ಪ್ರಧಾನ ಸುದ್ದಿ

ಅರಣ್ಯ ಇಲಾಖೆಗೂ ಬಂತು ಸಕಾಲ

Published On :

ಕಾರವಾರ: ಅರಣ್ಯ ಇಲಾಖೆಯನ್ನು ಸಕಾಲ ವ್ಯಾಪ್ತಿಗೆ ಒಳಪಡಿಸಿದ್ದು, ಆರು ಸೇವೆಗಳನ್ನು ಸೇರಿಸಲಾಗಿದೆ. ಇನ್ನು ಇಲಾಖೆಯಲ್ಲಿ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂಬ ಸಬೂಬನ್ನು ಹೇಳುವಂತಿಲ್ಲ.
ವಿವಿಧ ಸೇವೆಗಳಿಗಾಗಿ ಇನ್ನು ಸಾರ್ವಜನಿಕರು ಅರಣ್ಯ ಇಲಾಖೆಗೆ ಅಲೆಯಬೇಕಿಲ್ಲ. ಸಸಿ ಬೇಕಾದರೆ, ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗಿದ್ದರೆ, ಮಾನವ ಪ್ರಾಣ ಹಾನಿ ಅಥವಾ ಸಾಕು ಪ್ರಾಣಿಗಳ ಪ್ರಾಣ ಹಾನಿಯಾಗಿದ್ದರೆ ಸಕಾಲದಡಿ ಅರ್ಜಿ ಸಲ್ಲಿಸಿ ನಿಗದಿತ ಅವಧಿಯೊಳಗೆ ಪರಿಹಾರ, ಸೇವೆ ಅಥವಾ ಸೂಕ್ತ ಮಾಹಿತಿ ಪಡೆಯಬಹುದು.
ಸೇವೆಗಳು ಹಾಗೂ ಸಮಯ: ಸಾರ್ವಜನಿಕರಿಗೆ ಸಸಿಗಳ ವಿತರಣೆ ಹಾಗೂ ಆದೇಶ ನೀಡುವುದು (ಉತ್ತರಿಸಲು ನಿಗದಿತ ಅವಧಿ 7 ಕೆಲಸದ ದಿನಗಳು), ವನ್ಯಪ್ರಾಣಿ ಹಾವಳಿಯಿಂದ ಬೆಳೆನಾಶ ಪರಿಹಾರದ ಆದೇಶ ನೀಡುವುದು (ವಲಯ ಅರಣ್ಯ ಅಧಿಕಾರಿ, 30 ಕೆಲಸದ ದಿನಗಳು), ವನ್ಯಪ್ರಾಣಿ ಹಾವಳಿಯಿಂದ ಸಾಕುಪ್ರಾಣಿಯ ಪ್ರಾಣ ಹಾನಿ ಬಗ್ಗೆ ಪರಿಹಾರಕ್ಕೆ ಆದೇಶಿಸುವುದು (15 ಕೆಲಸದ ದಿನಗಳು), ವನ್ಯಪ್ರಾಣಿ ಹಾವಳಿಯಿಂದ ಮಾನವನ ಪ್ರಾಣ ಹಾನಿ ಹಾಗೂ ಶಾಶ್ವತ ಅಂಗವಿಕಲತೆ ಬಗ್ಗೆ ಪರಿಹಾರಕ್ಕೆ ಆದೇಶಿಸುವುದು (15 ಕೆಲಸದ ದಿನಗಳು), ಮರಗಳ ಕಟಾವು ಮಾಡಲು ಆದೇಶಿಸುವುದು (90 ಕೆಲಸದ ದಿನಗಳು), ಕಟಾವು ಮಾಡಿದ ಮರಗಳ ಸಾಗಣೆಗೆ ಪರವಾನಗಿ ನೀಡುವುದನ್ನು (42 ಕೆಲಸದ ದಿನಗಳು) ಸದ್ಯಕ್ಕೆ ಸಕಾಲದ ವ್ಯಾಪ್ತಿಗೆ ಸೇರಿಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಕ್ಷಮ ಅಧಿಕಾರಿಗಳೆಂದು ಗೊತ್ತುಪಡಿಸಲಾಗಿದೆ. ಸಕ್ಷಮ ಅಧಿಕಾರಿ ಅರ್ಜಿಯನ್ನು ವಿಲೇವಾರಿ ಮಾಡುವುದಕ್ಕೂ ಸಮಯ ಮಿತಿಯನ್ನೂ ಹಾಕಲಾಗಿದೆ. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಮೇಲ್ಮನವಿ ಪ್ರಾಧಿಕಾರ ಅಧಿಕಾರಿ ಎಂದು ನಿಗದಿಪಡಿಸಲಾಗಿದೆ. ಮೇಲ್ಮನವಿಯನ್ನು ವಿಲೇವಾರಿ ಮಾಡುವುದಕ್ಕೂ ಸಮಯ ಮಿತಿಯನ್ನು ಹಾಕಲಾಗಿದೆ.


-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.