ಪ್ರಧಾನ ಸುದ್ದಿ

ಮೊದಲ ಮಳೆಗೆ ರೈತರ ಹರ್ಷ, ವರ್ಷಧಾರೆಯೇನೋ ಆಯ್ತು, ಜಲಾಶಯಗಳಿಗೆ ಬಂದಿಲ್ಲ ನೀರು, ಮುಂಗಾರು ಕಡಿಮೆಯಾದ್ರೆ...?

ಮೊದಲ ಮಳೆಗೆ ರೈತರ ಹರ್ಷ, ವರ್ಷಧಾರೆಯೇನೋ ಆಯ್ತು, ಜಲಾಶಯಗಳಿಗೆ ಬಂದಿಲ್ಲ ನೀರು, ಮುಂಗಾರು ಕಡಿಮೆಯಾದ್ರೆ...?
Published On :

ಮುಂಗಾರು ಮುನ್ನವೇ ಸುರಿದ ಮಳೆ ಈ ಬಾರಿ ರೈತರಲ್ಲಿ ಹರ್ಷ ಮೂಡಿಸಿದೆ. ಅಬ್ಬಾ! ಈ ವರ್ಷವಾದರೂ ಚೆಂದ ಮಳೆ ಬರಲಪ್ಪ, ಹೀಗೆಯೇ ಸುರಿಯಲಿ ಎಂದು ಆಶಿಸುತ್ತಿದೆ ರೈತಾಪಿ ವರ್ಗ. ರಾಜ್ಯದ ಅಲ್ಲಲ್ಲಿ, ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳ ಪರಿಸ್ಥಿತಿ ಬದಲಾಗಿದೆಯೇ ಎಂಬ ಅವಲೋಕನ ಸ್ಟೋರಿ ಇದು. ಕೆಲ ಜಲಾಶಯಗಳಿಗೆ ಅಲ್ಪ ಪ್ರಮಾಣದ ನೀರು ಬಂದಿದ್ದರೆ, ಕೆಲವಕ್ಕೆ ಇನ್ನೂ ಬಂದಿಲ್ಲ. ಆದರೂ ಮುಂಗಾರು ನಾಲ್ಕು ದಿನ ತಡವಾಗಿ ಬರುತ್ತಿದ್ದರೂ, ಮೊದಲೇ ಉತ್ತಮವಾಗಿ ಬರುವ ಸೂಚನೆ ನೀಡಿದ್ದರಿಂದಲೇ ರೈತರು ನಿಶ್ಚಿಂತೆಯಿಂದ ಇದ್ದಾರೆ.


ಸದ್ಯ ರಾಜ್ಯದ ಜಲಾಶಯಗಳ ಸ್ಥಿತಿಯತ್ತ ಒಂದು ನೋಟ...


ಘಟಪ್ರಭಾ


ಪ್ರಸ್ತುತದಲ್ಲಿ ಈ ಜಲಾಶಯದಲ್ಲಿ ನೀರು ಪಾತಾಳ ಸೇರಿದೆ. ಇರುವ ಸ್ವಲ್ಪ ನೀರು ಇನ್ನೊಂದು ವಾರಕ್ಕೆ ಆಗಬಹುದು. ಆದರೂ ಮಳೆ ಚೆನ್ನಾಗಿ ಬಂದು ಜಲಾಶಯ ತುಂಬಿಕೊಳ್ಳಬಹುದು ಎಂಬ ನಿರೀಕ್ಷೆ ಜನರಲ್ಲಿದ್ದರೂ, ತುಂಬಿರುವ ಹೂಳು ಎಲ್ಲಿ ಅಡ್ಡಿ ಮಾಡುವುದೋ ಎಂಬ ಆತಂಕವೂ ಇದೆ.

