ಪ್ರಧಾನ ಸುದ್ದಿ

ಆರ್‌ಟಿಇ; ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ

Published On :

ಬೆಂಗಳೂರು: ಶಿಕ್ಷಣ ಹಕ್ಕು ಕಾಯಿದೆಯ ಶೇ.25ರ ಮೀಸಲು ಸೀಟು ಪಡೆಯಲು ಮಂಗಳವಾರದಿಂದ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮೀಸಲು ವಿವರ ಹಾಗೂ ಪ್ರವೇಶ ಅರ್ಜಿ ಲಭ್ಯವಿದ್ದು ಫೆ.8ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 1.10 ಲಕ್ಷ ಸೀಟುಗಳು ಶೇ.25ರ ಮೀಸಲಿನಲ್ಲಿ ಲಭ್ಯವಿವೆ. ಈ ಸಂಬಂಧ ಯಾವುದೇ ದೂರುಗಳಿದ್ದರೆ ಪಾಲಕರು ಅಥವಾ ವಿದ್ಯಾರ್ಥಿಗಳು ಸರ್ಕಾರಿ ಸಹಾಯವಾಣಿ 180042534567ಗೆ ದೂರು ನೀಡಬಹುದು. ಈ ಸಂಬಂಧ ಎಲ್ಲ 204 ಬಿಇಒ ಕಚೇರಿಗಳಲ್ಲಿಯೂ ಸಹಾಯ ಕೇಂದ್ರವನ್ನು ತೆರಯಲಾಗಿದೆ. ಬಿಇಒ ಕಚೇರಿಯಲ್ಲಿ ಲಭ್ಯವಿರುವ ಅರ್ಜಿಗಳಿಗೆ ಯಾವುದೇ ಶುಲ್ಕ ನೀಡಬೇಕಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಮಾ.3ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಅಲ್ಲಿಯವರೆಗೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡುವಂತಿಲ್ಲ. ಒಂದೊಮ್ಮೆ ಪ್ರವೇಶ ನೀಡಿದರೆ ಅದನ್ನು ರದ್ದುಗೊಳಿಸಿ ಶಿಕ್ಷಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಪ್ರವೇಶ ಶುಲ್ಕ ಮರುಪಾವತಿಗೆ ಆದೇಶ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ, ಒಂದು ಹಾಗೂ ಎರಡನೇ ತರಗತಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಮೊದಲನೇ ಕಂತನ್ನು ರಾಜ್ಯ ಸರ್ಕಾರ ಬಿಡುಗಡೆಮಾಡಿದೆ. ಪೂರ್ವ ಪ್ರಾಥಮಿಕದ ವಿದ್ಯಾರ್ಥಿಗಳಿಗೆ ಗರಿಷ್ಠ 5924 ಹಾಗೂ ಪ್ರಾಥಮಿಕ ಶಾಲೆಗೆ ಗರಿಷ್ಠ 11,848 ರವರೆಗೆ ಶುಲ್ಕ ನೀಡಬಹುದಾಗಿದೆ. ಎಲ್ಲ ಬಿಇಒಗಳು ಆಯಾ ಶಾಲೆಯ ಲೆಕ್ಕಪರಿಶೋಧನೆಯ ವಿವರ ಗಮನಿಸಿ ಶುಲ್ಕವನ್ನು ಕೂಡಲೇ ಬಿಡಗುಡೆ ಮಾಡಬೇಕು. ಎರಡನೇ ಕಂತಿನ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆಮಾಡಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.