ಹಣಕಾಸು ವೆಚ್ಚ ಹೇಗೆ?

(ಕೋಟಿಗಳಲ್ಲಿ)
ರು 1.64 ಲಕ್ಷ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಗ್ರಹ ಗುರಿ
ರು.1,49,176 ಅಂದಾಜು ಖರ್ಚು ವೆಚ್ಚ
ರು. 11, 790 ಇಲಾಖೆ ಪಡೆಯಲುದ್ದೇಶಿಸಿದ ಸಾಲ
ರು. 1,05,770 ಸರಕು ಸಾಗಣೆ ಆದಾಯ
ರು.44,645 ಪ್ರಯಾಣಿಕರ ಸೇವೆ ಆದಾಯ
2013- 14ರಲ್ಲಿ ರೈಲ್ವೆ ಸಾಧನೆ
105 ಕೋಟಿ ಟನ್. ರೈಲ್ವೆ ಸರಕು ಸಾಗಣೆ ಮಾಡಿದ್ದು
ರು. 1,29,558 ಕೋಟಿ. ಒಟ್ಟಾರೆ ಆದಾಯ
ರು. 97,571 ಕೋಟಿ. ಸಾಮಾನ್ಯ ವೆಚ್ಚ
ರು. 968 ಕೋಟಿ. ಪರಿಷ್ಕೃತ ಗುರಿಗಿಂತ ಸಂಗ್ರಹವಾದ ಕಡಿಮೆ ಆದಾಯ
ರು.1,39,558 ಕೋಟಿ ಒಟ್ಟಾರೆ ಆದಾಯ ಸಂಗ್ರಹಣೆ ಹೆಚ್ಚಳ
ರು. 97,571 ಕೋಟಿ. ಸಾಮಾನ್ಯ ಖರ್ಚು ವೆಚ್ಚ (ಹೆಚ್ಚುವರಿ 511 ಕೋಟಿ)
ರು.7,943 ಕೋಟಿ. ನಿರೀಕ್ಷಿತ ಆದಾಯ
ರು. 3,783 ಕೋಟಿ ಸಂಗ್ರಹವಾದ ಆದಾಯ
ರು. 11,710 ಕೋಟಿ. ಆರಂಭದ ಆಂತರಿಕ ಸಂಪನ್ಮೂಲ ಯೋಜನೆ
ರು. 14,496 ಕೋಟಿ. ಪರಿಷ್ಕೃತ ಆಂತರಿಕ ಸಂಪನ್ಮೂಲ ಯೋಜನೆ
ರು. 2,786 ಕೋಟಿ. ಅವೆರಡರ ಕೊರತೆ ಮೊತ್ತ
ರು. 59,359 ಕೋಟಿ. ಕಡಿಮೆಯಾಗಿರುವ ಪರಿಷ್ಕೃತ ಯೋಜನಾ ವೆಚ್ಚ
ಸಿಬ್ಬಂದಿ ಅಭಿವೃದ್ಧಿಗೆ ಪ್ರಾಶಸ್ತ್ಯ
ರೈಲ್ವೆ ಸಿಬ್ಬಂದಿ ಚೆನ್ನಾಗಿದ್ದರೆ ಇಲಾಖೆಯೂ ಚೆನ್ನಾಗಿರುತ್ತದೆ. ಇದನ್ನರಿತು ಸಿಬ್ಬಂದಿ ಅನುಕೂಲ ನಿಧಿಯನ್ನು ತಲಾ ರು. 500ರಿಂದ ರು. 800ಕ್ಕೆ ಹೆಚ್ಚಿಸಲಿದ್ದೇನೆ. ಅಲ್ಲದೇ, ಸಿಬ್ಬಂದಿಯ ಮಕ್ಕಳಿಗೆ ವಿಶೇಷ ಸವಲತ್ತನ್ನು ನೀಡಲು ನಿರ್ಧರಿಸಿದ್ದೇನೆ. ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆ ತೋರುವ ಅಂಥ ಮಕ್ಕಳಿಗೆ ವಿಶೇಷ ಉತ್ತೇಜನ ನೀಡಲು ತೀರ್ಮಾನಿಸಿದ್ದೇನೆ. ಲೋಕೊ ಕ್ಯಾಬಿನ್ಗಳಲ್ಲಿ ಏರ್ ಕಂಡೀಷನ್ಗಳನ್ನು ಅಳವಡಿಸಿ, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಕೂಲ ಕಲ್ಪಿಸಲು ನಿರ್ಧಾರ ಮಾಡಿದ್ದೇನೆ. ದಲ್ಲದೇ, ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ನಡುವಿನ ಮಾಹಿತಿ ವಿನಮಯಕ್ಕೆ ಹೊಸ ವ್ಯವಸ್ಥೆ ಅಳವಡಿಸಲಾಗುತ್ತದೆ.