ಸದ್ಯ ಇರುವ ನೀರು 2.47 ಟಿಎಂಸಿ
ಉಪಯುಕ್ತ ನೀರು:    0.45 ಟಿಎಂಸಿ
ಉಪಯುಕ್ತ ನೀರು:     0.45 ಟಿಎಂಸಿ
ಗರಿಷ್ಠ ಮಟ್ಟ:    2175 ಅಡಿ
ಇಂದಿನ ಮಟ್ಟ:    2067.36 ಅಡಿ
ಒಳಹರಿವು:     ಇಲ್ಲ


ವಿದ್ಯುತ್ ಉತ್ಪಾದನೆ: ಸ್ಥಗಿತ


ಸ್ಥಳ


 ಹುಕ್ಕೇರಿ ತಾಲೂಕಿನಲ್ಲಿ ಹಿಡಕಲ್


ಮಲಪ್ರಭೆ


ಇದರಲ್ಲಿ ಇರುವ ನೀರು 4.27 ಟಿಎಂಸಿ. ಈ ನೀರು ಇನ್ನೊಂದು ವಾರದ ವರೆಗೆ ಸಾಕಾಗಬಹುದು. ಅಷ್ಟರಲ್ಲಿ ಮಳೆ ಬರದಿದ್ದರೆ ನೀರಿನ ಸಂಕಷ್ಟ ಎದುರಾಗುವುದು ಖಂಡಿತ. ಈ ಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಬಳಸುವುದಕ್ಕಿಂತ ಹೆಚ್ಚಾಗಿ ನೀರಾವರಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಇದರಲ್ಲೂ ಹೂಳಿನದ್ದೇ ಸಮಸ್ಯೆ.

ಸದ್ಯ ಇರುವ ನೀರು 4.27  ಟಿಎಂಸಿ

ಗರಿಷ್ಠ ಮಟ್ಟ:     2079.50 ಅಡಿ
ಇಂದಿನ ಮಟ್ಟ:     2036.72 ಅಡಿ
ಒಳಹರಿವು:     ಇಲ್ಲ


ವಿದ್ಯುತ್ ಉತ್ಪಾದನೆ - ಇಲ್ಲ


ಸ್ಥಳ
ಸವದತ್ತಿ ತಾಲೂಕಿನ ಮುನವಳ್ಳಿ


ಹಾರಂಗಿ

ಕೃಷಿ ಚಟುವಟಿಕೆಗಳಿಗಾಗಿಯೇ ಈ ಜಲಾಶಯದ ನಿರ್ಮಾಣವಾಗಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ 1.38 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯವಿದೆ. ಸದ್ಯ ಈ ಜಲಾಶಯದಲ್ಲಿ 2.01 ಟಿಎಂಸಿ ನೀರಿದೆ. ಇದರ ನೀರನ್ನು ಕುಡಿಯಲು ಬಳಕೆ ಮಾಡಲ್ಲ, ಆದರೆ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ಈ ಜಲಾಶಯದಲ್ಲಿ 25 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅದೂ ಜೂನ್ ಅಂತ್ಯದಿಂದ ಡಿಸೆಂಬರ್‌ವರೆಗೆ ಮಾತ್ರ.


ಸದ್ಯ ಇರುವ ನೀರು 2.01 ಟಿಎಂಸಿಇರುವ ನೀರು:     2.01 ಟಿಎಂಸಿ
ಗರಿಷ್ಠ ಮಟ್ಟ:    2859 ಅಡಿ
ಇಂದಿನ ಮಟ್ಟ:    2812.14 ಅಡಿ
ಒಳಹರಿವು:    26 ಕ್ಯೂಸೆಕ್


ವಿದ್ಯುತ್ ಉತ್ಪಾದನೆ: ಸ್ಥಗಿತ

ಸ್ಥಳ


ಕೊಡಗು ಜಿಲ್ಲೆಯ ಹುದುಗೂರು



ತುಂಗಭದ್ರಾ


ತುಂಗಭದ್ರಾ ಜಲಾಶಯಕ್ಕೆ ಈ ಸಾರಿ ಬೇಗನೆ ನೀರು ಬರಲಾರಂಭಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಒಂದು ತಿಂಗಳ ಮುಂಚಿತವಾಗಿಯೇ ಜಲಾಶಯಕ್ಕೆ ನೀರು ಬರುತ್ತಿದೆ. ಈಗಾಗಲೇ 8 ಟಿಎಂಸಿಗೂ ಅಧಿಕ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.


