ಕಲ್ಬುರ್ಗಿ ಹೇಳ್ತಾರೆ ಕೇಳಿ, ದೇವತೆಗಳೆಂದರೆ ಕೇವಲ ಕಲ್ಲಂತೆ!

ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ, ಕಾಡುವ ಕಾಪಾಡುವ ಶಕ್ತಿ ಅದರಲಿಲ್ಲ, ಇದರಿಂದ ತಪ್ಪೇನೂ ಆಗಲ್ಲ, ಪೂಜೆ ನಿಲ್ಲಿಸಿದ್ರೆ ಅಪಾಯವಿಲ್ಲ
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.9
ದೇವರು ಶಕ್ತಿಯ ಸ್ವರೂಪ ಹಾಗಾಗಿ ದೇವರ ಪೂಜೆಗೆ ಯಾವ ವಿರೋಧವೂ ಇಲ್ಲ. ಆದರೆ ದೇವತೆ ಮೂರ್ತ ಸ್ವರೂಪವಾದ್ದರಿಂದ ದೇವತೆಗಳ ಮೇಲೆ ಮೂತ್ರ ಮಾಡಿದರೂ ತಪ್ಪೇನು ಇಲ್ಲ ಮತ್ತು ಅದು ಕೇವಲ ಕಲ್ಲಿನಿಂದ ರಚನೆಯಾದ ಕಾರಣ ಅದರಲ್ಲಿ ಕಾಪಾಡುವ, ಕಾಡುವ ಶಕ್ತಿ ಯೂ ಇಲ್ಲ ಎಂಬುದು ಯಎ.ಆರ್. ಅನಂತಮೂರ್ತಿ ಪ್ರಯೋಗ ದಿಂದ ಸಾಬೀತಾಗಿದೆ.
ಹೀಗಂದವರು ಪ್ರೊ. ಎಂ.ಎಂ. ಕಲಬುರ್ಗಿ.
ಸಂದರ್ಭ: ಬೆಂಗಳೂರಿನ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಿಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮ. ಉಳಿದದ್ದನ್ನು ಅವರ ಮಾತಲ್ಲೇ ಕೇಳಿ:
ವಿಧಾನಸೌಧವನ್ನು ಮುಖ್ಯಮಂತ್ರಿ ಸ್ವಚ್ಛ ಮಾಡಬೇಕಿದೆ
ವಿಧಾನಸೌಧ ಪ್ರವೇಶಿಸುವ ಮುನ್ನ ಹೋಮಹವನ ನಿಲ್ಲಿಸಬೇಕು. ಒಳಗಿರುವ ದೇವತೆಗಳ ಭಾವಚಿತ್ರ ತೆಗೆದುಹಾಕುವ ಮೂಲಕ ವಿಧಾನಸೌಧವನ್ನು ಮುಖ್ಯಮಂತ್ರಿ ಸ್ವಚ್ಛ ಮಾಡಬೇಕಿದೆ
ದೇವತೆಗಳ ದೇವಾಲಯ ನಾಶ ಆಗುವರೆಗೂ ಮೂಢನಂಬಿಕೆ ಜೀವಂತ. ದೇವರು ಬಂದ ಕೂಡಲೇ ಪುರೋಹಿತ ಯುಗ ಆರಂಭವಾಗಿ ಕಲ್ಲು ಮಣ್ಣು ಹಾಗೂ ಲೋಹದ ದೇವತೆ ಸೃಷ್ಟಿಯಾದವು. ಭಕ್ತರನ್ನು ದೈಹಿಕ, ಮಾನಸಿಕ ಹಾಗೂ ಆರ್ಙಕವಾಗಿ ಶೋಷಿಸುವ ಪುರೋಹಿತರ ಸ್ವರೂಪ ಅರ್ಚಕ, ಸ್ವಾಮಿ, ಜೋಯ್ಸರು ನಾಶವಾದರೆ ಮೂಢನಂಬಿಕೆ ಬಹುಪಾಲುನಾಶವಾದಂತೆ.
ಪೂಜೆ ಮಾಡದಿದ್ದರೆ ಗಂಗೆ ಹರಿಯುವುದು ನಿಲ್ಲುತಿತ್ತೇ?
ಹಿಂದೆ ಕೆಂಗಲ್ ಹನುಮಂತಯ್ಯ, ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ ಕಾಲದವರೆಗೂ ಮೂಢನಂಬಿಕೆ ಅಷ್ಟಾಗಿ ಗೋಚರಿಸಿರಲಿಲ್ಲ. ದೇವೇಗೌಡರು ಮುಖ್ಯಮಂತ್ರಿ ಗಾದಿ ಅಲಂಕರಿಸಿದ ನಂತರ ಮೂಢನಂಬಿಕೆಗೆ ನಾಂದಿ ಹಾಡಿದರು.
