ಪ್ರಧಾನ ಸುದ್ದಿ

ಕೂಡಗಿ ಸ್ಥಾವರಕ್ಕೆ ಆರಂಭದಿಂದಲೂ ವಿರೋಧ

Published On :

ಬಿಜಾಪುರ: ಕೂಡಗಿ ಬಳಿ ನಿರ್ಮಾಣವಾಗುತ್ತಿರುವ 4 ಸಾವಿರ ಮೆ.ವ್ಯಾ. ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಶನಿವಾರದ ಹಿಂಸಾಚಾರ ಬಳಿಕ ಮತ್ತೆ ಚರ್ಚೆಗೆ ಬಂದಿದೆ. ಈ ಉಷ್ಣವಿದ್ಯುತ್ ಸ್ಥಾವರ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ತದಡಿಯಿಂದ ಕೂಡಗಿ ಬಳಿ ಒಕ್ಕರಿಸಿದೆ.



2009ರಲ್ಲಿ ಭೂಮಿ ಸಮೀಕ್ಷೆ ಹಾಗೂ ರಾಜ್ಯ ಸರ್ಕಾರ ಈ ಯೋಜನೆಗೆ ಎನ್ಟಿಪಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿತು.


2012ರ ಜ. 25ರಂದು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ) ದಿಂದ 4,000 ಮೆ.ವ್ಯಾ. ಉಷ್ಣ ವಿದ್ಯುತ್ ಸ್ಥಾವರಕ್ಕೆ ಅನುಮತಿ ಸಿಕ್ಕಿತು.


2012 ಜೂ.2ರಂದು ಸ್ಥಾವರ ನಿರ್ಮಾಣ ಕಾಮಗಾರಿಗೆ ಆಗಿನ ಕೇಂದ್ರ ಇಂಧನ ಸಚಿವ ಸುಶೀಲ್ಕುಮಾರ್ ಶಿಂದೆ ಕಾಮಗಾರಿಗೆ ಚಾಲನೆ ನೀಡಿದ್ದರು. ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಈಗ ನಿರ್ಮಾಣ ಹಂತದಲ್ಲಿದೆ.


2015ರ ವೇಳೆಗೆ 1ನೇ ಘಟಕ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಎನ್ಟಿಪಿಸಿ ಕಾಮಗಾರಿ ಕೈಗೊಂಡಿದ್ದು, ಸದ್ಯ ಪ್ರಗತಿಯಲ್ಲಿದೆ.


2012ರಲ್ಲಿ ರೈತರ ಈ ಅರ್ಜಿ ತಿರಸ್ಕೃತಗೊಂಡಿತು. ಬಳಿಕ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಯಿತು.


ಫಲವತ್ತಾದ 3,200 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆಲಮಟ್ಟಿ ಅಣೆಕಟ್ಟೆಯಿಂದ 5.2 ಟಿಎಂಸಿ ನೀರು ಪಡೆಯುವುದರಿಂದ ಈ ಭಾಗದ 52,000 ಎಕರೆ ಜಮೀನು ನೀರಾವರಿಯಿಂದ ವಂಚನೆಗೊಳ್ಳಲಿದೆ. ಹಾರು ಬೂದಿಯಿಂದ ಪರಿಸರ ಹಾಗೂ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿಯಿಂದ ರೈತರು ಈ ಯೋಜನೆ ವಿರೋಧಿಸುತ್ತಿದ್ದಾರೆ.


2010ರಲ್ಲಿ ಈ ಯೋಜನೆ ವಿರೋಧಿಸಿ ಬಸವನ ಬಾಗೇವಾಡಿಯಿಂದ ಕೂಡಲಸಂಗಮದವರೆಗೆ ರೈತರು ಪಾದಯಾತ್ರೆ ನಡೆಸಿದ್ದರು.


2011ರಲ್ಲಿ ನಿವೃತ್ತ ಅಣು ವಿಜ್ಞಾನಿ ಎಂ.ಪಿ. ಪಾಟೀಲ ನೇತೃತ್ವದಲ್ಲಿ ಪರಿಸರ ರಕ್ಷಣಾ ಸೇವಾ ವೇದಿಕೆ ಹೈಕೋರ್ಟ್ಗೆ ಮೊರೆಯಿಟ್ಟು ಅರ್ಜಿ ಸಲ್ಲಿಸಿತ್ತು.  


2012ರಲ್ಲಿ ರೈತರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸಿದರು.



2014ರ ಮಾ.13ರಂದು ಹಸಿರು ನ್ಯಾಯಾಧಿಕರಣ ರೈತರ ಪರ ತೀರ್ಪು ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.


ಎನ್ಟಿಪಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತೆರವುಗೊಳಿಸಿ ಮತ್ತೆ ಕಾಮಗಾರಿ ಆರಂಭಿಸಿತು.


ಕೃಷ್ಣಾ ನದಿಯಿಂದ ನೀರು ತರುವ ಎನ್ಟಿಪಿಸಿಯ ಪೈಪ್ಲೈನ್ ಅಳವಡಿಕೆ ಕಾಮಗಾರಿಗೂ ರೈತರು ಪ್ರತಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.