ಒಳಹರಿವು 4019  ಟಿಎಂಸಿ

ಗರಿಷ್ಠ ಮಟ್ಟ:          1633 ಅಡಿ
ಇಂದಿನ ಮಟ್ಟ:    1588.11 ಅಡಿ        
ಹೊರಹರಿವು:    177


ವಿದ್ಯುತ್ ಉತ್ಪಾದನೆ: ಆರಂಭವಾಗಿಲ್ಲ


ಸ್ಥಳ

000


ಕಾರಂಜಾ


ವಿಶೇಷವೆಂದರೆ ಇದು ಆರಂಭವಾದಾಗಿನಿಂದಲೂ ಇಲ್ಲಿತನಕ ಕಾಮಗಾರಿ ಮುಗಿದೇ ಇಲ್ಲ. ಮೊದಲು ಹೊಸ ಗದ್ದೆಗಳಿಗೆ ನೀರುಣಿಸುವುದಕ್ಕಾಗಿಯೇ ನಿರ್ಮಿಸಲಾಗುತ್ತಿದೆ. ಆದರೆ ಈಗ ಕುಡಿಯುವ ನೀರು ಪೂರೈಸಲು ಬಳಸಲಾಗುತ್ತಿದೆ.


ಸದ್ಯ ಇರುವ ನೀರು 3.5 ಟಿಎಂಸಿ
ವಿದ್ಯುತ್ ಉತ್ಪಾದನೆ: ಇಲ್ಲ


ಗರಿಷ್ಠ ಮಟ್ಟ:
584.15 ಮೀ
ಇಂದಿನ ಮಟ್ಟ:
ಒಳಹರಿವು:
ಇಲ್ಲ



ಲಿಂಗನಮಕ್ಕಿ


ಸದ್ಯ ವಿದ್ಯುತ್ ಉತ್ಪಾದನೆ ನಿರಾತಂಕವಾಗಿ ನಡೆಯುತ್ತಿದೆ. ಮೇ 2ರಂದು 1,763.40 ಅಡಿ ನೀರಿತ್ತು. ಬಹುತೇಕ 20 ಅಡಿ ಕಡಿಮೆಯಾಗಿದೆ. ಇನ್ನು ಒಂದೆರಡು ವಾರದಲ್ಲಿ ಮಳೆಯಾಗದಿದ್ದರೆ ಆತಂಕ ಕಟ್ಟಿಟ್ಟಿದ್ದು.


ಗರಿಷ್ಠ ಮಟ್ಟ:    1,819 ಅಡಿ
ಇಂದಿನ ಮಟ್ಟ:    1745.20 ಅಡಿ
ಒಳಹರಿವು:    ಇಲ್ಲ


ವಿದ್ಯುತ್ ಉತ್ಪಾದನೆ: ಇಲ್ಲ


ಸೂಪಾ


ಇದು ಕೇವಲ ವಿದ್ಯುತ್ ಉತ್ಪಾದನೆಗೆ ನಿರ್ಮಾಣವಾಗಿರುವ ಜಲಾಶಯ. ಇನ್ನು 10 ದಿನಗಳ ಕಾಲವಷ್ಟೇ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ.


