ಕಾರ್ಡ್ ಮಾಹಿತಿ ಕಳವಾದೀತು...
ಮಾಲ್ಗಳಿಗೆ ಹೋಗಿ ಶಾಪಿಂಗ್ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುತ್ತೀರಾ? ಹಾಗಾದ್ರೆ ಒಂದು ಕ್ಷಣ ಇಲ್ಲಿ ಕೇಳಿ, ನಿಮ್ಮ ಅಕೌಂಟ್ನ ಸೀಕ್ರೆಟ್ ಮಾಹಿತಿ ಕದಿಯಲಿಕ್ಕೆ ಅಂತಾನೇ ಒಂದು ವೈರಸ್ ಹುಟ್ಟಿಕೊಂಡಿದೆ. ಭಾರತದಲ್ಲಿ ಇದರ ಹಾವಳಿ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.
ವೈರಸ್ ಹೆಸರೇನು?
‘Dexter, black POS, memory dump and grabber’ (ಡೆಕ್ಸ್ಟರ್, ಬ್ಲಾಕ್ ಪಿಓಎಸ್, ಮೆಮೋರಿ ಡಂಪ್ ಆ್ಯಂಡ್ ಗ್ರಾಬರ್)
ಗಂಭೀರತೆ ಏನು?
ಇದು ಡೆಡ್ಲಿ ವೈರಸ್. ಇದರ ಗಂಭೀರತೆ ಅಪಾರ. ಇದು ಟ್ರೋಜನ್ ಕುಟುಂಬದಿಂದ ಬಂದ ವೈರಸ್.
ಏನು ಮಾಡುತ್ತೆ?
ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ. ಪಾಯಿಂಟ್ ಆಫ್ ಸೇಲ್(ಪಿಓಎಫ್)ನಲ್ಲೇ ಇದರ ಕಾರ್ಯಾಚರಣೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಜ್ಜಿದೊಡೆ, ಆ ಯಂತ್ರದಿಂದಲೇ ನಿಮ್ಮ ಕಾರ್ಡ್ನ ಎಲ್ಲಾ ಮಾಹಿತಿ ಕದಿಯುತ್ತೆ.
ನೀವು ಏನು ಮಾಡಬೇಕು?
ಪಾಯಿಂಟ್ ಆಫ್ ಸೇಲ್ ಅಂದರೆ, ಶಾಪ್ಗಳಲ್ಲಿನ ಬಿಲ್ ಕೇಂದ್ರದಲ್ಲಿ ಈ ವೈರಸ್ ಅಟ್ಯಾಕ್ ಆಗುವುದರಿಂದ ಕಾರ್ಡ್ ಉಜ್ಜುವಾಗ ಎಚ್ಚರವಿರಲಿ. ಪಿನ್ ಇಲ್ಲದ ಕಾರ್ಡ್ ಬಳಸಲೇಬೇಡಿ.
ಅಪಾಯವೇನು?
ಕಾರ್ಡ್ನ ಮಾಹಿತಿ ಎಂದರೆ ಕಾರ್ಡ್ದಾರರ ಹೆಸರು, ಅಕೌಂಟ್ ನಂಬರ್, ಕಾರ್ಡ್ ಮುಗಿಯುವ ಅವಧಿ, ಸಿವಿವಿ ಕೋಡ್ ಮತ್ತು ಇತರೆ ರಹಸ್ಯ ಮಾಹಿತಿ. ಇದರಿಂದ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಕಳ್ಳರ ಜೇಬು ಸೇರಿಕೊಳ್ಳಬಹುದು.
ಆರ್ಬಿಐ ಎಚ್ಚರಿಕೆ ಏನು?
ಆರ್ಬಿಐ ಪಿನ್ ಇಲ್ಲದ ಕಾರ್ಡ್ಗಳನ್ನು ಬಳಕೆ ಮಾಡುವುದು ಬೇಡ ಎಂದು ಬ್ಯಾಂಕ್ಗಳಿಗೆ ಸೂಚನೆ ನೀಡಿದೆ. ಇದು ಕಳೆದ ಡಿಸೆಂಬರ್ನಿಂದಲೇ ಜಾರಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

