ಇ-ಬ್ಯಾಂಕಿಂಗ್: ಮೂರು ಹೊಸ ಸೇವೆಗೆ ಕೆನರಾ ಬ್ಯಾಂಕ್ ಚಾಲನೆ

ಬೆಂಗಳೂರು: ಅಂತರ್ಜಾಲ ಬ್ಯಾಂಕಿಂಗ್ ಸೇವೆ ಮೂಲಕ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ನವೀನ ಮಾದರಿಯ ಮೂರು ಸೇವೆಗಳನ್ನು ಪರಿಚಯಿಸಿದೆ.
ಕೆನರಾ ಈಜಿ- ಕ್ಯಾಶ್, ಕೆನರಾ ಎಂ-ವೆಲೆಟ್ ಹಾಗೂ ಕೆನರಾ ಪಿ-ಸರ್ವ್ ನೂತನವಾಗಿ ಪರಿಚಯಿಸಿದ ಅಂತರ್ಜಾಲ ಸೇವೆಗಳಾಗಿದ್ದು, ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಈ ಸೇವೆಗಳಿಗೆ ಶನಿವಾರ ಚಾಲನೆ ನೀಡಿದರು.
ಕೆನರಾ ಈಜಿ ಕ್ಯಾಶ್
ಇದು ಹಣ ವರ್ಗಾವಣೆಯ ಸುಲಭ ನೆಟ್ ಬ್ಯಾಂಕಿಂಗ್ ಸೇವೆ. ಇಲ್ಲಿ ಹಣ ಪಡೆದುಕೊಳ್ಳುವವರಿಗೆ ಬ್ಯಾಂಕ್ ಖಾತೆ ಬೇಕಾಗಿಲ್ಲ. ಹಣ ವರ್ಗಾಯಿಸುವವರು ಮಾತ್ರ ಕೆನರಾ ಬ್ಯಾಂಕ್ ಖಾತೆದಾರರಾಗಿರಬೇಕು. ಖಾತೆದಾರರು ಕೆನರಾ ಎಟಿಎಂ ಕೇಂದ್ರದ ಮೂಲಕವೇ ದೂರದ ತಮ್ಮ ಸ್ನೇಹಿತರಿಗೆ ಹಣ ವರ್ಗಾಯಿಸಿದರೆ, ಅದರ ಎಲ್ಲ ಮಾಹಿತಿ ಹಣ ಪಡೆದುಕೊಳ್ಳಲು ಬಯಸುವ ವ್ಯಕ್ತಿಯ ಮೊಬೈಲ್‌ಗೆ ರವಾನೆಯಾಗುತ್ತದೆ. ಆ ಸಂದೇಶಗಳಲ್ಲಿ ಲಭ್ಯವಾಗುವ ಪಾಸ್‌ವರ್ಡ್ ಮೂಲಕ ಎಟಿಎಂ ಕಾರ್ಡ್ ಬಳಸದೆಯೇ ವರ್ಗಾಯಿತ ಹಣವನ್ನು ನೇರವಾಗಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಹಾಗೂ ವಲಸಿಗರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಿದೆ.
ಕೆನರಾ ಎಂ-ವೆಲೆಟ್
ಆನ್‌ಲೈನ್ ಶಾಂಪಿಂಗ್ ಹಾಗೂ ಬಿಲ್ ಪಾವತಿಸಲು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು. ಈ ಸೇವೆಯ ಮೂಲಕ ಹಣ, ಕಾರ್ಡ್ ಎರಡೂ ಇಲ್ಲದಿದ್ದರೂ ಮಾಲ್‌ಗಳಲ್ಲಿ ರು. 25000 ತನಕ ಶಾಪಿಂಗ್ ಮಾಡಬಹುದು. ಆದರೆ ನಿಮ್ಮ ಬಳಿ ಸ್ಮಾರ್ಟ್ ಫೋನ್ ಮಾತ್ರ ಇರಲೇಬೇಕು. ಕಾರಣ, ಫೋನ್ ಮೂಲಕವೇ ಬಿಲ್ ಪಾವತಿ ಪ್ರಕ್ರಿಯೆ ನಡೆಯುತ್ತದೆ. ಶಾಪಿಂಗ್ ಮಾತ್ರವಲ್ಲ, ಮೊಬೈಲ್ ರೀಚಾರ್ಜ್, ಯುಟಿಲಿಟಿ ಬಿಲ್ ಪೇ ಕೂಡ ಸುಲಭವಾಗಿ ಮಾಡಬಹುದು.
ಕೆನರಾ ಪಿ-ಸರ್ವ್
ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ಸಮಗ್ರವಾಗಿ ನೀಡಲು ಬ್ಯಾಂಕ್ ಆವರಣದಲ್ಲಿ ಕಿಯೊಸ್ಕ್ ಅಳವಡಿಸಲಾಗುತ್ತದೆ. ಅಲ್ಲಿ ಟಚ್‌ಸ್ಕ್ರೀನ್ ಮೂಲಕ ಗ್ರಾಹಕರು ಬಯಸುವ ಎಲ್ಲ ಸೇವೆಗಳ ಮಾಹಿತಿಯನ್ನು ಕೆನರಾ ಪಿ-ಸರ್ವ್ ನೀಡುತ್ತದೆ. ಖಾತೆ ತೆರೆಯಲು ಅರ್ಜಿ ಪಡೆಯುವ ವಿಧಾನ, ಆರ್.ಡಿ. ಅಕೌಂಟ್ ತೆರೆಯುವ ಬಗೆ, ಚೆಕ್ ಬುಕ್ ಪಡೆಯಲು ಮನವಿ ಹೀಗೆ ಇತ್ಯಾದಿ ಬಗೆಯ ಮಾಹಿತಿಗಳನ್ನು ಈ ಸೇವೆಯಲ್ಲಿ ಪಡೆಯಬಹುದು.
ಬ್ಯಾಂಕಿನ ಈ ನೂತನ ಸೇವೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅಧ್ಯಕ್ಷ ಆರ್.ಕೆ. ದುಬೆ, ದೇಶದಲ್ಲಿರುವ ಎಲ್ಲ ಕೆನರಾ ಬ್ಯಾಂಕ್ ಶಾಖೆಗಳ ಗ್ರಾಹಕರಿಗೆ ಇಂದಿನಿಂದಲೇ ಈ ಸೇವೆ ಲಭ್ಯವಾಗಲಿದೆ ಎಂದು ವಿವರಿಸಿದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್, ಹಿರಿಯ ಅಧಿಕಾರಿ ರಾಮಚಂದ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


