ಪ್ರಧಾನ ಸುದ್ದಿ

ಕಾಶಪ್ಪನವರ್ ಕುಟುಂಬದ ದಾಂದಲೆ ದಾಖಲೆ!

ಕಾಶಪ್ಪನವರ್ ಕುಟುಂಬದ ದಾಂದಲೆ ದಾಖಲೆ!
Published On :

ಕನ್ನಡಪ್ರಭ ವಾರ್ತೆ, ಬಾಗಲಕೋಟೆ, ಜು.3-
ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಹೋಟೆಲ್ನಲ್ಲಿ ದಾಂದಲೆ ಮಾಡಿರುವ ಪ್ರಕರಣ ಹುನಗುಂದ ಜನರಲ್ಲಿ ಕುತೂಹಲವನ್ನೇ ಹುಟ್ಟಿಸಿಲ್ಲ!
ಒಂದಿಷ್ಟು ಮಂದಿ ಆ ಕುಟುಂಬಕ್ಕೆ ದಾಂದಲೆ ಮಾಮೂಲಿ ಬಿಡ್ರಿ ಅಂದರೆ, ಇನ್ನಷ್ಟು ಮಂದಿ ವಿಮರ್ಶೆಯ ಉಸಾ ಬರಿಗೇ ಹೋಗುತ್ತಿಲ್ಲ. ಇಳಕಲ್ ಗ್ರಾನೈಟ್ ಲಾಬಿ 'ರಿಪಬ್ಲಿಕ್ ಆಫ್ ಹುನಗುಂದ' ಎಂಬ ವಾತಾವರಣ ಸೃಷ್ಟಿಸಿರುವುದೇ ಇದಕ್ಕೆ ಕಾರಣ!

ಒಟ್ಟು 15 ಪ್ರಕರಣ: ಜಿಲ್ಲಾ ಪೊಲೀಸ್ ಕಚೇರಿ ದಾಖಲೆ ಪ್ರಕಾರ ವಿಜಯಾನಂದ ಮೇಲೆ ಗಲಾಟೆ, ದಾಂದಲೆಗಳಂಥ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಆರು ಸಾಕ್ಷ್ಯಾಧಾರ ಇಲ್ಲದೆ ಖುಲಾಸೆಯಾಗಿವೆ. ಐದರಲ್ಲಿ  ಬಿ ರಿಪೋರ್ಟ್ ಹಾಕಿದ್ದಾರೆ. ನಾಲ್ಕು ವಿಚಾರಣಾ ಹಂತದಲ್ಲಿವೆ. ಪ್ರಕರಣಗಳ ವಿವರ ನೀಡಲು ಎಸ್ಪಿ ಕೂಡಾ ಹಿಂಜರಿದರು.

ಖುಲಾಸೆ: 2001 ಗ್ರಾನೈಟ್ ಕಲ್ಲು ಖರೀದಿಗೆ ಬಂದಿದ್ದ ಚೀನಾದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದ್ದರೆಂಬ ಆರೋಪಕ್ಕೆ ಸಂಬಂಧಿಸಿ ಹುನಗುಂದ ನ್ಯಾಯಾಲಯದಲ್ಲಿದ್ದ ಪ್ರಕರಣ ಕುತೂಹಲ ಕೆರಳಿಸಿತ್ತು. ಕೊನೆಗೆ ಸಾಕ್ಷಿ ಇಲ್ಲದೆ ಖುಲಾಸೆಯಾಗಿತ್ತು. ಜಮಿನು ವಿವಾದಕ್ಕೆ ಸಂಬಂಧಿಸಿದಂತೆ 2009ರಲ್ಲಿ ಹೆರೂರ ಗ್ರಾಮದ ಚಂದ್ರಹಾಸ ಹೆರೂರ ಹಾಗೂ ಇತರರ ಮೇಲೆ ಹಲ್ಲೆ ಪ್ರಕರಣದಲ್ಲಿ ಬಾಗಲಕೋಟೆ ನ್ಯಾಯಾಲಯ ನಿರ್ದೋಷಿಯೆಂದು ಪರಿಗಣಿಸಿತ್ತು.
ಇಳಕಲ್ಲ ಪೇದೆ ಲಕ್ಕುಂಡಿಗೆ ಅವಾಚ್ಯ ನಿಂದನೆ, ಗಣಿ ಮತ್ತು ಭೂಗರ್ಭ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ದಾಂದಲೆ ವಿಚಾರವಾಗಿ ಪ್ರಕರಣ ದಾಖಲಾಗಿತ್ತು. ಹುನಗುಂದ ಪಿಎಲ್ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆ ವೇಳೆ ದಲಿತ ವ್ಯಕ್ತಿಯ ಮೇಲೆ ಹಿಂಬಾಲಕರು ಹಲ್ಲೆ ನಡೆಸಿದ್ದಾರೆಂದು ಶಾಸಕರ ಸಹೋದರ ದೇವಾನಂದ ಕಾಶಪ್ಪನವರ ಮೇಲೆ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಯಶ್ರೀಗೆ ಅಪಮಾನ:
ಇಳಕಲ್ನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಸಭೆ ಸದಸ್ಯೆ, ಕಲಾವಿದೆ ಬಿ. ಜಯಶ್ರೀ ಅವರನ್ನು ದೇವಾನಂದ ಕಾಶಪ್ಪವನರ ಅವಮಾನಿಸಿದ ಪ್ರಕರಣವೂ ನಡೆದಿತ್ತು. ಜಯಶ್ರೀ ಅವರಿಗೆ ಪ್ರವಾಸಿ ಮಂದಿರದಲ್ಲಿ ಕೊಠಡಿ ನಿಯೋಜನೆಯಾಗಿತ್ತು. ಆದರೆ ಅದೇ ಕೊಠಡಿಯಲ್ಲಿ ಸಭೆ ನಡೆಸುತ್ತಿದ್ದ ದೇವಾನಂದ, ಜಯಶ್ರೀ ಅವರಿಗೆ ಕೊಠಡಿ ಬಿಟ್ಟುಕೊಡದೇ ಅವಮಾನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.