ಗರಿಷ್ಠ ಮಟ್ಟ:     564 ಮೀ.
ಇಂದಿನ ಮಟ್ಟ:    513.50 ಮೀ.
ಒಳಹರಿವು:    ಇಲ್ಲ


ವಿದ್ಯುತ್ ಉತ್ಪಾದನೆ: ನಡೆಯುತ್ತಿದೆ



ಭದ್ರಾ

ಇನ್ನೂ ಬಿತ್ತನೆ ಶುರುವಾಗಿಲ್ಲ. ಇದೇ ಮೇ 30ರಂದು ನಾಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಸಾಮಾನ್ಯವಾಗಿ ಜೂ.25ಕ್ಕೆ ಮತ್ತೆ ನೀರು ಹರಿಸಬೇಕು. ಎಲ್ಲರೂ ಮಳೆಗಾಗಿ ಕಾಯುತ್ತಿದ್ದಾರೆ.


ಗರಿಷ್ಠ ಮಟ್ಟ: 186 ಅಡಿ
ಇಂದಿನ ಮಟ್ಟ: 135.25


ವಿದ್ಯುತ್ ಉತ್ಪಾದನೆ: ಸ್ಥಗಿತ


ತುಂಗಾ ಜಲಾಶಯ


ಇದು ಚಿಕ್ಕ ಅಣೆಕಟ್ಟು. ಮಳೆ ಶುರುವಾಗಿ ಒಂದೆರಡು ದಿನಕ್ಕೇ ಭರ್ತಿಯಾಗುತ್ತದೆ. ಸದ್ಯ ನಾಲೆಯಲ್ಲಿ ನೀರು ಹರಿಯುತ್ತಿದೆ. ಆದರೆ ನಾಲೆ ತುದಿ ತಲುಪುತ್ತಿಲ್ಲ. ಸದ್ಯ ನೀರಿನ ಸಂಗ್ರಹವೂ ಪರವಾಗಿಲ್ಲ. ಬಯಲುಸೀಮೆಗೆ ನೀರು ಹರಿಸಲು ಇನ್ನಷ್ಟು ಮಳೆಯಾಗಬೇಕು.

ಗರಿಷ್ಠ ಮಟ್ಟ:    588.24 ಮೀ.
ಇಂದಿನ ಮಟ್ಟ:    586.93 ಮೀ.


ವಿದ್ಯುತ್ ಉತ್ಪಾದನೆ: ಇಲ್ಲ

ನಾರಾಯಣಪುರ
ಈ ಜಲಾಶಯದಲ್ಲಿ ನೀರು ಬತ್ತುತ್ತಿದೆ. ಮಳೆ ಬಂದರೆ ಎಲ್ಲವೂ ಸುಸೂತ್ರ. ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ. ಈ ಜಲಾಶಯದ ಸಮಸ್ಯೆ ಹೂಳು. ಇದರಿಂದಾಗಿಯೇ ಹೆಚ್ಚು ನೀರು ನಿಲ್ಲುತ್ತಿಲ್ಲ.


ಅಣೆಕಟ್ಟು 38 ಟಿಎಂಸಿ ಒಟ್ಟು ಶೇಖರಣಾ ಸಾಮರ್ಥ್ಯ


ಗರಿಷ್ಠ ಮಟ:     492.252
ಕನಿಷ್ಠ ಮಟ್ಟ:    487.011

ಸದ್ಯ ಇರುವ ನೀರು 0.55 ಟಿಎಂಸಿ

ಸ್ಥಳ

ಯಾದಗಿರಿ ಬಳಿಯ ನಾರಾಯಣಪುರ


ಆಲಮಟ್ಟಿ



ಈ ಜಲಾಶಯದಲ್ಲಿರುವ ನೀರು ಜೂನ್ ಅಂತ್ಯದ ವರೆಗೆ ಸಾಕಾಗುತ್ತದೆ. ಅಷ್ಟರಲ್ಲಿ ಮಳೆ ಬಂದರೆ ಏನೂ ಚಿಂತೆ ಇಲ್ಲ. ಸದ್ಯ 17.3 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ ಐದು ವಿದ್ಯುತ್ ಘಟಕಗಳಿದ್ದು, ನೀರಿಲ್ಲದೇ ಇರುವುದರಿಂದ ಎಲ್ಲದರಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.


