ಬೋಧಕರ ವರ್ಗ ಅರ್ಜಿ ಸಲ್ಲಿಕೆಗೆ 20 ಕೊನೆ ದಿನ ಅಂತೆ!
ಬಾಗಲಕೋಟೆ: ಸರ್ಕಾರಿ ಸುತ್ತೋಲೆಗೆ ಸರ್ಕಾರದಿಂದಲೇ ಕಿಮ್ಮತ್ತಿಲ್ಲವೇ? ವರ್ಗಾವಣೆ ಅಂತಿಮ ದಿನಾಂಕ ಮುಂದೂಡಿ ಒಂದರ ಹಿಂದೊಂದರಂತೆ ಹೊರಡಿಸಿದ ಸುತ್ತೋಲೆಗಳು ಇಂಥದ್ದೊಂದು ಪ್ರಶ್ನೆ ಹುಟ್ಟಿಹಾಕಿದೆ.
ಒಮ್ಮೆ ಆದೇಶ ಹೊರಡಿಸಿ ಜೂ. 20ರ ನಂತರ ಸರ್ಕಾರಿ ನೌಕರರ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ಮಾಡಲ್ಲ ಎಂಬ ಸುತ್ತೋಲೆ ಹೊರಡಿಸಿತ್ತು.
ಬಳಿಕ ಶಾಸಕರ ಒತ್ತಡಕ್ಕೆ ಮಣಿದು ವರ್ಗಾವಣೆ ಅಂತಿಮ ದಿನಾಂಕವನ್ನು ಜು.10ಕ್ಕೆ ಮುಂದೂಕಿತು. ಈಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗಾವಣೆ ಅಂತಿಮ ದಿನ ಜು.20 ಎಂದು ಹೇಳಿದೆ.
ಜು.20ಕ್ಕೇ ಮುಗಿಯುತ್ತಾ?
ಸರ್ಕಾರದ ಈಗಿನ ಸುತ್ತೋಲೆ ಜು. 20 ಕಡೇ ದಿನವೆಂದು ತಿಳಿಸಿದೆ. ಆದರೆ ಅರ್ಜಿ ಸಲ್ಲಿಕೆ ಅವಧಿ ಅದೇ ದಿನ ಕೊನೆಗೊಳ್ಳುತ್ತದೆಯೋ ಅಥವಾ ಮತ್ಯಾರದೋ ಲಾಬಿಗೆ ಮಣಿದು ಮತ್ತೆ ಮುಂದೂಡಲಿದೆಯೋ ಎಂಬುದೇ ಈಗಿರುವ ಪ್ರಶ್ನೆ.
ಗಣಕೀಕೃತ ಕೌನ್ಸೆಲಿಂಗ್
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆ 2012 ಅನ್ನು 1-4-2014ರಿಂದ ಜಾರಿಗೆ ತರಲಾಗಿದೆ. ಇದರನ್ವಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಯಲಿದೆ. ಇದಕ್ಕಾಗಿ ಸಿಬ್ಬಂದಿ ಕಾರ್ಯನಿರ್ವಹಿಸುವ ಕಾಲೇಜಿನ ಇಎಂಐಎಸ್ ಲಾಗಿನ್ ಬಳಸಿ ವರ್ಗಾವಣೆ ಸಂಬಂಧ ಅವಶ್ಯವಿರುವ ನೌಕರರ ಪ್ರಮುಖ ಮಾಹಿತಿ ಅಪ್ಲೋಡ್ ಮಾಡಿ ಕೇಂದ್ರ ಕಚೇರಿಗೆ ಕಳಿಸಬೇಕು. ನಂತರ ವರ್ಗಾವಣೆ ಬಯಸಿದ ಸಿಬ್ಬಂದಿ ನಿರ್ದಿಷ್ಟ ನಮೂನೆಯಲ್ಲಿ ಪ್ರಾಂಶುಪಾಲರಿಗೆ ಅರ್ಜಿ ನೀಡಬೇಕು. ಇಲ್ಲಿ ಹೆಸರು, ಕೆಜಿಐಡಿ ಸಂಖ್ಯೆ, ವರ್ಗಾವಣೆ ಕೋರಿದ ಸ್ಥಳ, ದಂಪತಿ ಪ್ರಕರಣ, ಖಾಯಿಲೆ, ಅಂಗವಿಕಲತೆ, ಮುಂತಾದ ಕಾರಣಗಳು ನಮೂದಾಗಿರುತ್ತದೆ. ವರ್ಗ ಬಯಸಿರುವ ಸಿಬ್ಬಂದಿಯಿಂದ ಮಾಹಿತಿ ಪಡೆದ ಪ್ರಾಂಶುಪಾಲರು ಕಾಲೇಜಿನ ಇಎಮ್ಐಎಸ್ ಲಾಗಿನ್ ಬಳಸಿ ಟ್ರಾನ್ಸ್ಫರ್ (2014-15) ಲಿಂಕ್ ಮೂಲಕ ಅಪ್ಲೋಡ್ ಮಾಡುತ್ತಾರೆ. ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದ ದಾಖಲಾತಿಗಳೇನಾದರೂ ಇದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

