ಪ್ರಧಾನ ಸುದ್ದಿ

ಟೀಸ್ಟಾಲ್‌ನಲ್ಲಿ ನರೇಂದ್ರ ಮೋದಿ ಜತೆ ಮಾತುಕತೆಗೆ ಅವಕಾಶ!

Published On :

ಮಂಗಳೂರು: ಟೀಸ್ಟಾಲ್‌ಗಳಲ್ಲಿ ಕುಳಿತು ಚಾ ಕುಡಿಯುತ್ತಾ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೊಂದಿಗೆ ಮಾತನಾಡಲು ಜನ ಸಾಮಾನ್ಯನಿಗೊಂದು ಅವಕಾಶ!
ದೇಶದ 100 ನಗರಗಳಲ್ಲಿ 1000 ಕಡೆ ಮೋದಿಯೊಂದಿಗೆ ಯುವಜನರಿಗೆ ವಿಡಿಯೋ ಕಾನ್ಫರೆನ್ಸ್‌ವೊಂದನ್ನು ಆಯೋಜಿಸಲಾಗಿದೆ. ಮೋದಿ ಮಾತುಗಳನ್ನು ಎಲ್ಲರೂ ಕೇಳಬಹುದು. ಆದರೆ, ಆಯ್ದ ಟೀಸ್ಟಾಲ್‌ಗಳಲ್ಲಿ ಮಾತ್ರ ಮೋದಿಯನ್ನು ಪ್ರಶ್ನಿಸುವ, ಅಭಿಪ್ರಾಯ ಹೇಳುವ ಅವಕಾಶ ಕಲ್ಪಿಸಲಾಗುತ್ತದೆ. ಮಂಗಳೂರಲ್ಲಿ 6 ಹಾಗೂ ರಾಜ್ಯದ ಎರಡು ಕಡೆ ಮೋದಿ ಜತೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ನೇರವಾಗಿ ಸಂವಾದ ನಡೆಸಬಹುದು. ಆದರೆ, ರಾಜ್ಯದ 25 ವಿಧಾನಸಭೆ ಕ್ಷೇತ್ರಗಳಲ್ಲಿ 82 ಕಡೆ ವೀಡಿಯೋ ಕಾನ್ಫರೆನ್ಸ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಮಾತನಾಡಲು ಅವಕಾಶ ಸಿಗದವರು ಎಸ್‌ಎಂಎಸ್, ವಾಟ್ಸ್ ಅಪ್ ಮೂಲಕ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು. ಅಭಿಪ್ರಾಯವನ್ನು ಬಿಜೆಪಿ ತನ್ನ ಅಜೆಂಡಾದಲ್ಲಿ ಬಳಸಿಕೊಳ್ಳಲಿದೆ. ಮೊದಲ ಬಾರಿಗೆ ಮತದಾನ ಮಾಡಲು ಅವಕಾಶ ಪಡೆಯುತ್ತಿರುವವರನ್ನೇ ಗುರಿಯಾಗಿಸಿಕೊಂಡು ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಯುವಜನರನ್ನು ಸೆಳೆಯಲು ತಂತ್ರ: 'ಚಾಯ್‌ವಾಲಾ' ಟೀಕೆಯನ್ನೇ ಬಳಸಿ ವಿರೋಧಿಗಳ ಮೇಲೆ ದೊಡ್ಡ ಅಸ್ತ್ರವನ್ನಾಗಿ ಪ್ರಯೋಗಿಸಲು ಮೋದಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಿದ್ಧರಾಗುತ್ತಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ, ಯುವಜನರನ್ನು ಗುರಿಯಾಗಿಟ್ಟುಕೊಂಡು ಪ್ರಚಾರಕ್ಕೆ ಧುಮುಕಿರುವುದಕ್ಕೆ ಪ್ರತಿಯಾಗಿ ಮೋದಿಯತ್ತ ಹೆಚ್ಚಿನ ಯುವಜನರನ್ನು ಸೆಳೆಯಲು ಈ ತಂತ್ರ ರೂಪಿಸಲಾಗಿದೆ.
