ಆಂಧ್ರಪ್ರದೇಶದ ಗೈಲ್ ಪೈಪ್ಲೈನ್ ಸ್ಫೋಟ 15 ಸಾವು

ಪಿಟಿಐ, ರಾಜಮಂಡ್ರಿ/ಹೈದರಾಬಾದ್/ನವದೆಹಲಿ, ಜೂ.27
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಗರಂನಲ್ಲಿ ಗೈಲ್ಗೆ ಸೇರಿದ ಅನಿಲ ಕೊಳವೆ ಸ್ಫೋಟಿಸಿ 15 ಮಂದಿ ಅಸುನೀಗಿ, 18 ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಲ್ಯಾಂಕೋ ಇನ್ಫ್ರಾಟೆಕ್ ಎಂಬ ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆಗೆ ಕೊಳೆವೆಯಲ್ಲಿ ಅನಿಲ ಸಾಗಿಸಲಾಗುತ್ತಿತ್ತು. ಈ ದುರಂತದಲ್ಲಿ 13 ಮಂದಿ ಸುಟ್ಟು ಕರಕಲಾಗಿದ್ದರೆ, ಇಬ್ಬರು ತೀವ್ರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ಫೋಟವಾಯಿತು: ಶುಕ್ರವಾರ ಬೆಳಗ್ಗೆ 5 ಗಂಟೆಗೆ ಈ ದುರಂತ ನಡೆದಿದೆ. ಅಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗುತ್ತಿತ್ತು. ಸಣ್ಣ ಚಹಾ ಅಂಗಡಿಯವನೊಬ್ಬ ಸ್ಟೌ ಹೊತ್ತಿಸಿದ. ಈ ಸಂದರ್ಭದಲ್ಲಿ ಸೋರಿಕೆಯಾಗಿದ್ದ ಅನಿಲಕ್ಕೆ ಬೆಂಕಿಯ ಕೆನ್ನಾಲಿಗೆ ತಗುಲಿತು. ಅದೇ ಸಂದರ್ಭದಲ್ಲಿ ಭಾರಿ ಸ್ಫೋಟವಾಗಿ, ಬೆಂಕಿ ಹತ್ತಿಕೊಂಡಿತು. ಸ್ಫೋಟ ನಡೆದ ಕೆಲವೇ ಮೀಟರ್ ದೂರದಲ್ಲಿ ಒಎನ್ಜಿಸಿಯ ತಟಿಪಕ ತೈಲ ಶುದ್ಧೀಕರಣಗಾರವೂ ಇದೆ. ಘಟನೆ ಬಳಿಕ ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಎಲ್ಲಿ ದುರಂತ?
ಆಂಧ್ರಪ್ರದೇಶದ ಗೋದಾವರಿಯ ನಗರಂ ಗ್ರಾಮದಲ್ಲಿ
ಏನಾಯಿತು?
ಓಎನ್ಜಿಸಿಯ ತೈಲ ಕೊಳವೆ ಸ್ಫೋಟ
15 ಸಾವು, 18 ಗಾಯ
ಕಾರಣವೇನು?
ಹಳೆಯದಾಗಿ ತುಕ್ಕು ಹಿಡಿದಿದ್ದ ಕೊಳವೆ. ಅಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆ
ಮನೆಗಳನ್ನು ಬಿಟ್ಟು ಓಡಿದರು
ಸ್ಫೋಟದ ಸದ್ದು ಕೇಳುತ್ತಲೇ ನಗರಂನ ಸ್ಥಳೀಯರು ಮನೆಗಳನ್ನು ಬಿಟ್ಟು ಓಡಿದರು. ಅವರಿಗೆ ಕೆಲ ಕಾಲ ಏನಾಗುತ್ತಿದೆ ಎಂಬ ವಿಚಾರವೇ ಗಮನಕ್ಕೆ ಬರಲೇ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


