ಪ್ರಧಾನ ಸುದ್ದಿ

ಪ್ರಯಾಣಿಕರ ಭದ್ರತೆ

ಪ್ರಯಾಣಿಕರ ಭದ್ರತೆ
Published On :

ಬಹುತೇಕ ಸಂದರ್ಭಗಳಲ್ಲಿ ಕಿಡಿಗೇಡಿಗಳ ಹೀನಕೃತ್ಯಕ್ಕೆ ಬಲಿಯಾಗುವುದು ಮಹಿಳೆಯೇ. ಹೀಗಾಗಿ ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡಿದ್ದೇನೆ.  ಅದರಲ್ಲೂ ವಿಶೇಷವಾಗಿ 4000 ಆರ್ಪಿಎಫ್ ಮಹಿಳಾ ಪೇದೆಗಳನ್ನು ನಿಯೋಜಿಸಲಿದ್ದೇನೆ. ಇವರು ಮಹಿಳೆಯರಿಗೆ ಅಗತ್ಯ ಭದ್ರತೆ ಕಲ್ಪಿಸಲಿದ್ದಾರೆ. ಈಗಾಗಲೇ 17 ಸಾವಿರ ಪೇದೆಗಳಿದ್ದಾರೆ. ಇವರ ಜೊತೆ ಇವರೂ ಕೆಲಸ ಮಾಡಲಿದ್ದಾರೆ. ಹಳಿಗಳ ಮೇಲ್ಸೇತುವೆ, ಅಂಡರ್ಪಾಸ್ಗಳ ನಿರ್ಮಾಣಕ್ಕಾಗಿ ರು. 1,785 ಕೋಟಿ ಮೀಸಲಿಡಲು ನಿರ್ಧರಿಸಿದ್ದೇನೆ. ಇಂಥ ಯೋಜನೆಗಳು ಸುಮ್ಮನೆ ಆಗುವುದಿಲ್ಲ. ಆಯಾ ರಾಜ್ಯಗಳೇ ರೈಲ್ವೆ ಇಲಾಖೆಯ ಗಮನಕ್ಕೆ ತರಬೇಕು.  
ಇನ್ನು ಮುಂದೆ ಸಿಬ್ಬಂದಿ ರಹಿತ ಕ್ರಾಸಿಂಗ್ಗಳು ಮಾಯವಾಗಲಿವೆ. ಇಲ್ಲಿ ಸಿಬ್ಬಂದಿ ನೇಮಕಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವೆ. ರೈಲುಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲು ಚಿಂತನೆ ನಡೆಸಿದ್ದೇನೆ. ನಿಲ್ದಾಣ ಬಿಡುವ ಮುನ್ನ ಈ ಸ್ವಯಂಚಾಲಿತ ಬಾಗಿಲುಗಳು ಮುಚ್ಚಲಿದ್ದು ಸೂಕ್ತ ಭದ್ರತೆ ನೀಡಲಿವೆ.
ಹಳಿ ಬಿರುಕು ಪತ್ತೆಗಾಗಿ ವಾಹನ ಚಾಲಿತ ಅಲ್ಟ್ರಾಸಾನಿಕ್ ಫ್ಲಾ ಡಿಟೆಕ್ಷನ್ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಅಲ್ಲದೆ, ಮುರಿದ ಹಳಿಗಳ ರಿಪೇರಿಗಾಗಿ ಅಲ್ಟ್ರಾಸಾನಿಕ್ ಬ್ರೋಕನ್ ರೇಲ್ ಡಿಟೆಕ್ಷನ್ (ಯುಬಿಆರ್ಡಿ) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಯುಬಿಆರ್ಡಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.