ಸಾಮಾಜಿಕ ಬದ್ಧತೆಗೆ ವೆಚ್ಚ ಅಡ್ಡಿಯಾಗದು
ವಿಶ್ವದಲ್ಲೇ ಅತ್ಯಂತ ದೊಡ್ಡ ರೈಲ್ವೆ ಜಾಲ ಹೊಂದಿರುವ ನಮ್ಮ ಇಲಾಖೆಗೆ ಸಾಮಾಜಿಕ ಬದ್ಧತೆಯೂ ಇದೆ ಎಂದು ಹೇಳಲು ಬಯಸುತ್ತೇನೆ. ಒಟ್ಟು ಸಂಚಾರ ಆದಾಯ 2000-2001ನೇ ವರ್ಷ ಶೇ.9.4ರಷ್ಟಿದ್ದರೆ 2010-11ರಲ್ಲಿ ಶೇ.16.6ಕ್ಕೆ ಏರಿಕೆಯಾಗಿತ್ತು. ನನ್ನ ಇಲಾಖೆಯಲ್ಲಿ ಖರ್ಚುವೆಚ್ಚ ಹೆಚ್ಚುತ್ತಿದ್ದರೂ ನಾವು ಸಾಮಾಜಿಕ ಕಳಕಳಿಯನ್ನು ಕಾಯ್ದುಕೊಂಡು ಬಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 2012-13ನೇ ಸಾಲಿನಲ್ಲಿ ಅದು 20 ಸಾವಿರ ಕೋಟಿಯಾಗಿತ್ತು. ಅದೇ ವರ್ಷ ರೈಲ್ವೆ ಬಜೆಟ್ನಲ್ಲಿ ಒಟ್ಟು ಬಂಡವಾಳ ಹೂಡಿಕೆ 35,241 ಕೋಟಿ ನಿಗದಿ ಮಾಡಿದ್ದೆವು. ಇದು ನಮ್ಮ ಇಲಾಖೆಗೆ ಹೊರೆಯಾಗುತ್ತಿದ್ದರೂ ಸಾಮಾಜಿಕ ಕಳಕಳಿಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡುವುದರಿಂದ ಇತರ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಉಂಟಾಗುತ್ತದೆ. ಇದರ ಹೊರತಾಗಿಯೂ ರೈಲ್ವೆ ಇಲಾಖೆ ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಮುಂದುವರಿಸುತ್ತದೆ ಎಂದು ನಾನು ಪ್ರತಿಪಾದಿಸುತ್ತೇನೆ.
ಇದೊಂದು ಅಭಿವೃದ್ಧಿ ಪರ ಬಜೆಟ್. 30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಬಜೆಟ್ನಲ್ಲಿ ಪ್ರಕಟಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ರೈಲ್ವೆ ಸಚಿವರಿಗೆ ಅಭಿನಂದನೆ. ಡೈಮಂಡ್ ಚತುಷ್ಪಥ ಆದಷ್ಟು ಬೇಗ ಪೂರ್ಣಗೊಳಿಸಲು ಈ ಬಜೆಟ್ನಲ್ಲಿ ನಿರ್ಧರಿಸಲಾಗಿದೆ. ಇದರಿಂದ ಮುಂಬೈ- ಬೆಂಗಳೂರು ಮಾರ್ಗವಾಗಿ ಹೈಸ್ಪೀಡ್ ರೈಲು ಓಡಿಸಬಹುದು.
- ಸುರೇಶ ಅಂಗಡಿ, ಬೆಳಗಾವಿ ಸಂಸದ
ಬೆಳಗಾವಿ ಜಿಲ್ಲೆಯ ಪಾಲಿಗೆ ರಾಜ್ಯದವರೇ ಆಗಿರುವ ರೈಲ್ವೆ ಸಚಿವ ಸದಾನಂದಗೌಡರು ಮಂಡಿಸಿರುವ ಬಜೆಟ್ದಲ್ಲಿ ಅನ್ಯಾಯವಾಗಿದೆ. ಬೆಳಗಾವಿ ಗೆ ಹೊಸ ರೈಲು ನೀಡಿಲ್ಲ. ಜಿಲ್ಲೆಗೆ ಅನುಕೂಲಕರವಾಗುವಂಥ ಹೊಸ ಮಾರ್ಗಗಳ ರಚನೆಗೂ ಅವಕಾಶ ಸಿಕ್ಕಿಲ್ಲ. ಇದು ಬಿಜೆಪಿ ಸರ್ಕಾರದ ಅತ್ಯಂತ ನಿರಾಶಾದಾಯಕ ಬಜೆಟ್. ಉತ್ತರ ಕರ್ನಾಟಕವನ್ನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
- ಪ್ರಕಾಶ ಹುಕ್ಕೇರಿ, ಚಿಕ್ಕೋಡಿ ಸಂಸದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