 ಮುಂಬೈನ ಸಿಎಜಿ (ಈಐಖಿಐಘಊಿಃ ಋಕಖ ಆಈಈಕ್ಖಃಖಿಆಇಔಊ ಎಕಗಊಖಃಆಃಈಊ) ಈ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಇಂಥದ್ದೊಂದು ಕಾರ್ಯಕ್ರಮ ಫೆಬ್ರವರಿ ಎರಡನೇ ವಾರದಲ್ಲಿ ನಡೆಯಲಿದೆ. ಯಶಸ್ವಿಯಾದರೆ ಮತ್ತೆ ಮತ್ತೆ ಈ ರೀತಿಯ 'ಚಾಯ್ ಪೆ ಚರ್ಚಾ' ಗಲ್ಲಿ, ಗಲ್ಲಿಯ ಟೀಸ್ಟಾಲ್‌ಗಳಲ್ಲಿ ನಡೆಯಲಿದೆ ಎಂದು ನಮೋ ಬ್ರೀಗೇಡ್ ಸಂಚಾಲಕ ನರೇಶ್ ಶೆಣೈ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಮೋದಿಯೊಂದಿಗೆ ಸಂಪರ್ಕ ಹೇಗೆ?: ಟೀ ಸ್ಟಾಲ್‌ಗಳಲ್ಲಿ ಎರಡು ಟಿವಿ ಅಳವಡಿಸಿ, ಡಿಟಿಎಚ್ (ಉಪಗ್ರಹ ಆಧರಿತ) ಮೂಲಕ ಮೋದಿ ಗುಜರಾತ್‌ನಿಂದಲೇ ಯುವಜನರನ್ನು ಉದ್ದೇಶಿಸಿ ಮಾತನಾಡುವರು. ಟೀ ಸ್ಟಾಲ್ ಮತ್ತು ಹೊಟೇಲ್‌ಗಳಲ್ಲಿ ಸಂಜೆ 5 ಗಂಟೆಯಿಂದ 6.30ರವರೆಗೆ ಮಾತುಕತೆ ನಡೆಯಲಿದೆ. ಪ್ರತಿ ಕಡೆ 150ರಿಂದ 200 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಶೆಣೈ.
 ಸಿಎಜಿ ದೇಶಾದ್ಯಂತ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದಲ್ಲಿ ನಮೋ ಬ್ರೀಗೇಡ್ ಸಹಕಾರ ಕೋರಿದೆ.

ಜನರ ವಿಚಾರಗಳು, ಆದ್ಯತೆಗಳ ಬಗ್ಗೆ ಅದರಲ್ಲಿಯೂ ಯುವಜನರ ಆದ್ಯತೆ ಸಲಹೆಗಳನ್ನು ನರೇಂದ್ರ ಮೋದಿ ತಿಳಿದುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆ ಬೆಳವಣಿಗೆ.
-ಮಂಜು ನೀರೇಶ್ವಾಲ್ಯ, ನಮೋ ಬ್ರಿಗೇಡ್
ನಿಮ್ಮ ಇಶ್ಯು ನಮ್ಮ ಅಜೆಂಡಾ
'ಬನ್ನಿ ಜತೆ ಸೇರಿ ನಿಮ್ಮ ವಿಚಾರಗಳು ಮತ್ತು ಆದ್ಯತೆ ಮುಂದಿನ ಚುನಾವಣೆ ಕಾರ್ಯಸೂಚಿಯ ಭಾಗವಾಗಲಿದೆ' ಎಂದು ಕಾರ್ಯಕ್ರಮ ಬಗ್ಗೆ ಮೋದಿ ಘೋಷ ವಾಕ್ಯ ರೂಪಿಸಿದ್ದಾರೆ.

ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.