ಪ್ರಧಾನ ಸುದ್ದಿ

ಕದ್ದು ಮುಚ್ಚಿ ಕಾವೇರಮ್ಮನ ಹರಿ ಬಿಟ್ರಲ್ಲಪ್ಪ!

ಕದ್ದು ಮುಚ್ಚಿ ಕಾವೇರಮ್ಮನ ಹರಿ ಬಿಟ್ರಲ್ಲಪ್ಪ!
Published On :

ಮಂಡ್ಯ: ಕೃಷ್ಣರಾಜ ಸಾಗರ ಭರ್ತಿಯಾಗಲು ಇನ್ನೂ 34 ಅಡಿ ಬಾಕಿ ಇರುವಾಗಲೇ ಎರಡು ದಿನಗಳಿಂದ 8ರಿಂದ 10 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ.
ಗರಿಷ್ಠ ಮಟ್ಟ 124.80 ಅಡಿ ಇದ್ದು, ಬುಧವಾರ ಸಂಜೆ ವೇಳೆಗೆ 90 ಅಡಿ ದಾಟಿದೆ. ಮಂಗಳವಾರದಿಂದಲೇ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸುತ್ತಿದ್ದು, ಅಣೆ ಭರ್ತಿಯಾಗದೇ ನೀರು ಬಿಡುತ್ತಿರುವುದು ಅನುಮಾನ ಕ್ಕೆಡೆ ಮಾಡಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಲೊಪ್ಪದ ಅಧಿಕಾರಿಗಳು 'ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸಮತೋಲನ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾಲೆಗೂ ಬಿಡುತ್ತೇವೆ' ಎಂದಿದ್ದಾರೆ. ಆದರೆ ನ್ಯಾಯಮಂಡಳಿ ಆದೇಶದಂತೆ ಕರ್ನಾಟಕ ಜೂನ್‌ನಲ್ಲಿ 30 ಹಾಗೂ ಜುಲೈನಲ್ಲಿ 50 ರಿಂದ 60 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಈ ಹಿನ್ನೆಲೆಯಲ್ಲೇ ನೀರು ಹರಿಸಲಾಗುತ್ತಿದೆಯೇ ಎಂಬ ಶಂಕೆ ಇದೆ.
ರೈತರ ಪ್ರತಿಭಟನೆ: ನೀರು ಬಿಡುತ್ತಿರುವುದಕ್ಕೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಬಿನಿಯಿಂದ ನೀರು
ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿ ಬಳಿ ಯ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, 10,000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಬುಧವಾರ ಜಲಾಶಯದಲ್ಲಿ 2279.50 ಅಡಿ ಇತ್ತು. ಗರಿಷ್ಠ ಮಟ್ಟ- 2284 ಅಡಿ. ಭರ್ತಿಗೆ ನಾಲ್ಕು ಅಡಿ ಬಾಕಿ ಇದೆ. ಆದರೆ ಒಳಹರಿವು ಹೆಚ್ಚಿರುವುದರಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.
ಗರಿಷ್ಠ ಮಟ್ಟ 124.80ಅಡಿ
ಭರ್ತಿಗೆ ಬಾಕಿ 34ಅಡಿ
ತಮಿಳುನಾಡಿಗೆ ಬಿಡಲಾಗುತ್ತಿರುವುದು
10,000 ಕ್ಯುಸೆಕ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.