

ದೆಹಲಿ: ದೆಹಲಿ ಮತ್ತು ಹತ್ತಿರದ ಪ್ರದೇಶಗಲ್ಲಿ ಸೋಮವಾರ ಬೆಳಗ್ಗೆ ದಟ್ಟ ಮಂಜು ಕವಿದ ಕಾರಣ ಹಲವಾರು ರೈಲುಗಳು ಇಂದು ತಡವಾಗಿ ಸಂಚಾರ ಆರಂಭಿಸಿವೆ.
ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟಕ್ಕೂ ಧಕ್ಕೆಯಾಗಿದ್ದು, 3 ಡಜನ್ ವಿಮಾನಗಳು ಸೋಮವಾರ ತಡವಾಗಿ ಹಾರಾಟ ನಡೆಸಿವೆ.
ಇಲ್ಲಿ ಕನಿಷ್ಠ ತಾಪಮಾನ 4.2 ಡಿಗ್ರಿ ದಾಖಲಾಗಿದ್ದು ಕಳೆದ ಐದು ವರ್ಷಗಳಿಗಿಂತ ಅತೀ ಹೆಚ್ಚು ಚಳಿ ಸೋಮವಾರ ಅನುಭವಕ್ಕೆ ಬಂದಿದೆ.
ದೆಹಲಿ ಸಂಪೂರ್ಣವಾಗಿ ಮಂಜಿನಿಂದಾವೃತವಾಗಿದ್ದು, ಬೆಳಗ್ಗೆ ಹೊತ್ತು 50 ಮೀಟರ್ ದೂರದಲ್ಲಿರುವ ವಸ್ತು ಕೂಡಾ ಮಂಜಿನಿಂದಾಗಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಸುಮಾರು 50 ರೈಲುಗಳು ತಡವಾಗಿ ಸಂಚಾರ ಆರಂಭಿಸಿವೆ. ಅದೇ ವೇಳೆ 12 ರೈಲುಗಳ ಸಂಚಾರ ವೇಳಾಪಟ್ಟಿಯನ್ನು ಮರು ನಿಗದಿ ಪಡಿಸಲಾಗಿದ್ದು, ಒಂದು ರೈಲನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ರೇಲ್ವೆ ಅಧಿಕಾರಿಗಳು ಹೇಳಿದ್ದಾರೆ.