ಪ್ರಧಾನ ಸುದ್ದಿ

ಗ್ರಾಪಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ರಾಜೀವ್ ಗಾಂಧಿ ಸೇವಾ ಕೇಂದ್ರ

Published On :

ಬೆಳಗಾವಿ: ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯದ 300 ಗ್ರಾಮ ಪಂಚಾಯತಿಗಳಲ್ಲಿ 'ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ' ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದೆ.
30 ಜಿಲ್ಲೆಗಳಲ್ಲಿ 5ಸ629 ಗ್ರಾ.ಪಂ.ಗಳ ಪೈಕಿ ಮೊದಲ ಹಂತವಾಗಿ 300ರಲ್ಲಿ ಸೇವಾ ಕೇಂದ್ರ ಸ್ಥಾಪನೆಯಾಗಲಿದೆ. ತಲಾ ರು. 16.50 ಲಕ್ಷದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಪಂ ಕಟ್ಟಡ ನಿರ್ಮಿಸಲಾಗುವುದು. ಈ ಕಟ್ಟಡವನ್ನು ಗ್ರಾಪಂಗಳು ಕಚೇರಿ ಅಥವಾ ಸಭಾಗೃಹ, ಹೆಚ್ಚುವರಿ ಕೊಠಡಿ, ಕಂಪ್ಯೂಟರ್ ಕೇಂದ್ರದಂಥ ಉದ್ದೇಶಕ್ಕೆ ಬಳಸಬಹುದು.
ಸದ್ಯ ರಾಜ್ಯದ 139 ಗ್ರಾ.ಪಂ. ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಮೊದಲ ಹಂತದಲ್ಲಿ ಈ 139 ಗ್ರಾ.ಪಂ.ಗಳಲ್ಲೂ ಸೇವಾ ಕೇಂದ್ರದಲ್ಲಿ ಕಚೇರಿಗಾಗಿ ಕಟ್ಟಡ ನಿರ್ಮಿಸಲಾಗುವುದು. ಇದರ ಜೊತೆ ಇನ್ನು 161 ಗ್ರಾ.ಪಂ.ಗಳಿಗೂ ಹೊಸದಾಗಿ ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಇದಕ್ಕಾಗಿ 49.50 ಕೋಟಿ ವ್ಯಯಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಹಂತ ಹಂತವಾಗಿ ಎಲ್ಲ ಗ್ರಾ.ಪಂ.ಗಳಿಗೂ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ.
ಬೆಳಗಾವಿ, ತುಮಕೂರಿಗೆ ಗರಿಷ್ಠ: ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಗರಿಷ್ಠ 30 ಸೇವಾ ಕೇಂದ್ರಗಳ ಸ್ಥಾಪನೆಯಾಗಲಿದೆ. ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ 1, ದಕ್ಷಿಣ ಕನ್ನಡ, ಉಡುಪಿಯಲ್ಲಿ ತಲಾ 2 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 3 ಗ್ರಾ.ಪಂ. ವ್ಯಾಪ್ತಿಯಲ್ಲಿ ಸೇವಾ ಕೇಂದ್ರ ಸ್ಥಾಪನೆಯಾಗುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ 30 ಸೇವಾ ಕೇಂದ್ರವನ್ನು ಜಿಲ್ಲೆಗೆ ನೀಡಿದ್ದು, 14 ಕಡೆ ಗ್ರಾ.ಪಂ.ಗೆ ಸ್ವಂತ ಆಡಳಿತ ಕಟ್ಟಡ ನಿರ್ಮಿಸಲಾಗುವುದು. ಇದಕ್ಕಾಗಿ 4.80 ಕೋಟಿ ಬಿಡುಗಡೆಯಾಗಿದೆ. ಉಳಿದೆಡೆ ಗ್ರಾ.ಪಂ. ಕಾರ್ಯಾಚರಣೆಗೆ ಪೂರಕವಾಗಿ ವಿಸ್ತರಣಾ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಬೆಳಗಾವಿ ಜಿಪಂ ಸಿಇಒ ದೀಪಾ ಚೋಲನ್ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಅತ್ಯಾಧುನಿಕ ಎಲ್‌ಸಿಡಿ, ಕಂಪ್ಯೂಟರ್, ಇಂಟರ್‌ನೆಟ್ ಸೇರಿದಂತೆ ಎಲ್ಲ ಸೌಲಭ್ಯ ಅಳವಡಿಸಲಾಗುವುದು. ತರಬೇತಿ, ಸಭೆ ಸಮಾರಂಭ, ಗ್ರಾಮಸಭೆ, ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು.
-ದೀಪಾ ಚೋಲನ್, ಬೆಳಗಾವಿ ಜಿ.ಪಂ. ಸಿಇಒ

ಬಾಗಲಕೋಟೆ    161    10
ಬೆಂಗಳೂರು(ಗ್ರಾ)    98    1
ಬೆಂಗಳೂರು(ನ)    86    0
ಬೆಳಗಾವಿ    486    30
ಬಳ್ಳಾರಿ    189    12
ಬೀದರ    175    5
ಬಿಜಾಪುರ    199    25
ಚಾಮರಾಜನಗರ    120    8
ಚಿಕ್ಕಬಳ್ಳಾಪುರ    151    8
ಚಿಕ್ಕಮಗಳೂರ    226    12
ಚಿತ್ರದುರ್ಗ    185    15
ದಕ್ಷಿಣಕನ್ನಡ    203    2
ಧಾರವಾಡ    127    7
ಗದಗ    106    15
ಗುಲ್ಬರ್ಗಾ    220    6
ಹಾಸನ    258    6
ಹಾವೇರಿ    208    10
ಕೊಡಗು    98    0
ಕೋಲಾರ    156    20
ಕೊಪ್ಪಳ    134    10
ಮಂಡ್ಯ    232    10
ಮೈಸೂರ    235    8
ರಾಯಚೂರ    165    10
ರಾಮನಗರ    130    8
ಶಿವಮೊಗ್ಗ    260    5
ತುಮಕೂರು    321    30
ಉಡುಪಿ    146    2
ಉತ್ತರ ಕನ್ನಡ    208    3
ಯಾದಗೀರಿ    117    10
ಒಟ್ಟು    5629    300

 ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.