ಪ್ರಧಾನ ಸುದ್ದಿ

ಹೊಸದೇನಿಲ್ಲ, ಹಳೆಯದೇ ಎಲ್ಲ ಮುನ್ನೋಟ; ಬಜೆಟ್ ಸುಳಿವಿಲ್ಲ; ರಾಜ್ಯಪಾಲರ ಭಾಷಣದಲ್ಲಿ ರಸವಿಲ್ಲ

ಹೊಸದೇನಿಲ್ಲ, ಹಳೆಯದೇ ಎಲ್ಲ ಮುನ್ನೋಟ; ಬಜೆಟ್ ಸುಳಿವಿಲ್ಲ; ರಾಜ್ಯಪಾಲರ ಭಾಷಣದಲ್ಲಿ ರಸವಿಲ್ಲ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ.22-
ಹಳೆಯ ಕಾರ್ಯಕ್ರಮ ಮತ್ತು ಸಾಧನೆಗಳ ಮೆಲುಕು, ಸರ್ಕಾರಕ್ಕೆ ಮೆಚ್ಚುಗೆ. ಆದರೆ, ಹೊಸ ವರ್ಷದ ಮುನ್ನೋಟವೇ ಇಲ್ಲ...
ಇದು ವರ್ಷಾರಂಭದಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾಡಿದ ಭಾಷಣದ ಒಟ್ಟಾರೆ ಚಿತ್ರಣ.
ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ರಾಜ್ಯಪಾಲರು ಮಾಡುವ ಭಾಷಣ ಎಂದರೆ ಅದು ಸಾಧನೆಗಳ ಮೆಲುಕಿನ ಜತೆಗೆ ಸರ್ಕಾರದ ಮುನ್ನೋಟ ಹಾಗೂ ಮುಂದಿನ ಬಜೆಟ್ ಹೇಗಿರುತ್ತದೆ ಎಂಬ ಮುನ್ಸೂಚನೆಯಾಗಿರುತ್ತದೆ. ಆದರೆ, ಈ ಬಾರಿ ಅದಕ್ಕೆ ವ್ಯತಿರಿಕ್ತವಾಗಿ ಕೇವಲ ಸಾಧನೆಗಳನ್ನು ಪುನರುಚ್ಛರಿಸಲಿಕ್ಕಷ್ಟೇ ಸೀಮಿತವಾದ ಭಾಷಣವನ್ನು ಸರ್ಕಾರ ರಾಜ್ಯಪಾಲರಿಂದ ಮಾಡಿಸಿತು.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಿದ ರಾಜ್ಯಪಾಲರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಸಾಧನೆಗಳನ್ನು ವಿವರಿಸಿದರು. ಆಡಳಿತ ಸುಧಾರಣೆ, ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು, ಇಲಾಖೆಗಳಲ್ಲಿ ಜಾರಿಗೆ ತಂದಿರುವ ಹೊಸ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.

ಕೋಮು ಸಾಮರಸ್ಯಕ್ಕೆ ಆದ್ಯತೆ: ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಂಡು ಬರಲು ಸರ್ಕಾರ ಸಮರ್ಥವಾಗಿದೆ. ಕೋಮು ಘಟನೆಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಮೂಲಭೂತವಾದಿ ಸಂಘ ಸಂಸ್ಥೆಗಳು ಕೋಮು ಸೌಹಾರ್ದತೆ ಕದಡಲು ಮಾಡುತ್ತಿರುವ ಪ್ರಯತ್ನಗಳನ್ನು ನಿಗ್ರಹಿಸಬೇಕಾದ ಅಗತ್ಯ ಮನಗಂಡು ಪರಿಣಾಮಕಾರಿ ಮತ್ತು ನಿಷ್ಪಕ್ಷಪಾತ ಆಡಳಿತ ಕ್ರಮ ಕೈಗೊಳ್ಳುತ್ತಾ ಬಂದಿದೆ. ಮಹಿಳೆಯರ ವಿರುದ್ಧ ಪ್ರಕರಣಗಳ ತ್ವರಿತ ವಿಲೇವಾರಿಗೆ 10 ವಿಶೇಷ ನ್ಯಾಯಾಲಯ ಸ್ಥಾಪಿಸಲು ಅನುಮೋದನೆ ನೀಡಿದೆ.     5

