ಪ್ರಧಾನ ಸುದ್ದಿ

ಜವಾಬ್ದಾರಿ ಹೆಚ್ಚಾಗಿದೆ, ಅವನ ಮೇಲೆ ನಿರೀಕ್ಷೆ ದೊಡ್ಡದಾಗಿದೆ

Published On :

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ಅವರ ಪುತ್ರ ಆರ್.ಮನೋರಂಜನ್ ಮೊದಲ ಬಾರಿಗೆ ಅಭಿನಯಿಸುತ್ತಿರುವ 'ರಣಧೀರ' ಚಿತ್ರದ ಮುಹೂರ್ತ ಎರಡು ದಿನ ಮಾತ್ರ ಬಾಕಿ ಉಳಿದಿದೆ.
ಭಾರತದಲ್ಲೇ ಇದುವರೆಗೂ ಯಾರೂ ಮಾಡದಂತಹ ಅಹ್ವಾನ ಪತ್ರಿಕೆಯನ್ನು ವಿನ್ಯಾಸ ಮಾಡುವ ಮೂಲಕ ಮೊದಲ ಹೆಜ್ಜೆಯಲ್ಲೇ ಗಮನ ಸೆಳೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್, 12 ಪುಟಗಳ ಅಹ್ವಾನ ಪತ್ರಿಕೆಯಲ್ಲಿ ತಮ್ಮ ಕನಸುಗಳನ್ನು ಅನಾವರಣಗೊಳಿದ್ದಾರೆ. ಮೇ. 30ರಂದು ಅದ್ಧೂರಿಯಾಗಿ ಮುಹೂರ್ತ ನೈಸ್ ರಸ್ತೆಯಲ್ಲಿ ಮುಹೂರ್ತ ನಡೆಯಲಿದೆ. ಚಿತ್ರೋದ್ಯಮದ ಎಲ್ಲ ಗಣ್ಯರು ಅಂದು ಸಂಜೆ 7 ಗಂಟೆಗೆ ನಡೆಯಲಿರುವ ಅದ್ಧೂರಿ  ಸಮಾರಂಭಕ್ಕೆ ಆಗಮಿಸಲಿದ್ದಾರೆ.  ನಟ ರವಿಚಂದ್ರನ್ ಅವರು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನೇರವಾಗಿ ಮುಹೂರ್ತದ ಸೆಟ್‌ಗೆ ಆಗಮಿಸಿ ಶೂಟಿಂಗ್ ಶುರು ಮಾಡಲಿದ್ದಾರೆ. ಮೊದಲ ಬಾರಿಗೆ ಹಾಡಿನ ಚಿತ್ರೀಕರಣ ನಡೆಯಲಿದ್ದು, ಇದಕ್ಕಾಗಿ ವಿಶೇಷವಾದ ಸೆಟ್ ನಿರ್ಮಾಣದ ರೂಪರೇಷಗಳನ್ನು ಸಿದ್ಧಪಡಿಸುತ್ತಿದ್ದಾರೆ. 'ತುಂಬಾ ಕನಸು ಕಟ್ಟಿಕೊಂಡು ನನ್ನ ಮಗನ ಸಿನಿಮಾ ಮಾಡುತ್ತಿದ್ದೇನೆ. ಅಹ್ವಾನ ಪತ್ರಿಕೆ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಇಡೀ ಭಾರತದಲ್ಲೇ ಯಾರೂ ಇಂಥ ಅಹ್ವಾನ ಪತ್ರಿಕೆ ಮಾಡಿಲ್ಲ. ಚಿತ್ರೋದ್ಯಮದ ಎಲ್ಲ ಗಣ್ಯರು ಆಗಮಿಸಿ ನನ್ನ ಮಗನಿಗೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ' ಎಂದು ನಟ ರವಿಚಂದ್ರನ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
 'ನನ್ನ ತಂದೆ ಯಾವಾಗ್ಲೂ ಒಂದು ಮಾತು ಹೇಳುತ್ತಿದ್ದರು. 'ವೀರಸ್ವಾಮಿಯವರ ಮಗ ರವಿಚಂದ್ರನ್ ಆಗಬಾರದು. ರವಿಚಂದ್ರನ್ ತಂದೆ ವೀರಸ್ವಾಮಿ ಆಗಬೇಕು' ಅಂತ. ಈಗ ನನ್ನ ಆಸೆನೂ ಅದೇ, ಮನೋರಂಜನ್ ತಂದೆ ಕ್ರೇಜಿಸ್ಟಾರ್ ಆಗೇಬೇಕು ಅಂತ. ನಾನು ಅವನಿಗೆ ಮಾಡುವ ಆಶೀರ್ವಾದ ಕೂಡ ಇದೇ' ಎಂದ ರವಿಚಂದ್ರನ್, ಮಗನ ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ ನನ್ನ ಜವಾಬ್ದಾರಿಯೂ ದುಪ್ಪಟ್ಟಾಗಿದೆ. ಹಾಗೆ ನನ್ನ ಮಗನ ಮೇಲೂ ನಿರೀಕ್ಷೆಗಳೂ ಹೆಚ್ಚಾಗಿವೆ. ಈ ಎರಡನ್ನೂ ನಿಭಾಯಿಸುವುತ್ತೇನೆ ಎಂದು ನನ್ನ ಅಭಿಮಾನಿಗಳಿಗೆ ಭರವಸೆ ಕೊಡುತ್ತೇನೆ. ನನ್ನನ್ನು ಪ್ರೀತಿಸಿದಂತೆ ನನ್ನ ಮಗನನ್ನು ಪ್ರೀತಿಸಿ ಬೆಳೆಸಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಅಭಿಮಾನಿಗಳ ಸಂದೇಶ
ರಾಜ್ಯದ ಎಲ್ಲ ಕಡೆಯಿಂದಲೂ ಅಭಿಮಾನಿಗಳು ಬರಲು ಸಾಧ್ಯವಾಗದ ಕಾರಣ ನಟ ರವಿಚಂದ್ರನ್ ಅವರು ವಿಶೇಷವಾದ ಯೋಜನೆ ರೂಪಿಸಿದ್ದಾರೆ. 5 ಕ್ಯಾಂಟರ್‌ಗಳನ್ನು ಸಿದ್ಧಪಡಿಸಿದ್ದಾರೆ. ಇವು ರಾಜ್ಯದ ಎಲ್ಲ ಕಡೆ 2 ತಿಂಗಳು ಕಾಲ ಸಂಚರಿಸಲಿದ್ದು, ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಕ್ರೇಜಿಸ್ಟಾರ್‌ರ ಹಿತೈಷಿಗಳು ಅವರ ಪುತ್ರನ ಚಿತ್ರಕ್ಕೆ ಶುಭ ಕೋರಿದ ಸಂದೇಶಗಳನ್ನು ಈ ಕ್ಯಾಂಟರ್‌ಗಳ ಮೂಲಕ ಕಳುಹಿಸಬಹುದು. ಎಲ್ಲ ಸಂದೇಶಗಳನ್ನು ರವಿಚಂದ್ರನ್ ಅವರೇ ಓದಲಿದ್ದು, ಪ್ರತಿ ಸಂದೇಶದಲ್ಲೂ ಸಂಪರ್ಕ ವಿಳಾಸವನ್ನೂ ಹಾಕುವಂತೆ ಅವರ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.