ಗ್ರಾಪಂ ಸಿಬ್ಬಂದಿಯ ಹಾಜರಾತಿ ಕಾವಲಿಗೆ ಬಂತು ಬಯೋವುಟ್ರಿಕ್
ಬಳ್ಳಾರಿ: ಪಿಡಿಒ ಹಾಗೂ ಸಿಬ್ಬಂದಿ ಗ್ರಾಪಂನಲ್ಲಿ ಇರುವುದೇ ಇಲ್ಲ ಎಂಬ ಆರೋಪಗಳಿಗೆ ಇತಿಶ್ರೀ ಹಾಡಲು, ಪಾರದರ್ಶಕತೆ ಕಾಯ್ದುಕೊಳ್ಳಲು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಇಲಾಖೆ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಪಂಚತಂತ್ರ ತಂತ್ರಾಂಶದಲ್ಲಿ ಆನ್ಲೈನ್ನಲ್ಲಿ ಬಯೋವುಟ್ರಿಕ್ ಹಾಜರಾತಿಗೆ ಮೊರೆ ಹೋಗಿದೆ.
ಈ ಬಯೋವುಟ್ರಿಕ್ ಹಾಜರಾತಿ ರಾಜ್ಯದ 5629 ಗ್ರಾಪಂಗಳಿಗೆ ಸೀಮಿತವಾಗದೆ, ರಾಜ್ಯದ 176 ತಾಲೂಕು ಪಂಚಾಯಿತಿ ಹಾಗೂ 30 ಜಿಲ್ಲಾ ಪಂಚಾಯಿತಿಗಳಿಗೆ ವ್ಯವಸ್ಥೆ ಮಾಡಲು ಮುಂದಾಗಿದೆ. ಈಗಾಗಲೆ ಕೆಲ ಕಡೆಗಳಲ್ಲಿ ಪ್ರಾಯೋಗಿಕ ಬಯೋವುಟ್ರಿಕ್ ಅಳವಡಿಸುವ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆನ್ಲೈನ್ ಹಾಜರಾತಿ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಯೋವುಟ್ರಿಕ್ ಪದ್ಧತಿ ಜಾರಿಗೊಳಿಸುವಂತೆ ಸೆ.9, 2013ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿದ್ದರು. ಈ ಬಯೋವುಟ್ರಿಕ್ ಹಾಜರಾತಿ ಮಾಹಿತಿ ಕೇವಲ ಆ ಕಚೇರಿಯ ಗಣಕಯಂತ್ರದಲ್ಲಿ ಮಾತ್ರ ದಾಖಲಾಗಿರುತ್ತದೆ. ಆದರೆ ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲಿ ವ್ಯವಸ್ಥೆ ಮಾಡುವ ಪಂಚತಂತ್ರ ತಂತ್ರಾಂಶದ ಬಯೋವುಟ್ರಿಕ್ ಹಾಜರಾತಿಯನ್ನು ಆನ್ಲೈನ್ನಲ್ಲಿ ಮೇಲಧಿಕಾರಿಗಳು ಎಲ್ಲಿ ಬೇಕಾದರೂ ನೋಡಬಹುದು. ಈ ತಂತ್ರಜ್ಞಾನವನ್ನು ಫೆಬ್ರುವರಿ ಅಂತ್ಯದೊಳಗೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಅಳವಡಿಸಲು ಸರ್ಕಾರ ಮುಂದಾಗಿದೆ.
ಪ್ರಧಾನ ಕಾರ್ಯದರ್ಶಿ ಸುತ್ತೋಲೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು ಹಾಗೂ ಉಪ ನಿರ್ದೇಶಕರು ಅವರಿಗೆ ಪಂಚತಂತ್ರ ತಂತ್ರಾಂಶದಲ್ಲಿ ಬಯೋವುಟ್ರಿಕ್ ಹಾಜರಾತಿ ಅಳವಡಿಸುವಂತೆ ಸೂಚಿಸಿದ್ದು, ಈ ಆದೇಶವನ್ನು ಜಿಲ್ಲಾ ಪಂಚಾಯಿತಿಗಳಿಗೆ ನೀಡಲಾಗಿದೆ. ಈಗಾಗಲೆ ಪಂಚಾಯಿತಿಯ ಮೂರು ಹಂತದಲ್ಲಿ ಸಿಬ್ಬಂದಿ, ಅಧಿಕಾರಿಗಳ ಬಯೋವುಟ್ರಿಕ್ ಹಾಜರಾತಿ ಪಡೆಯಲು ಸೂಚಿಸಲಾಗಿತ್ತು.
ಗ್ರಾಪಂ ಸಿಬ್ಬಂದಿ ಮೇಲೆ ಹದ್ದಿನ ಕಣ್ಣು
ಗ್ರಾಪಂ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ, ಪಂಪ್ ಆಪರೇಟರ್, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಎಲ್ಲಾ ಸಿಬ್ಬಂದಿ ಬಯೋವುಟ್ರಿಕ್ ಹಾಜರಾತಿ ಅಡಿಯಲ್ಲಿ ಬರುತ್ತಿದ್ದು, ಆನ್ಲೈನ್ ಹಾಜರಾತಿ ಎಂದು ಎಲ್ಲಿಯಾದರೂ ಹೋಗಿ ಹಾಜರಿ ಹಾಕುವಂತಿಲ್ಲ. ಆಯಾ ಗ್ರಾಮ ಪಂಚಾಯಿತಿಯಲ್ಲಿರುವ ಕಂಪ್ಯೂಟರ್ನಲ್ಲಿ ಆಯಾ ಸಿಬ್ಬಂದಿ ಹೆಸರು ನೋಂದಾಯಿಸುತ್ತಾರೆ. ಅದೇ ಕಂಪ್ಯೂಟರ್ನಲ್ಲಿಯೇ ಹಾಜರಿ ಹಾಕಬೇಕು. ಬೇರೆ ಕಂಪ್ಯೂಟರ್ನಿಂದ ಹಾಕುವುದಕ್ಕೆ ಬರುವುದಿಲ್ಲ. ಅಲ್ಲದೆ ಇವರ ಹಾಜರಾತಿಯನ್ನು ಆನ್ಲೈನ್ನಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಜಿಪಂ ಸಿಇಒ, ತಾಪಂ ಇಒ ಸೇರಿದಂತೆ ಮೇಲಧಿಕಾರಿಗಳು ನೋಡಬಹುದು.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

