ಸೆವಿನ್ರಾಜ್!

ಬೆಂಗಳೂರು: ಈತ ಏಳರ ವೀರ! ಕೆಂಪು-ಬಿಳಿಯೇ ಆಧಾರ! ಇದು 'ಸೆವೆನ್'ರಾಜ್ ಸ್ಪೆಶಲ್.
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸೆವೆನ್ರಾಜ್ ಬದುಕಲ್ಲಿ ಎಲ್ಲವೂ '7' ಮತ್ತು 'ಕೆಂಪು-ಬಿಳಿ'. ಇವರ ಮನೆಗೊಮ್ಮೆ ಭೇಟಿ ಕೊಟ್ಟರೆ ಕಣ್ಣಿಗೆ ಕೆಂಪು ಮತ್ತು ಬಿಳಿ ಬಿಟ್ಟರೆ ಬೇರೆ ಯಾವ ಬಣ್ಣವೂ ಕಾಣುವುದಿಲ್ಲ. 'ನನ್ನ ಕಣ್ಣೇ ನನಗೆ ಮೋಸ ಮಾಡುತ್ತಿದೆಯೇ' ಎಂದು ಕಣ್ಣುಜ್ಜಿಕೊಳ್ಳಬಹುದು. ಉದ್ಯಮಿ ಸೆವೆನ್ರಾಜ್ ಅವರ ಹೆಸರೇ ಹೇಳುವಂತೆ 'ಸೆವೆನ್' ಎಂದರೆ ಅವರಿಗೆ ಪ್ರಾಣವಂತೆ. ಅವರ ತಂದೆ ಅವರಿಗೆ 'ಸೆವೆನ್ರಾಜ್' ಎಂದು ಹೆಸರಿಟ್ಟಂದಿನಿಂದಲೇ '7'ರ ಮೇಲೆ ಅತೀವ ಪ್ರೀತಿ ಬೆಳೆಸಿಕೊಂಡಿದ್ದಾರೆ. ಇಲ್ಲಿಗೇ ಮುಗಿಯಲ್ಲ ಅವರ ವೈಶಿಷ್ಯ, ಕೆಂಪು ಮತ್ತು ಬಿಳಿ 'ಅದೃಷ್ಟದ ಬಣ್ಣ'ಗಳು. ಹಾಗಾಗಿ ಈ ಬಣ್ಣಗಳು ರಾಜ್ ಜೀವನದಲ್ಲಿ ಹಾಸುಹೊಕ್ಕು.
ಎಲ್ಲೆಲ್ಲೂ ಕೆಂಪು-ಬಿಳಿ
ಸೆವೆನ್ರಾಜ್ರನ್ನು 'ಕೆಂಪು-ಬಿಳಿ' ರಾಜ್ ಎಂದೂ ಕರೆಯಬಹುದು. ಏಕೆಂದರೆ, ಅವರು ಧರಿಸುವ ಬಟ್ಟೆಯಿಂದ ಹಿಡಿದು ಹಲ್ಲುಜ್ಜುವ ಪೇಸ್ಟ್ ಕೂಡ ಇದೇ ಬಣ್ಣದ್ದು. ಧರಿಸುವ ಸೂಟ್, ಮನೆಯ ಬಣ್ಣ, ಓಡಾಡುವ ಕಾರು, ತಟ್ಟೆ, ಚಮಚ, ಫೋರ್ಕ್, ಸೋಫಾ ಎಲ್ಲವೂ ಕೆಂಪು-ಬಿಳಿ... ಪತ್ನಿ ಮತ್ತು ಇಬ್ಬರು ಮಕ್ಕಳೂ ಕೆಂಪು-ಬಿಳಿ ವಸ್ತ್ರಗಳನ್ನೇ ಧರಿಸುತ್ತಾರೆ. ಗಾಂಧೀಜಿ ಅವರನ್ನು ಜನ ಕನ್ನಡಕ ಮತ್ತು ಹೆಗಲಿನ ಬಿಳಿ ಶಾಲಿನಿಂದ ಗುರುತಿಸುವಂತೆ ನನ್ನನ್ನು ಕೆಂಪು- ಬಿಳಿ ಮತ್ತು 7ರ ಅಂಕಿಯಿಂದ ಗುರುತಿಸಬೇಕು ಎನ್ನುತ್ತಾರೆ ಸೆವೆನ್ರಾಜ್.
7 ಬೀಳಿಲ್ಲ
7 ಅವರನ್ನು ಸೆ'ವಿನ್'ರಾಜ್ ಮಾಡಿದೆ. ಆ ಹೆಸರು ಇಟ್ಟಾಗಿನಿಂದಲೂ ಅದೃಷ್ಟಲಕ್ಷ್ಮಿ ಬಿಟ್ಟು ಹೋಗಿಲ್ಲ. ಹಾಗಾಗಿ ಅವರು '7'ನ್ನು ಜೀವನದ ಅವಿಭಾಜ್ಯ ಅಂಗವೆಂದೇ ತಿಳಿದಿದ್ದಾರೆ. 7ನೇ ಮಗನಾದ್ದರಿಂದ ತಂದೆ ಆ ಹೆಸರಿಟ್ಟರು. ಅವರು ತಮ್ಮ ಕಾರಿನ ಹಿಂದೆ '7' ಎಂದು ಬರೆಸಿದ್ದಾರೆ. ಅವರು ಧರಿಸುವ ಬ್ಲೇಜರ್ನಲ್ಲಿ '7' ಗುಂಡಿಗಳಿವೆ. ದೂರವಾಣಿ ಸಂಖ್ಯೆ '777'ರಲ್ಲಿ ಕೊನೆಯಾಗುತ್ತದೆ. ಸೆವೆನ್ರಾಜ್ಗೆ ಮಲೇಷ್ಯಾ, ಹಿಂದಿ, ಇಂಗ್ಲಿಷ್, ತಮಿಳು, ಮರಾಠಿ ಸೇರಿದಂತೆ 7 ಭಾಷೆಗಳು ಗೊತ್ತು. ಒಟ್ಟಾರೆ ಇವರು ಏಳರ ವೀರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


