ಚರಿತ್ರೆಯ ಪುಟಕ್ಕೆ ಕೊಲೀಜಿಯಂ

Published On :
ನ್ಯಾಯಮೂರ್ತಿಗಳ ನೇಮಕ ಸಮಿತಿ(ಕೊಲೀಜಿಯಂ) ಬದಲಿಗೆ ಇನ್ನು ಆಯೋಗ, ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಗುರುವಾರ ಅಂಗೀಕಾರ ಸಿಕ್ಕಿದೆ. ರಾಷ್ಟ್ರಪತಿಗಳ ಸಹಿಯ ಬಳಿಕ ಅದು ಕಾನೂನಾಗಿ ಮಾರ್ಪಾಡಾಗಲಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತಂದಿರುವುದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದು.
ಪ್ರಮುಖ ಅಂಶಗಳು
- ಈಗಿರುವ ಕೊಲಿಜಿಯಂ ಬದಲಿಗೆ, ಆರು ಸದಸ್ಯರ ಆಯೋಗ, ಅದರ ಶಿಫಾರಸಿನ ಮೇರೆಗೆ ಸುಪ್ರೀಂ ಹಾಗೂ ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನೇಮಕ.
- ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವ. ಇಬ್ಬರು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು, ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಹಾಗೂ ಕೇಂದ್ರ ಕಾನೂನು ಸಚಿವ
- ಹೊಸದಾಗಿ ಬರಲಿರುವ ಸಮಿತಿಯ ಕಾರ್ಯವಿಧಾನ ಬದಲಿಸಲು ಮುಂದಿನ ಸರ್ಕಾರಗಳು ಕೈಗೊಳ್ಳಬಹುದಾದ ಕ್ರಮಗಳು ಸರಳವಾಗಿರದಂತೆ ಸಂವಿಧಾನದಲ್ಲೇ ತಿದ್ದುಪಡಿ.
- ಸುಪ್ರೀಂ ಕೋರ್ಟ್ನ ಮುಖ್ಯ ನಾಯಮೂರ್ತಿಗಳು, ಪ್ರಧಾನ ಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಅಥವಾ ಅತಿದೊಡ್ಡ ಪ್ರತಿಪಕ್ಷದ ನಾಯಕರಿಂದ ಸದಸ್ಯರ ನೇಮಕ
- ಎಸ್ಸಿ, ಎಸ್ಟಿ ಒಬಿಸಿ ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಒಬ್ಬ ಸದಸ್ಯರನ್ನು ನೇಮಕ ಮಾಡಲು ಅವಕಾಶ
- ಪ್ರತಿ ಸದಸ್ಯರ ಸದಸ್ಯತ್ವ ಅವಧಿ ಮೂರು ವರ್ಷ ಮೀರುವಂತಿಲ್ಲ. ಅವಧಿ ಮೀರಿದವರನ್ನು ಸದಸ್ಯರನ್ನಾಗಿ ಮರುನಾಮ ನಿರ್ದೇಶನ ಮಾಡುವಂತಿಲ್ಲ.
- ಯಾವುದೇ ಇಬ್ಬರು ಸದಸ್ಯರು ಅಪಸ್ವರ ಎತ್ತಿದರೆ, ಅಂಥ ಹೆಸರುಗಳು ಶಿಫಾರಸುಗೊಳ್ಳುವಂತಿಲ್ಲ.
- ಶಿಫಾರಸುಗೊಂಡ ಹೆಸರುಗಳ ಪಟ್ಟಿಯನ್ನು ರಾಷ್ಟ್ರಪತಿ, ಮರುಪರಿಶೀಲನೆಗಾಗಿ ಸಮಿತಿಗೆ ವಾಪಸ್ ಕಳುಹಿಸಬಹುದು.
ಹಾಲಿ ವ್ಯವಸ್ಥೆ ಬಗ್ಗೆ ಒಂದಿಷ್ಟು
- ಸುಪ್ರೀಂ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪ ತಪ್ಪಿಸಲು 1993ರಲ್ಲಿ ಕೊಲಿಜಿಯಂ ವ್ಯವಸ್ಥೆ ಜಾರಿ.
- ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಹೈಕೋರ್ಟ್ಗಳ ಮೂವರು ವರಿಷ್ಠ ನ್ಯಾಯಮೂರ್ತಿಗಳ ಕೊಲಿಜಿಯಂ
- ವಕೀಲರು ಅಥವಾ ಕೆಳಹಂತದ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಹೆಸರುಗಳನ್ನು ಸುಪ್ರೀಂ, ಹೈಕೋರ್ಟ್ಗಳಿಗೆ ನೇಮಿಸಲು ಹಾಲಿ ಸಮಿತಿಗೆ ಅಧಿಕಾರ
- ಶಿಫಾರಸ್ಸಿನ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದರೂ, ಸುಪ್ರೀಂ ಕೋರ್ಟ್ ಪುರಸ್ಕರಿಸಿದರೆ, ಕೇಂದ್ರ ಸರ್ಕಾರ ಒಪ್ಪಲೇಬೇಕಾದ ಅನಿವಾರ್ಯತೆ.
