8ನೇ ಪ್ಯಾನ್ ಆಫ್ರಿಕನ್ ಕಾಂಗ್ರೆಸ್ ಅಧಿವೇಶನಕ್ಕೆ ಜಯರಾಮ ಸಿದ್ದಿ
ಯಲ್ಲಾಪುರ: ಪರಿಶಿಷ್ಟ ಪಂಗಡಕ್ಕೆ ಸೇರಿದ ಸಿದ್ದಿ ಸಮುದಾಯದ ಮೊದಲನೇ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಾಲೂಕಿನ ಮಾಗೋಡಿನ ಜಯರಾಮ ಸಿದ್ದಿ ಈಗ ಆಫ್ರಿಕಾದ ಜೋಹಾನ್ಸಬರ್ಗ್ನಲ್ಲಿ ನಡೆಯುವ 8ನೇ ಪ್ಯಾನ್ ಆಫ್ರಿಕನ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆಫ್ರಿಕಾದ ವಾಟರ್ಸ್ ಲೈಂಡ್ ವಿಶ್ವವಿದ್ಯಾನಿಲಯದಲ್ಲಿ ಜ.14ರಿಂದ 16ರವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಇವರು ಸಿದ್ದಿಸಮುದಾಯದ ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳು ವಿಷಯದ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಇವರೊಂದಿಗೆ ಸಿದ್ದಿ ಜನವಿಕಾಸ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮನಾಥ ಸಿದ್ದಿ ಶಿರ್ಲ ಮತ್ತು ಮೋಹನ ಶಿದ್ದಿ ಕಲ್ಲೇಶ್ವರ ಅವರೂ ಇದೇ ವಿಷಯದ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಈ ಮೂವರು ಈ ವಿಷಯಗಳನ್ನು ವಿಂಗಡಿಸಿಕೊಂಡು ಮೂರು ಮಜಲುಗಳಲ್ಲಿ ಅದನ್ನು ಮಂಡಿಸಿ ಬೆಳಕು ಚೆಲ್ಲಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

