7 ಗಣ್ಯರಿಗೆ ಗೌಡಾ ಪ್ರದಾನ

ಕನ್ನಡಪ್ರಭ ವಾರ್ತೆ , ಬಳ್ಳಾರಿ , ಜೂ. 21
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಬಾಹ್ಯಕಾಶ ಸಂಶೋಧಕ ಪ್ರೊ. ಯು.ಆರ್. ರಾವ್, ಚಿತ್ರನಟ ಶಿವರಾಜ್ಕುಮಾರ್, ಸಂಗನಬಸವ ಸ್ವಾಮೀಜಿ ಸೇರಿ 7 ಮಂದಿಗೆ ಶನಿವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅನಾರೋಗ್ಯ ನಿಮಿತ್ತ ಗೈರು ಹಾಜರಾಗಿದ್ದರು. ವಿವಿಯ ದ್ವಿತೀಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಪಾಲ, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ ಎಂ. ರಾಮಾಜೋಯಿಸ್ ಹಾಗೂ ಕುಲಪತಿ ಪ್ರೊ. ಮಂಜಪ್ಪ ಡಿ. ಹೊಸಮನಿ ಅವರು ಪ್ರೊ. ಯು.ಆರ್. ರಾವ್, ಚಿತ್ರನಟ ಶಿವರಾಜ್ಕುಮಾರ್, ಸಂಗನಬಸವ ಸ್ವಾಮಿಗಳು, ಶಿಕ್ಷಣ ತಜ್ಞ ಡಾ. ಎಸ್.ಸಿ. ಶರ್ಮಾ, ವಾಣಿಜ್ಯೋದ್ಯಮಿ ಜೇಕಬ್ ಕ್ರಾಸ್ಟಾ, ಸಾಮಾಜಿಕ ಸೇವೆಗೆ ಸಿ.ಆರ್. ನಾಸೀರ್ ಅಹಮದ್, ನಾಟಕ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದರು.
ಗಮನ ಸೆಳೆದ ಕೃಷ್ಣದೇವರಾಯ ಕಿರೀಟ: ಘಟಿಕೋತ್ಸವ ಭಾಷಣಕಾರ ಡಾ. ರಾಮಾಜೋಯಿಸ್ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದ ಏಳು ಅತಿಥಿಗಳಿಗೆ ಶ್ರೀಕೃಷ್ಣದೇವರಾಯ ಆಡಳಿತ ಕಾಲದ ಕಿರೀಟ ತೊಡಿಸಿದ್ದು, ವಿವಿ ಕುಲಪತಿ ಮಂಜಪ್ಪ ಡಿ. ಹೊಸಮನಿ, ಕುಲಸಚಿವ ಪ್ರೊ. ವಿಜಯಕುಮಾರ್, ಮೌಲ್ಯಮಾಪನ ಕುಲಸಚಿವ ಪ್ರೊ. ಎಲ್.ಆರ್. ನಾಯಕ್ ಅವರು ಕಿರೀಟ ತೊಟ್ಟು ಮುಖ್ಯ ಅತಿಥಿಗಳನ್ನು ಸಭೆಗೆ ಕರೆತಂದದ್ದು ವಿಶೇಷವಾಗಿತ್ತು.
ಅಣ್ಣಾ ಹಜಾರೆ ಗೈರು: ಗೌರವ ಡಾಕ್ಟರೇಟ್ ಸ್ವೀಕರಿಸಬೇಕಿದ್ದ ಅಣ್ಣಾ ಹಜಾರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ರಾಜ್ಯಪಾಲರು, ವಿಶ್ವವಿದ್ಯಾಲಯದ ಕುಲಾಧಿಪತಿಗಳು ಡಾ. ಹಂಸರಾಜ್ ಭಾರದ್ವಾಜ್, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಗೈರು ಹಾಜರಾಗಿದ್ದರು.
ನಾನೀಗ ಡಾ. ರಾಜ್ ಮಗ ಡಾ. ಶಿವರಾಜ್!
ಬಳ್ಳಾರಿ: ನಾನು ಡಾ. ರಾಜ್ಕುಮಾರ್ ಮಗ ಡಾ. ಶಿವರಾಜ್ಕುಮಾರ್ ಆಗಿದ್ದೇನೆ, ಇದು ಜಂಬದ ಮಾತಲ್ಲ, ಇದು ಹೃದಯದ ಮಾತು ಎಂದು ಡಾ. ಶಿವರಾಜ್ಕುಮಾರ್ ಹೇಳಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಹಲವು ಗಣ್ಯರ ಮಧ್ಯೆ ನನಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಸಂತಸ ತಂದಿದೆ. ಈಗ ನಾನು ಡಾ. ರಾಜ್ಕುಮಾರ್ ಮಗ ಡಾ. ಶಿವರಾಜ್ಕುಮಾರ್ ಆಗಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


