ಪ್ರಧಾನ ಸುದ್ದಿ

ತೆರಿಗೆದಾರರ ಹಣ ರಕ್ಷಿಸುವುದು ಸರ್ಕಾರದ ಕರ್ತವ್ಯ: ರಾಜೀವ್

ತೆರಿಗೆದಾರರ ಹಣ ರಕ್ಷಿಸುವುದು ಸರ್ಕಾರದ ಕರ್ತವ್ಯ: ರಾಜೀವ್
Published On :

ಕನ್ನಡಪ್ರಭ ಪ್ರತಿನಿಧಿಯಿಂದ,
ನವದೆಹಲಿ:
ತೆರಿಗೆದಾರರ ಹಣ ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಸಾರ್ವಜನಿಕ ಉದ್ದಿಮೆಗಳು ಹೂಡಿಕೆ ಶ್ರೇಣಿ ಪದ್ಧತಿ ಅಳವಡಿಸಿಕೊಳ್ಳಬೇಕು,  ಯೋಜನೆ ನಿರ್ವಹಣೆ, ಶೇರುಗಳ ಮತ್ತು ಕಡಮೆ ಅಪಾಯದ ಆಧಾರದ ಮೇಲೆ ಸಹಜವಾಗಿ ಬಂಡವಾಳ ಹರಿದುಬರಬೇಕೇ ಹೊರತು ಸಾರ್ವಜನಿಕ ಬ್ಯಾಂಕ್‌ಗಳಿಂದ ಹಣ ಹರಿದುಬರುವಂತಾಗಬಾರದು ಎಂದು ಅವರು ಸಲಹೆ ಮಾಡಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದರು.
*  ಯುಪಿಎ ಸರ್ಕಾರದ ಪಿಪಿಪಿ ವಿಧಾನ ಕೈಬಿಡಬೇಕು. ಹೊಸ ಪಾರದರ್ಶಕ ಮಾರ್ಗಸೂಚಿ ರೂಪಿಸಬೇಕು. ಸಾರ್ವಜನಿಕ ಉದ್ದಿಮೆಗಳ ಲಾಭದಾಯಕ ನಿರ್ವಹಣೆಗೆ ನೂತನ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಇವುಗಳ ನೈಜ ಮಾಲೀಕರಾದ ಪ್ರಜೆಗಳಿಗೆ ವಾರ್ಷಿಕ ವರದಿ ನೀಡಬೇಕು.
*  ಜನಸಾಮಾನ್ಯರಿಂದ ದೂರವಾಗುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳ ಸೌಲಭ್ಯ, ಇತ್ತೀಚಿನ ವರ್ಷಗಳಲ್ಲಿ ವಿತ್ತವಲಯ, ಅದರಲ್ಲೂ ಬ್ಯಾಂಕಿಂಗ್ ವಲಯ ಕೇವಲ ಶ್ರೀಮಂತರಿಗೆ ಮತ್ತು ಅಧಿಕಾರಸ್ಥ ಬಲಿಷ್ಠರಿಗಾಗಿಯೇ ಕೆಲಸ ಮಾಡುವಂತಿದೆ. ಸಾಮಾನ್ಯರಿಗೆ ಇದು ಕಾಲ್ಪನಿಕವಾಗತೊಡಗಿದೆ. ಇದು ಸರಿಯಾಗಬೇಕು.
*  ಬ್ಯಾಂಕ್‌ಗಳ ಸ್ಥಾಯಿ ಸ್ವತ್ತುಗಳ (ಎನ್‌ಪಿಎ) ಪ್ರಮಾಣ ಕಳೆದ 2- 3 ವರ್ಷಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿದ್ದು ಮಾರುಕಟ್ಟೆ ಬಂಡವಾಳ ಮೌಲ್ಯ ಕುಸಿದು ಭಾರಿ ನಷ್ಟವಾಗುತ್ತಿದೆ.
*  ದೇಶದ ಮೊದಲ ಹತ್ತು ಕೈಗಾರಿಕೋದ್ಯಮ ಕಂಪನಿಗಳೇ ಬ್ಯಾಂಕ್‌ಗಳಿಂದ ಶೇ.95ರಷ್ಟು ಸಾಲ ಪಡೆದಿದ್ದು, ಸುಲಭವಾಗಿ ಸೋಲಲೇ ಬಾರದ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಇದರಿಂದ ಹೊಸ ಉದ್ಯಮಗಳನ್ನು ಮತ್ತು ಅವಕಾಶಗಳನ್ನು ಸೃಜಿಸಲು ಸಾಧ್ಯವಾಗುತ್ತಿಲ್ಲ. ಸಾಲ ತೀರಿಸಲಾಗದ ದೊಡ್ಡ ಕುಳಗಳನ್ನು ಶಿಕ್ಷಿಸಲಾಗದೆ, ಸಣ್ಣ ಮತ್ತು ಮಧ್ಯಮ ಕುಟುಂಬಗಳ ಗೃಹ, ವಾಹನ, ಕೃಷಿ ಮತ್ತು ಶೈಕ್ಷಣಿಕ ಸಾಲಗಳ ಮರುಪಾವತಿಗೆ ಭಾರಿ ಒತ್ತಡ ಹೇರುವ ದ್ವಂದ್ವ ನೀತಿಗಳನ್ನು ಸಾರ್ವಜನಿಕಬ್ಯಾಂಕ್‌ಗಳು ಅನುಸರಿಸುತ್ತಿವೆ.
ಈ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.