ಪ್ರಧಾನ ಸುದ್ದಿ

ಶೂಟೌಟ್: ಒಬ್ಬನಿಗೆ ತೀವ್ರ ಗಾಯ

Published On :

ಗಂಗಾವತಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಆರಂಭವಾಗಿ, ವ್ಯಕ್ತಿಯೊಬ್ಬ ತನ್ನಲ್ಲಿದ್ದ ಪಿಸ್ತೂಲಿನಿಂದ ಶೂಟ್ ಮಾಡಿದ ಘಟನೆ ಸಮೀಪದ ಮಲಕನಮುರಡಿ ಗ್ರಾಮದ ಹತ್ತಿರ ನಡೆದಿದೆ. ಬಸವರಾಜ ಎನ್ನುವಾತ ಶೂಟ್ ಮಾಡಿದ್ದರಿಂದ ಚನ್ನನಗೌಡ ತಿಮ್ಮನಗೌಡನ ತಲೆಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ.  ಯರಡೋಣಿ ಗ್ರಾಮದ ಚನ್ನನಗೌಡ, ಬಸವರಾಜ ವಡ್ಡರಹಟ್ಟಿ ಎಂಬುವವರಿಗೆ 4.50 ಲಕ್ಷ ಸಾಲ ನೀಡಿದ್ದ. ಹಲವಾರು ಬಾರಿ ಚನ್ನನಗೌಡ ಬಸವರಾಜನಿಗೆ ನೀಡಿದ ಸಾಲ ನೀಡಲು ಒತ್ತಾಯಿಸಿದ್ದ. ಈ ಕಾರಣಕ್ಕಾಗಿ ಚನ್ನನಗೌಡ ಮತ್ತು ಬಸವರಾಜ ವಡ್ಡರಹಟ್ಟಿ ಮಧ್ಯೆ ಜಗಳ ಆರಂಭವಾಗಿತ್ತು.
ಸಿನಿಮಾ ರೀತಿಯಲ್ಲಿ ಕೃತ್ಯ: ಬಸವರಾಜ ವಡ್ಡರಹಟ್ಟಿ ಮತ್ತು ಆತನ ಸಹಚರರಾದ ನರಸಪ್ಪ, ಚನ್ನನಗೌಡರಿಗೆ ಕರೆ ಮಾಡಿ ಪಡೆದ ಹಣ ವಾಪಸ್ ಕೊಡುತ್ತೇನೆ. ಮಲಕನಮುರಡಿ ಗ್ರಾಮದ ಹತ್ತಿರ ಬರುವಂತೆ ತಿಳಿಸಿದ್ದ. ಹಣ ಪಡೆಯಲು ಚನ್ನನಗೌಡ ಸೋಮವಾರ ಬೆಳಗ್ಗೆ 6ಕ್ಕೆ ಮಲಕನಮುರಡಿ ಗ್ರಾಮಕ್ಕೆ ತೆರಳಿದ್ದ. ಆಗಲೇ ಬಸವರಾಜ ತನ್ನಲ್ಲಿದ್ದ ಪಿಸ್ತೂಲಿನಿಂದ ತಲೆಗೆ ಶೂಟ್ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಚನ್ನನಗೌಡ ಸ್ಥಳದಲ್ಲೇ ಕುಸಿದಿದ್ದಾನೆ. ಸುದ್ದಿ ತಿಳಿಯುತ್ತಲೇ ಮಲಕನಮುರಡಿ ಗ್ರಾಮಸ್ಥರು ಬಸವರಾಜನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಜೊತೆಗಿದ್ದ ನರಸಪ್ಪ ಪರಾರಿಯಾಗಿ ನಂತರ ಪೊಲೀಸರಿಗೆ ಶರಣನಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.