ಪ್ರಧಾನ ಸುದ್ದಿ

ಮೂರ್ತಿಗಳ ಮೇಲೆ ಮೂತ್ರ ಅಭಿಯಾನ

Published On :

ಬೆಂಗಳೂರು:  ಆರಾಧಿತ ಮೂರ್ತಿಯ ಮೇಲೆ ಮೂತ್ರ ಮಾಡಿದರೂ ಏನೂ ಆಗಿಲ್ಲ ಎಂದು ಉಲ್ಲೇಖಿಸಿರುವ ಯು.ಆರ್. ಅನಂತಮೂರ್ತಿ ಹಾಗೂ ಅವರ ಸಿದ್ಧಾಂತವನ್ನು ಎತ್ತಿ ಹಿಡಿದ ಎಂ.ಎಂ. ಕಲಬುರ್ಗಿಯವರ 'ಮೂರ್ತಿ'ಗಳನ್ನು ಮಾಡಿ ಅವರ ಮೂರ್ತಿಗಳಿಗೆ ಅವರೇ ಮೂತ್ರ ಮಾಡುವುದರ ಮೂಲಕ ಉದ್ಘಾಟನೆ ಮಾಡಬೇಕು ಎಂದು ಧರ್ಮ ಪ್ರತಿಷ್ಠಾನ ಆಹ್ವಾನ ನೀಡಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಕೈಪಾ. ಎಸ್. ಶೇಷಾದ್ರಿ ಮಾತನಾಡಿ, ದೇವತೆಯ ಮೂರ್ತಿಗಳ ಮೇಲೆ ಮೂತ್ರ ಮಾಡುವ ಬಗ್ಗೆ ಕೀಳು ಮನಸ್ಸಿನ ವಿದ್ವಾಂಸರ ಹೇಳಿಕೆಗಳು ವಿಷಾದನೀಯ. ಇಂತಹ ಪ್ರಯೋಗಪುರುಷರ ಮೂರ್ತಿಗಳನ್ನು ನಿರ್ಮಿಸಿ ಮೂತ್ರ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಪರೋಕ್ಷವಾಗಿ ಕಲಬುರ್ಗಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಧರ್ಮ ತಿಳಿವಳಿಕೆ ಶಿಬಿರಕ್ಕೆ ಬನ್ನಿ:  ಧರ್ಮ ಪ್ರತಿಷ್ಠಾನ ವತಿಯಿಂದ ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಸನಾತನ ಧರ್ಮದ ಪರಿಪೂರ್ಣ ಪರಿಚಯ ನೀಡಲಾಗುವುದು. ಧರ್ಮ ಹಾಗೂ ಪರಮಾತ್ಮ ಸೇರಿದಂತೆ ಧ್ಯಾನ, ತಪಸ್ಸುಗಳ ಸಮಸ್ತ ವಿಷಯಗಳನ್ನು ವಿಜ್ಞಾನದ ತಳಹದಿ ಮೇಲೆ ತಿಳಿಸಿಕೊಡಲಾಗುವುದು ಎಂದು ಶೇಷಾದ್ರಿ ತಿಳಿಸಿದರು. ವ್ಯವಸಾಯ, ಜ್ಯೋತಿಷ್ಯ, ಯೋಗಶಾಸ್ತ್ರ ಬಗ್ಗೆ ಸ್ಥೂಲವಾದ ಮಾಹಿತಿ ನೀಡುವುದರೊಂದಿಗೆ ಊಟ, ಉಪಾಹಾರವನ್ನೂ ಉಚಿತವಾಗಿ ನೀಡಲಾಗುವುದು. ಮಾಹಿತಿಗೆ: ನಂ. 3 ಮತ್ತು 4, ಪಶ್ಚಿಮ ಆಂಜನೇಯ ಗುಡಿ ರಸ್ತೆ, ಗಾಂಧಿ ಬಜಾರ್. ಮೊ. 93423 03247 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.