ಪ್ರಧಾನ ಸುದ್ದಿ

ರೈಲು ಹಳಿ ಮೇಲೆ ಮೋದಿ ಅಭಿವೃದ್ಧಿ ದಿಕ್ಸೂಚಿ

ರೈಲು ಹಳಿ ಮೇಲೆ ಮೋದಿ ಅಭಿವೃದ್ಧಿ ದಿಕ್ಸೂಚಿ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ದಿಕ್ಸೂಚಿ ರೇಲ್ವೆ ಸಚಿವ ಡಿ.ಬಿ. ಸದಾನಂದಗೌಡರ ಬಜೆಟ್ನಲ್ಲಿ ಪ್ರತಿಬಿಂಬಿತವಾಗಲಿದೆ.
ಸದಾನಂದಗೌಡರ ರೇಲ್ವೆ ಬಜೆಟ್ ರಾಜಕಾರಣದಿಂದ ಬಹುದೂರ ಸರಿದು ವಾಸ್ತವಕ್ಕೆ ಹತ್ತಿರವಾಗಲಿದೆ. ಹೀಗಾಗಿ ಕರ್ನಾಟಕ ರಾಜ್ಯ ಸೇರಿದಂತೆ ಯಾವ ರಾಜ್ಯಗಳಿಗೂ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಹೊಸ ಮಾರ್ಗಗಳ ಘೋಷಣೆ ಇರುವುದಿಲ್ಲ.
ಅಷ್ಟೆ ಅಲ್ಲ ರಾಜಕಾರಣಕ್ಕಾಗಿ ಈಗಾಗಲೇ ಘೋಷಣೆ ಆಗಿರುವ, ಆದರೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಹಲವು ಘೋಷಿತ ಮಾರ್ಗಗಳು, ಯೋಜನೆಗಳು ರದ್ದಾಗುವ ನಿರೀಕ್ಷೆ ಇದೆ.
ಬಜೆಟ್ಗೆ ಮುನ್ನ ಶೇ. 14.2ರಷ್ಟು ದರ ಏರಿಸಿರುವ ಸದಾನಂದಗೌಡರ ಮುಂದೆ ಇರುವುದು ಮೂರೇ ಅಂಶ- ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಸುರಕ್ಷಿತ ಸಂಚಾರ, ಸಂಪನ್ಮೂಲ ಕ್ರೋಡೀಕರಣ ರೈಲ್ವೆ ಸಂಪನ್ಮೂಲಗಳ ಸಮರ್ಥ ಸದ್ಬಳಕೆ ಮತ್ತು ರಕ್ಷಣೆ, ಭಧ್ರತೆ ಮತ್ತು ವೇಗ.
ಈ ಮೂರಂಶಗಳ ಜಾರಿ ಮಾಡಲು ಅವರಿಗೆ ನರೇಂದ್ರಮೋದಿ ಕೃಪಾಕಟಾಕ್ಷ ಇದೆ. ಸದ್ಯಕ್ಕೆ ಪ್ರಸಕ್ತ ವರ್ಷದಲ್ಲಿ 26000 ಕೋಟಿ ನಗದು ಕೊರತೆಯನ್ನು ನೀಗಿಸುವುದು ಅವರ ಮುಂದಿರುವ ಸವಾಲು. ಅದಕ್ಕೆ ದಾರಿಯೂ ಇದೆ.
ಪರ್ಯಾಯ ಇಂಧನ ಮೂಲಗಳ ಬಳಕೆ. ಆರ್ಥಿಕ ಲಾಭ ತರುವ ಮಾರ್ಗಗಳಲ್ಲಿ ಹೆಚ್ಚು ರೈಲು ಸಂಚಾರ, ಸುವರ್ಣ ಚತುಷ್ಪಥ ಮಾದರಿಯಲ್ಲಿ ಹೈಸ್ಪೀಡ್ ರೈಲುಗಳ ವಜ್ರ ಚತುಷ್ಪಥ ನಿರ್ಮಾಣ, ಇಂಧನ ವೆಚ್ಚಾಧಾರಿತ ಸುಧಾರಿತ ದರ ನಿಗದಿ ವ್ಯವಸ್ಥೆ ವಿಸ್ತರಣೆ.
ಖಾಸಗಿಯವರ ಸಹಭಾಗಿತ್ವಕ್ಕೆ ಒತ್ತು. ರೇಲ್ವೆ ಅಧೀನದಲ್ಲಿರುವ ವಿವಿಧ ಕಾರ್ಪೋರೆಷನ್ಗಳಲ್ಲಿ ಬಂಡವಾಳ ಹಿಂತೆಗೆತದಿಂದ ಸಂಪನ್ಮೂಲ ಕ್ರೋಡೀಕರಣ.
ರೈಲ್ವೆಗೆ ಸೇರಿದ ಆಸ್ತಿಗಳ ಬಳಕೆ: ರೈಲು ಅಪಘಾತ ಪ್ರಮಾಣ ಗಣನೀಯವಾಗಿ ತಗ್ಗಿಸುವುದು, ಕಾಲಮಿತಿಯಲ್ಲಿ ಅಪಘಾತ ರಹಿತ ಪ್ರಯಾಣ ವ್ಯವಸ್ಥೆಗೆ ತಂತ್ರಜ್ಞಾನಾಧಾರಿತ ಯೋಜನೆ ಅನುಷ್ಠಾನ.


