ಪ್ರಥಮ ಪಿಯು ಪರೀಕ್ಷೆ ಬಹಿಷ್ಕಾರ: ಉಪನ್ಯಾಸಕರಿಂದ ಸರ್ಕಾರಕ್ಕೆ ಬೆದರಿಕೆ
ಬೆಂಗಳೂರು: ಮೊರಾರ್ಜಿ ದೇಸಾಯಿ ಮತ್ತು ಏಕಲವ್ಯ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜುಗಳ ಸಿಬ್ಬಂದಿಗೆ ಆರನೇ ವೇತನ ಆಯೋಗದಂತೆ ಮೂಲ ವೇತನ ನೀಡಬೇಕು, ಇಲ್ಲವಾದಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬಹಿಷ್ಕರಿಸುವುದಾಗಿ ಸಿಬ್ಬಂದಿ ವರ್ಗದವರ ಸಂಘ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಆರನೇ ವೇತನ ಆಯೋಗ ಜಾರಿಗೆ ಬಂದು ಎರಡು ವರ್ಷಗಳಾದವು. ಆದರೆ ನೂತನ ನೇಮಕಕ್ಕೂ ಐದನೇ ವೇತನ ಆಯೋಗದಂತೆ ಮೂಲವೇತನ ನೀಡಲಾಗುತ್ತಿದೆ. ಇದಲ್ಲದೇ ರಜಾ ಕಾಲದ ಅಕ್ಟೋಬರ್ ತಿಂಗಳ ವೇತನವನ್ನು ನೀಡುತ್ತಿಲ್ಲ. ರಾಜ್ಯ ಸರ್ಕಾರ ಸಿಬ್ಬಂದಿ ವರ್ಗದ ಬೇಡಿಕೆಗೆ 10 ದಿನದೊಳಗೆ ಸ್ಪಂದಿಸದಿದ್ದರೆ ತರಗತಿ ಹಾಗೂ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ 2011-12ನೇ ಸಾಲಿನಲ್ಲಿ ಹೊರಗುತ್ತಿಯ ಮೂಲಕ 3 ಸಾವಿರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ವಸತಿ ಶಿಕ್ಷಣ ಸಂಘವು ಇವರನ್ನು ಕಡೆಗಣಿಸಿ ನೇಮಕ ಪ್ರಕ್ರಿಯೆ ನಡೆಸಿದೆ. ಪ್ರಾಂಶುಪಾಲರ ವರ್ಗಾವಣೆ ಹಾಗೂ ನೇಮಕ ಪ್ರಕ್ರಿಯೆಯಲ್ಲೂ ಇದೇ ರೀತಿಯ ಪ್ರಮಾದಗಳಾಗಿವೆ. ರಾಜ್ಯ ಸರ್ಕಾರ ಕೂಡಲೇ ಈ ಸಮಸ್ಯೆಗಳತ್ತ ಗಮನ ನೀಡಬೇಕು ಎಂದು ಸಿಬ್ಬಂದಿ ವರ್ಗದ ಸಂಘ ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

