

ದೆಹಲಿ: ಪೇಶಾವರದ ಶಾಲೆಯಲ್ಲಿ ಒತ್ತೆಯಾಳುಗಳನ್ನಾಗಿರಿಸಿರುವ ಮಕ್ಕಳನ್ನು ಬಂಧಮುಕ್ತಗೊಳಿಸುವಂತೆ 2014 ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ತಾಲೀಬಾನ್ ಆತ್ಮಾಹುತಿ ದಳದವರಲ್ಲಿ ಬಿನ್ನವಿಸಿಕೊಂಡಿದ್ದಾರೆ.
ಉಗ್ರರು ನನ್ನನ್ನು ಕೊಲ್ಲಲಿ, ಆದರೆ ಆ ಮಕ್ಕಳನ್ನು ಬಿಟ್ಟು ಬಿಡಲಿ ಎಂದು ಸತ್ಯಾರ್ಥಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಉಗ್ರರ ದಾಳಿಯನ್ನು ಖಂಡಿಸಿದ ಸತ್ಯಾರ್ಥಿ, ಈ ಕೃತ್ಯವನ್ನು ಮಾಡಿದವರು ಮನುಕುಲದ, ಅಲ್ಲಾಹುವಿನ ಹಾಗೂ ನಮ್ಮ, ನಿಮ್ಮ ಶತ್ರುಗಳು ಎಂದಿದ್ದಾರೆ.
ಮಂಗಳವಾರ ಇಲ್ಲಿನ ಸೇನಾಶಾಲೆಯೊಂದಕ್ಕೆ ದಾಳಿಯಿಟ್ಟ ಉಗ್ರರು ಸುಮಾರು 130 ಮಂದಿಯನ್ನು ಹತ್ಯೆಗೈದಿದ್ದಾರೆ. ಆತ್ಮಾಹುತಿ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಜೀವ ಕಳೆದುಕೊಂಡಿದ್ದು, ಉಗ್ರರ ಈ ಪೈಶಾಚಿಕ ಕೃತ್ಯವನ್ನು ಎಲ್ಲ ರಾಷ್ಟ್ರಗಳು ಖಂಡಿಸಿವೆ.