ನಂತರ ಬಿಜೆಪಿ ಅಧಿಕಾರಾವಧಿಯಲ್ಲಿ ಮೂಢನಂಬಿಕೆಯ ದರ್ಬಾರೇ ಆರಂಭವಾಯಿತು. ಮೋದಿ ಪ್ರಧಾನಿ ಆದ ನಂತರ ಕಾಶೀ ವಿಶ್ವೇಶ್ವರನಿಗೆ ಪೂಜೆ ಸಲ್ಲಿಸಿ, ಗಂಗೆಗೆ ಆರತಿ ಬೆಳಗಿ ಶುದ್ಧೀಕರಣ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಪೂಜೆ ಮಾಡದಿದ್ದರೆ ಗಂಗೆ ಹರಿಯುವುದು ನಿಲ್ಲುತಿತ್ತೇ?
ಭಾರತ ಧರ್ಮದ ಮುಖವಾಡ ಹಾಕಿಕೊಂಡಿರುವ ಕರ್ಮದ ತವರು
ಕ್ರೈಸ್ತರು, ಮುಸಲ್ಮಾನರು, ಬೌದ್ಧರೂ ಹೀಗೆ ಎಲ್ಲ ಜಾತಿ ಧರ್ಮದವರು ಭಾರತ ದೇಶವನ್ನು ಆಳಿ ಅವರವರ ನಂಬಿಕೆಗಳನ್ನು ಬಿತ್ತಿದ ಪರಿಣಾಮ ಇಂದು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೂಢನಂಬಿಕೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಡವರು ವಾಸಿಸುವ ಕಡೆ ಮೂಢನಂಬಿಕೆಗಳು ಹೆಚ್ಚಾಗಿದ್ದು ಶಿಕ್ಷಣ ದೂರವಾದ್ದರಿಂದ ಇಂದು ಮೂಢನಂಬಿಕೆ ದೊಡ್ಡ ಮಟ್ಟದಲ್ಲಿ ಬೇರುಬಿಟ್ಟಿದೆ. ಕಣ್ಣು ತೆಗೆದು ಮಾಡುವ ಕ್ರಿಯೆ ಧರ್ಮ ಹಾಗೂ ವಿವೇಕವೂ ಹೌದು. ಕಣ್ಣು ಮುಚ್ಚಿ ಮಾಡುವ ಕೆಲಸ.
ಅನಾಥ ಮೂರ್ತಿ ಮೇಲೆ ಮೂತ್ರ ಮಾಡಿದ್ದರು...
ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಹಳ್ಳಿಗೆ ತೆರಳಿದ ಸಂದರ್ಭದಲ್ಲಿ ಆ ಕಲ್ಲಿನ ದೇವತೆ ಹತ್ತಿರ ತೆರಳಬೇಡಿ, ಅದನ್ನ ಕೆರಳಿಸಿದರೆ ದೆವ್ವದ ಸ್ವರೂಪ ಪಡೆದುಕೊಂಡು ನಿಮ್ಮನ್ನು ಕಾಡಿಸುತ್ತದೆ ಎಂದು ಸ್ಥಳೀಯರೊಬ್ಬರು ಹೇಳಿದರಂತೆ. ಅದಕ್ಕೆ ಪ್ರತಿಕ್ರಯಿಸದ ಅನಂತಮೂರ್ತಿ ರಾತ್ರಿ ಆ ಜಾಗಕ್ಕೆ ತೆರಳಿ ಕಲ್ಲಿನ ಮೇಲೆ ಮೂತ್ರ ಮಾಡಿದರಂತೆ. ಹಾಗಂತ ಅವರೇ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿಯವರೆಗೂ ಆ ಕಲ್ಲಿನಿಂದ ಅವರಿಗೆ ಯಾವ ತೊಂದರೆಯೂ ಆಗಲಿಲ್ಲ. ಹಾಗಾಗಿ ದೇವತೆಗೆ ಶಕ್ತಿಯೇ ಇಲ್ಲದ ಕಾರಣ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ ಎಂದು ಕಲಬುರ್ಗಿ ತಮ್ಮ ವಾದ ಮಂಡಿಸಿದರು.
ಇದಕ್ಕೆ ನೀವೇನಂತೀರಿ?
anisikeprabha@gmail.com
ಇಲ್ಲಿ ನಿಮ್ಮ ಅಭಿಪ್ರಾಯ ದಾಖಲಿಸಿ
ಕನ್ನಡಪ್ರಭ ಕಾಮೆಂಟ್
ಸುಮ್ಮನಿದ್ರೆ ಕಲ್ಬುರ್ಗಿಯಂಥವರು ಕಂಡವರ ತಲೆ ಮೇಲೂ ಉಚ್ಚೆ ಹೊಯ್ತಾರೇನೋ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


