ಬೆಂಗಳೂರು ಬ್ಲಾಸ್ಟ್ ಮಾಡಿದ್ದಾಗಿ ಟ್ವೀಟ್ ಮಾಡಿದವನು ಮಾನಸಿಕ ರೋಗಿ

ಬೆಂಗಳೂರು ಬ್ಲಾಸ್ಟ್ ಮಾಡಿದ್ದು ನಾನೇ. ಮತ್ತೆ ಎರಡು ದಿನದ ನಂತರ ...
ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಸ್ಫೋಟದ ನಂತರದ ದೃಶ್ಯ
ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಸ್ಫೋಟದ ನಂತರದ ದೃಶ್ಯ

ಬೆಂಗಳೂರು: ಬೆಂಗಳೂರು ಬ್ಲಾಸ್ಟ್ ಮಾಡಿದ್ದು ನಾನೇ. ಮತ್ತೆ ಎರಡು ದಿನದ ನಂತರ ಮತ್ತೊಂದು ಸ್ಫೋಟ ನಡೆಸುವೆ. ಬರೀ ಮಾತನ್ನಾಡುತ್ತೀರ. ನೀವು ಏನೂ ಕೆಲಸ ಮಾಡುವುದಿಲ್ಲ. ಮೆಹ್ದಿಯನ್ನು ಬಿಡದೆ ಹೋದರೆ ಇಂತಹ ಸ್ಫೋಟಗಳು ನಡೆಯುತ್ತಲೇ ಇರುತ್ತವೆ ಎಂದು ಅಬ್ದುಲ್ ಖಾನ್ ಹೆಸರಿನಲ್ಲಿ ಟ್ವೀಟ್ ಮಾಡಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಯುವಕ ೧೭ ವರ್ಷದ ಹಿಂದೂ ಧರ್ಮದ, ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು, ಇವನು ಅಬ್ದುಲ್ ಖಾನ್ ಎಂಬುವವನ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು, ಬೆಂಗಳೂರು ಬಾಂಬ್ ಬ್ಲಾಸ್ಟ್ ತಾನೇ ಮಾಡಿದ್ದು ಎಂದು ಹೊಣೆ ಹೊತ್ತಿದ್ದ. ಅಲ್ಲದೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬೆಂಗಳೂರು ಪೊಲೀಸರಿಗೂ ಬೆದರಿಕೆ ಹಾಕಿದ್ದ.

ಈ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೊದಲ ಹಂತದ ತನಿಖೆಯಲ್ಲಿ ತಿಳಿದಿರುವಂತೆ ಇವನು ಮಾನಸಿಕ ರೋಗಿ. ಪೊಲೀಸ್ ಠಾಣೆಗೆ ಭೇಟಿ ಕೊಟ್ಟ ಈ ಯುವಕನ ಪೋಷಕರು, ಅವರ ಮಗ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com