ಕೆ ಎಳೆ ತಂದಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಅವಧಿಯಿಂದಲೂ ಗೌಡರ ಕುಟುಂಬದ ಆಸ್ತಿಯಂತಾಗಿದ್ದ ಕೆಪಿಎಸ್‌ಸಿ ಈಗಷ್ಟೇ ಹೊರ ಬಂದಿದೆ ಎಂದು ಸಿದ್ದಪ್ಪ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಅಕ್ರಮವಾಗಿ ಜಮೀನು ಖರೀದಿಗೆ ಸಂಬಂಧಿಸಿ 1987ರಿಂದಲೂ ವಿವಾದವಿದೆ. ಪ್ರಸ್ತುತ ಪ್ರಕರಣ ಲೋಕಾಯುಕ್ತ ನ್ಯಾಯಾಲಯದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಕಡತಗಳೇ ಲಭ್ಯವಿಲ್ಲದ ಕಾರಣ ಜಮೀನನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಬೇಕು. ಇಲ್ಲವೇ ಸರ್ಕಾರ ವಶಕ್ಕೆ ಪಡೆಯಬೇಕು. ಬೆಂಗಳೂರು ದಕ್ಷಿಣ, ಬಿಡದಿಯಲ್ಲೂ ಕುಮಾರಸ್ವಾಮಿ ಸಾವಿರಾರು ಎಕರೆ ಅಕ್ರಮ ಆಸ್ತಿ ಮಾಡಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಬೇಕಿದೆ. ತಮ್ಮ ತೇಜೋವಧೆ ಮಾಡುತ್ತಿರುವ ಅವರು ಬಡ ಪ್ರತಿಭಾವಂತರಿಗಾದ ಅನ್ಯಾಯದ ಬಗ್ಗೆ ಚಕಾರವೆತ್ತುತ್ತಿಲ್ಲ ಏಕೆ? ಎಂದು ರಾಮನಗರ ಎಸಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.