ಸದ್ಯ ಇರುವ ನೀರು 17.3 ಟಿಎಂಸಿ

ಗರಿಷ್ಠ ಮಟ್ಟ:    519.60 ಮೀ
ಇಂದಿನ ಮಟ್ಟ:    507.34
ಒಳಹರಿವು:    ಇಲ್ಲ


ವಿದ್ಯುತ್ ಉತ್ಪಾದನೆ - ಇಲ್ಲ


ಸ್ಥಳ

ಬಿಜಾಪುರ ಜಿಲ್ಲೆಯ ಆಲಮಟ್ಟಿ


ಕಬಿನಿ


ಕಬಿನಿಯಲ್ಲಿ ಸದ್ಯ ನೀರಿಗೆ ಬರವಿಲ್ಲ. ಹೊರಹರಿವಿನಲ್ಲಿ 600 ಕ್ಯುಸೆಕ್ ಹುಲ್ಲಳ್ಳಿ ನಾಲೆಗೆ, 300 ಕ್ಯುಸೆಕ್ ಬೆಂಗಳೂರು ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ನೀರಾವರಿಯಿಂದ ಕಬಿನಿ ಬಲದಂಡೆ ನಾಲೆಯಿಂದ 4,500 ಎಕರೆ, ಎಡದಂಡೆ ನಾಲೆಯಲ್ಲಿ 3,000 ಎಕರೆಯಲ್ಲಿ ಕೃಷಿ ಚಟುವಟಿಕೆ ನಡೆದಿದೆ.

ಸದ್ಯ ಇರುವ ನೀರು 8.5 ಟಿಎಂಸಿ

ಗರಿಷ್ಠ ಮಟ:    2284 ಅಡಿ
ಒಳಹರಿವು:    345 ಕ್ಯುಸೆಕ್
ಹೊರಹರಿವು:    900 ಕ್ಯುಸೆಕ್


ಸ್ಥಳ


ಮೈಸೂರು ಜಿಲ್ಲೆ- ಕಬಿನಿ ಜಲಾಶಯ, ಬೀಚನಹಳ್ಳಿ, ಎಚ್.ಡಿ. ಕೋಟೆ ತಾಲೂಕು


ಕೆಆರ್‌ಎಸ್


ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಲ್ಲಿ ಈ ಬಾರಿ ನೀರಿನ ಅಭಾವವಿಲ್ಲ. ಇನ್ನೂ ಒಂದೂವರೆ ತಿಂಗಳು ಬೆಂಗಳೂರು ಸೇರಿದಂತೆ ಉಳಿದ ಸ್ಥಳಗಳಿಗೂ ನೀರು ಒದಗಿಸಬಹುದಾಗಿದೆ. ಆದರೆ ಮಂಡ್ಯದ ಬೇಸಿಗೆ ಬೆಳೆಗಳಿಗೆ ನೀರು ನೀಡುವುದನ್ನು ನಿಲ್ಲಿಸಲಾಗಿದೆ.

 ಸದ್ಯ ಇರುವ ನೀರು 7.365  ಟಿಎಂಸಿ

ಬಳಕೆಗೆ ಇರುವುದು:    3.23
ಗರಿಷ್ಠ ಮಟ್ಟ:    124.80 ಅಡಿ
ಇಂದಿನ ಮಟ್ಟ:    71.85 ಅಡಿ  
ಒಳ ಹರಿವು:    490 ಕ್ಯೂಸೆಕ್
ಹೊರ ಹರಿವು:    348 ಕ್ಯೂಸೆಕ್


ವಿದ್ಯುತ್ ಉತ್ಪಾದನೆ: ಇಲ್ಲ


ಸ್ಥಳ


ಕೃಷ್ಣರಾಜ ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.