ಇವು ಸದಾನಂದಗೌಡರ ಮುಂದಿರುವ ಕ್ರಮಗಳು
-  ನಿರೀಕ್ಷಿತ ಯೋಜನೆಗಳು: ನಿತ್ಯ ಸರಾಸರಿ 3 ಲಕ್ಷ ಪ್ರಯಾಣಿಕರು ಬಂದು ಹೋಗುವ ವಾರಣಾಸಿ ರೈಲ್ವೆ ನಿಲ್ದಾಣದ ಆಧುನೀಕರಣ. ವಾರಣಾಸಿ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳಿಗೆ ಹೆಚ್ಚಿನ ರೈಲು ಸಂಚಾರ ಮತ್ತು ರೈಲು ನಿಲ್ದಾಣಗಳ ಆಧುನೀಕರಣ. ಹಳೆಯ ರೈಲು ಎಂಜಿನಗಳಿಗೆ ವಿದಾಯ, ಹೆಚ್ಚು ಇಂಧನ ಕ್ಷಮತೆ ಮತ್ತು ವೇಗದ ಎಂಜಿನ್ಗಳಿಗೆ ಆದ್ಯತೆ. ಸುಧಾರಿತ ಬೋಗಿಗಳು. ಸುಧಾರಿತ ಶೌಚಾಲಯಗಳು ಹಾಗೂ ಸುಧಾರಿತ ಶೌಚನಿರ್ವಹಣಾ ವ್ಯವಸ್ಥೆ. ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆ ಹೆಚ್ಚು ರೈಲುಗಳಿಗೆ ವಿಸ್ತರಣೆ.



ರೇಲ್ವೆ ಸಿಬ್ಬಂದಿ ಮತ್ತು ಕುಟುಂಬದವರಿಗೆ ಹೆಚ್ಚು ಸೌಲಭ್ಯ
ಟಿ  ಮಧ್ಯಂತರ ಬಜೆಟ್ನಲ್ಲಿ ಏನಿತ್ತು: ಮಲ್ಲಿಕಾರ್ಜುನ ಖರ್ಗೆ ಅವರು ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ರೇಲ್ವೆ ಬಜೆಟ್ನಲ್ಲಿ 1.65 ಲಕ್ಷ ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಈ ಪೈಕಿ 1.06 ಲಕ್ಷ ಕೋಟಿ ಸರಕು ಸಾಗಣೆಯಿಂದ, 45,255 ಕೋಟಿ ರುಪಾಯಿ ಪ್ರಯಾಣಿಕರಿಂದ, ಉಳಿದದ್ದು ಇತರೆ ಆದಾಯಗಳಿಂದ ಸಂಗ್ರಹಿಸುವ ಗುರಿ ಇತ್ತು. 64000 ಕೋಟಿ ವಾರ್ಷಿಕ ಯೋಜನೆ ಜಾರಿಗೆ 40000 ಕೋಟಿ ರುಪಾಯಿ ಸರ್ಕಾರದಿಂದ ನೆರವು ಕೋರಲಾಗಿತ್ತು. ಏಪ್ರಿಲ್ 1ರಿಂದ ಮಧ್ಯಂತರ ಬಜೆಟ್ ಜಾರಿ ಆಗಿದ್ದರೂ, ದರ ಪರಿಷ್ಕರಣೆ ಜಾರಿ ಆಗಿರಲಿಲ್ಲ. ಹೀಗಾಗಿ ಸುಮಾರು 3000 ಕೋಟಿ ಹೆಚ್ಚುವರಿ ನಷ್ಟದ ಹೊರೆ ಬಿದ್ದಿದೆ. ಅದನ್ನೂ ಸರಿದೂಗಿಸಬೇಕಿದೆ.

ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.