ಪ್ರತಿಭಟನೆ ಸರಣಿ ಸಂಚಾರ ವ್ಯತ್ಯಯ?

ಬೆಂಗಳೂರು: ನಗರದಲ್ಲಿ ಧರಣಿ-ಪ್ರತಿಭಟನೆಗಳು ಸೋಮವಾರ ಹೆಚ್ಚಿರುವುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ.
ರೈತರು ಕಬ್ಬು ಬೆಂಬಲ ಬೆಲೆ ಸೇರಿದಂತೆ ನಾನಾ ಬೇಡಿಕೆ, ಸಿಪಿಎಂ, ಎಸ್‌ಯುಸಿಐನವರು ರೈಲು ಪ್ರಯಾಣದರ ಏರಿಕೆ ತಡೆ, ದಲಿತ ಪ್ಯಾಂಥರ್ಸ್ ಸಂಸ್ಥೆ ಹಲವು ಬೇಡಿಕೆಗಳ ಈಡೇರಿಕೆಗೆ ನಗರದ ವಿಧಾನಸೌಧ ಸುತ್ತಮುತ್ತ ಪ್ರತಿಭಟನೆ ನಡೆಸಲಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘದ ನೇತೃತ್ವದಲ್ಲಿ 15 ಸಾವಿರ ರೈತರು ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಸೋಮವಾರ ಮೆರವಣಿಗೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ.
-ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಕಡೆಗಳಿಂದ ಆನಂದರಾವ್ ಮೇಲ್ಸೇತುವೆ ಮೂಲಕ ನಗರದ ವಿವಿಧ ಸ್ಥಳಗಳಿಗೆ ಹೋಗುವ ವಾಹನ ಸವಾರ, ಚಾಲಕರು ಮಲ್ಲೇಶ್ವರ ಲಿಂಕ್ ರಸ್ತೆ ಮೂಲಕ ಶೇಷಾದ್ರಿಪುರ-ಬಸವೇಶ್ವರ ವೃತ್ತ ತಲುಪಿ, ಅಲ್ಲಿಂದ ನಗರದ ವಿವಿಧೆಡೆ ಸಂಚರಿಸಬಹುದು.
- ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್ ಕಡೆಯಿಂದ ಬಂದು ಆನಂದರಾವ್ ಮೇಲ್ಸೇತುವೆ ಮೂಲಕ ನಗರದ ವಿವಿಧ ಸ್ಥಳಗಳಿಗೆ ತೆರಳುವ ಸವಾರರು, ಚಾಲಕರು ಮಾಗಡಿ ರಸ್ತೆ ಹುಣಸೇಮರ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಬಿನ್ನಿಮಿಲ್, ಸಿರ್ಸಿ ಸರ್ಕಲ್, ಸಿಟಿ ಮಾರುಕಟ್ಟೆ, ಪುರಭವನ ಮೂಲಕ ಚಲಿಸಬಹುದು.
- ಬಸವೇಶ್ವರ ಸರ್ಕಲ್‌ನಿಂದ ರೇಸ್‌ಕೋರ್ಸ್ ರಸ್ತೆ ಮೂಲಕ ಆನಂದರಾವ್ ವೃತ್ತದ ಮೂಲಕ ನಗರದ ವಿವಿಧ ಸ್ಥಳಗಳಿಗೆ ಹೋಗುವ ಸವಾರರು, ಚಾಲಕರು ಬಸವೇಶ್ವರ ವೃತ್ತದ ಬಳಿ ಬಲತಿರುವು ಪಡೆದು ಅರಮನೆ ರಸ್ತೆ, ಕೆ.ಆರ್.ವೃತ್ತ ಮೂಲಕ ಚಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