ಮೇಜು ಕುಟ್ಟಲಿಲ್ಲ.. ಚಪ್ಪಾಳೆ ತಟ್ಟಲಿಲ್ಲ...
ರಾಜ್ಯಪಾಲರು ಏನೇ ಭಾಷಣ ಮಾಡಿದರೂ ಪ್ರತಿಪಕ್ಷಗಳ ಶಾಸಕರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ತಮ್ಮದೇ ಸರ್ಕಾರದ ಬಗ್ಗೆ ಮೆಚ್ಚುಗೆ ನುಡಿಗಳನ್ನಾಡುತ್ತಿರುವ ರಾಜ್ಯಪಾಲರಿಗೆ ಮೇಜು ಕುಟ್ಟಿ ಪ್ರಶಂಸಿಸುವ ಔದಾರ್ಯವನ್ನೂ ಕಾಂಗ್ರೆಸ್ ಶಾಸಕರು ಮೆರೆಯಲಿಲ್ಲ. ಭಾಷಣಕ್ಕೆ ಆಡಳಿತ ಪಕ್ಷ ಶಾಸಕರಿಂದಲೇ ಒಂದೇ ಒಂದು ಚಪ್ಪಾಳೆಯೂ ಬರಲಿಲ್ಲ. ಮೇಜು ಕುಟ್ಟಿದ್ದೂ ಇಲ್ಲ. ಜಂಟಿ ಅಧಿವೇಶನ ಉದ್ದೇಶಿಸಿ 40 ನಿಮಿಷ ಭಾಷಣ ಮಾಡಿದರು. ಭಾಷಣದ ಉದ್ದಕ್ಕೂ ಸರ್ಕಾರದ ಸಾಧನೆ, ಪ್ರಶಸ್ತಿ ಬಂದಿರುವುದು, ನಿರೀಕ್ಷೆಗಳನ್ನು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ಒಬ್ಬ ಶಾಸಕರೂ ಅಥವಾ ಸಚಿವರು ಒಂದು ಚಪ್ಪಾಳೆಯನ್ನೂ ತಟ್ಟಲಿಲ್ಲ. ಮೇಜುಕುಟ್ಟಿ ಮೆಚ್ಚುಗೆ ಸೂಚಿಸಲಿಲ್ಲ. ಮುಗುಳ್ನಗೆಯನ್ನೂ ಬೀರಲಿಲ್ಲ. 23 ಪುಟಗಳ ಸಿದ್ಧ ಭಾಷಣವನ್ನು 40 ನಿಮಿಷದಲ್ಲಿ ರಾಜ್ಯಪಾಲರು ವಾಚಿಸಿದಾಗ ಕೇಳಬೇಕೆಂಬ ಶಿಕ್ಷೆಗೆ ಒಳಗಾದಂತೆ ಆಲಸಿಯಾಗಿದ್ದರು. ರಾಜ್ಯಪಾಲರ ಭಾಷಣ ಮುಗಿದ ಮೇಲೆ ಸಾಮಾನ್ಯ ರೀತಿಯಲ್ಲಿ ಶಾಸಕರು ಮೇಜು ಕುಟ್ಟಿದರು.

ಪ್ರಮುಖ ಅಂಶಗಳು

  • ತಿಂಗಳ ಮೊದಲ ಹತ್ತು ದಿನಗಳಲ್ಲಿ ಬಿಪಿಎಲ್ ಕಾರ್ಡ್‌ದಾರರು ಪಡಿತರ ಪಡೆಯುವಂತೆ ಮಾಡಲು ಫೆಬ್ರವರಿಯಿಂದ 'ಪಡಿತರ ಖಾತ್ರಿ' ಯೋಜನೆ
  • ಹೆಚ್ಚು ಉದ್ಯೋಗ ಸೃಷ್ಟಿಸಲು ಮತ್ತು ಬಂಡವಾಳ ಹೂಡಿಕೆದಾರರಿಗೆ ರಾಜ್ಯವನ್ನು ಆದ್ಯತಾ ತಾಣವಾಗಿ ರೂಪಿಸಲು 2014ರ ಅಕ್ಟೋಬರ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನ
  • 2014ರ ಏ. 1ರಿಂದ ಹೊಸ ಕೈಗಾರಿಕಾ ನೀತಿ. ಮುಂದಿನ 5 ವರ್ಷಗಳಲ್ಲಿ 10 ಲಕ್ಷ ನೇರ ಉದ್ಯೋಗ ಸೃಷ್ಟಿಸುವ ಗುರಿ
  •  ಮಾನವ ಅಭಿವೃದ್ಧಿಯಲ್ಲಿ ಅಸಮಾನತೆ ನಿವಾರಿಸಲು 2014-15ರ ವೇಳೆಗೆ ರಾಜ್ಯ ಮಾನವಾಭಿವೃದ್ಧಿ ವರದಿಯ ಕರಡು ಸಿದ್ಧಪಡಿಸುವುದು
  • ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ಸಂಬಂಧ ಶಾಸನಾತ್ಮಕ ಹಕ್ಕು ನೀಡಲು ಕರ್ನಾಟಕ ನೈರ್ಮಲ್ಯ ಸೌಲಭ್ಯಗಳ ಖಾತರಿ ವಿಧೇಯಕ-2014 ಮಂಡನೆ
  • ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪನೆ
ಪ್ರಮುಖ ಕಾರ್ಯಕ್ರಮಗಳು
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
ಜಗದೀಶ್ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ
ಎಂ.ಸಿ.ನಾಣಯ್ಯ, ವಿಪಜೆಡಿಎಸ್ ನಾಯಕ
ಬಿ.ಶ್ರೀರಾಮುಲು, ಬಿಎಸ್ಆರ್ ಕಾಂಗ್ರೆಸ್
ವೈ.ಎಸ್.ವಿ.ದತ್ತ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ
ಡಿ.ವಿ. ಸದಾನಂದಗೌಡ, ವಿಪ ಪ್ರತಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.