ಸ್ವಚ್ಛ ಭಾರತ, ಹಸಿರು ಭಾರತ ಕ್ಯಾಲೆಂಡರ್ ಅನಾವರಣಗೊಳಿಸಿದ ಸರ್ಕಾರ

ಕೇಂದ್ರ ಸರ್ಕಾರದ ೨೦೧೫ ರ ನೂತನ ಕ್ಯಾಲೆಂಡರ್ ಗೆ ವಸ್ತು ಸ್ವಚ್ಛ ಭಾರತ, ಹಸಿರು ಭಾರತ.
ಸ್ವಚ್ಛ ಅಭಿಯಾನಕ್ಕೆ ಪ್ರಧಾನಿ ಚಾಲನೆ ಕೊಟ್ಟ ಆ ಕ್ಷಣ
ಸ್ವಚ್ಛ ಅಭಿಯಾನಕ್ಕೆ ಪ್ರಧಾನಿ ಚಾಲನೆ ಕೊಟ್ಟ ಆ ಕ್ಷಣ

ನವದೆಹಲಿ: ಕೇಂದ್ರ ಸರ್ಕಾರದ ೨೦೧೫ ರ ನೂತನ ಕ್ಯಾಲೆಂಡರ್ ಗೆ ವಸ್ತು ಸ್ವಚ್ಛ ಭಾರತ, ಹಸಿರು ಭಾರತ. ಮಾಹಿತಿ ಮತ್ತು ವಾರ್ತಾ ಕೇಂದ್ರ ಸಚಿವ ಅರುಣ್ ಜೇಟ್ಲಿ ಬುಧವಾರ ಈ ಕ್ಯಾಲೆಂಡರ್ ಅನಾವರಣಗೊಳಿಸಿದರು. ಹಾಗೆಯೇ ಮೊಬೈಲ್ ನಲ್ಲಿ ಇಳಿಸಿಕೊಳ್ಳಲು ಇದರ ಡಿಜಿಟಲ್ ಆವೃತ್ತಿ ಕೂಡ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಸಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಜೇಟ್ಲಿ, ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ವಿಶೇಷ ಏಕೆಂದರೆ ಇದು ಸರ್ಕಾರದ ಸ್ವಚ್ಛ ಭಾರತ ಮತ್ತು ಡಿಜಿಟಲ್ ಭಾರತ ಯೋಜನೆಗಳೊಂದಿಗೆ ವಿಲೀನಗೊಂಡಿದೆ ಎಂದರು.

ಅಕ್ಟೋಬರ್ ೨ ರಂದು ಪೊರಕೆ ಹಿಡಿದು ಗುಡಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ ಅವರ ಫೋಟೋ ಕ್ಯಾಲೆಂಡರ್ ನ ಮುಖಚಿತ್ರವಾಗಿದೆ.  ಇನ್ನುಳಿದ ಹಾಳೆಗಳಲ್ಲಿ ಸ್ವಚ್ಛ ಭಾರತದ ಅಭಿಯಾನದ ದೃಷ್ಯಚಿತ್ರಗಳಿವೆ.

ಈ ಕ್ಯಾಲೆಂಡರ್ ಮೋದಿ ಸರ್ಕಾರದ ಡಿಜಿಟಲ್ ಭಾರತ ಅಭಿಯಾನಕ್ಕೂ ಪೂರಕವಾಗಿದ್ದು, ಕ್ಯಾಲೆಂಡರ್ ನ್ನು ಕೊಳ್ಳುವ ಅವಶ್ಯಕತೆ ಇಲ್ಲ ಬದಲಾಗಿ ಮೊಬೈಲ್ ಮೂಲಕ ಉಚಿತವಾಗಿ ಇಳಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ ಸಚಿವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com