ಅನುಕೂಲಗಳು
- ಕೆಳ ಹಂತದ ನ್ಯಾಯಾಧೀಶರ ಸಾಮರ್ಥ್ಯದ ಅರಿವಿನ ನೆರವಿನಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗಳಿಗೆ ಆರಿಸುವವರ ಬಗ್ಗೆ ಸ್ಪಷ್ಟ ಅರಿವು
- ವಕೀಲರ ಅಥವಾ ಕೆಳಹಂತದ ನ್ಯಾಯಮೂರ್ತಿಗಳ ಸಾಮರ್ಥ್ಯವೇ ಪ್ರಮುಖ ಆಧಾರ
- ಆಯ್ಕೆ ವಿಚಾರದಲ್ಲಿ ಕೊಲಿಜಿಯಂಗೆ ಸಂಪೂರ್ಣ ಸ್ವಾತಂತ್ರ್ಯ, ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ
- ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ತ್ವರಿತ.
- ಈಗಿರುವ ವ್ಯವಸ್ಥೆಯಂತೆ, ನ್ಯಾಯಮೂರ್ತಿಗಳು ಚರ್ಚಿಸಿ, ತೀರ್ಮಾನ ಕೈಗೊಳ್ಳುವಂತಿಲ್ಲ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳಿಗೆ ಪ್ರತಿಯೊಂದು ಹೆಸರನ್ನು ಶಿಫಾರಸು ಮಾಡುವಾಗಲೂ ಕಾನೂನೂ ತಜ್ಞರ ಸಲಹೆ ಪಡೆಯಬೇಕು. ಶಿಫಾರಸು ಪಟ್ಟಿ ಸಿದ್ಧಗೊಂಡ ನಂತರ ಸಂಸತ್ ಅಭಿಪ್ರಾಯ ಪಡೆಯುವುದೂ ಮುಖ್ಯ.
- ಶಿಫಾರಸ್ಸುಗಳನ್ನು ಪ್ರಶ್ನಿಸುವ ಹಕ್ಕು, ಪರಮಾಧಿಕಾರ ಕೇಂದ್ರ ಸರ್ಕಾರಕ್ಕೆ.
- ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಮೊದಲಿಗಿಂತಲೂ ಹೆಚ್ಚು ಪಾರದರ್ಶಕತೆ, ಹೊಣೆಗಾರಿಕೆ
ಅನಾನುಕೂಲ
- ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಕೇಂದ್ರ ಸರ್ಕಾರ ಆಕ್ಷೇಪಿಸಿದರೂ, ಸುಪ್ರೀಂ ಕೋರ್ಟ್ ಒಂದೊಮ್ಮೆ ಹೆಸರುಗಳನ್ನು ಅಂಗೀಕರಿಸಿದರೆ, ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ.
- ಕೊಲಿಜಿಯಂಗೆ, ಸೂಕ್ತ ವ್ಯಕ್ತಿಗಳ ಆಯ್ಕೆ ಅಥವಾ ನಿರಾಕರಣೆಗೆ ಯಾವುದೇ ನಿರ್ದಿಷ್ಟ ಕಾರಣ ನೀಡಬೇಕಿಲ್ಲದಿರುವುರಿಂದ ಪಾರದರ್ಶಕತೆ ಇಲ್ಲವೆಂಬ ದೂರು.
ಹೊಸ ವ್ಯವಸ್ಥೆ ಬಗ್ಗೆ ಟೀಕೆಗಳು
- ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವ್ಯಾಪಕವಾದ ರಾಜಕೀಯ ಹಸ್ತಕ್ಷೇಪ ತಲೆದೋರುವ ಭೀತಿ
- ಸಮಿತಿಯಲ್ಲಿ ತನ್ನನ್ನು ಬೆಂಬಲಿಸುವ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಕೂರಿಸುವ ಮೂಲಕ, ಬಹುಮತ ಸಾಧಿಸಲು ಸರ್ಕಾರ ಪ್ರಯತ್ನಿಸಲು ಅವಕಾಶ
- ಸಮಿತಿಯಲ್ಲಿನ ನ್ಯಾಯಮೂರ್ತಿಗಳು ಹಾಗೂ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟು ಆಯ್ಕೆ ವಿಳಂಬವಾಗುವ ಸಾಧ್ಯತೆ
- ನಿರ್ದಿಷ್ಟ ವ್ಯಕ್ತಿಗಳ ಪರವಾಗಿ ನಿಲ್ಲುವ ಸರ್ಕಾರದ ಧೋರಣೆಗಳಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ.
- ಗುಪ್ತಚರ ಇಲಾಖೆಯನ್ನು ಛೂಬಿಡುವ ಮೂಲಕ, ನಿರ್ದಿಷ್ಟ ವ್ಯಕ್ತಿತಯನ್ನು ಅಥವಾ ರಾಜಕೀಯ ಪಕ್ಷಗಳಿಗೆ ಬೇಡವಾದ ವ್ಯಕ್ತಿಯನ್ನು ಶಿಫಾರಸು ಪಟ್ಟಿಯಿಂದ ಹೊರಗಿಡುವಂತೆ ನೋಡಿಕೊಳ್ಳಲು ಅವಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


