ಪ್ರಧಾನ ಸುದ್ದಿ

ಏಳು ಭ್ರಷ್ಟ ಅಧಿಕಾರಿಗಳ 7 ಕೋಟಿ ಅಕ್ರಮ ಆಸ್ತಿ ಪತ್ತೆ

Published On :

ಬೆಂಗಳೂರು: ರಾಜ್ಯದ ಏಳು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 23 ಸ್ಥಳಗಳ ಮೇಲೆ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 7 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.


-ಸಿ.ಕೇಶವಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ ಬೆಂಗಳೂರು
ಸಂಜಯ್‌ನಗರ ಗೆದ್ದಲಹಳ್ಳಿಯಲ್ಲಿ 2 ಅಂತಸ್ತಿನ ಮನೆ 55 ಲಕ್ಷ, ಹೆಣ್ಣೂರು-ಬಾನಸವಾಡಿ ರಸ್ತೆಯಲ್ಲಿ ಮನೆ 50 ಲಕ್ಷ, ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ 12 ಲಕ್ಷ, ಕೋರಮಂಗಲದಲ್ಲಿ ನಿವೇಶನ 22 ಲಕ್ಷ. ಹೊಂಡಾ ಸಿವಿಕ್ ಕಾರು 14 ಲಕ್ಷ, ಸ್ವಿಫ್ಟ್ ಕಾರು 6 ಲಕ್ಷ, ನಗದು 5.50 ಲಕ್ಷ, 1 ಕೆ.ಜಿ 396 ಗ್ರಾಂ ಚಿನ್ನಾಭರಣ, ಬ್ಯಾಂಕ್ ಖಾತೆಯಲ್ಲಿ 17.45 ಲಕ್ಷ, ನಿಶ್ಚಿತ ಠೇವಣಿ 10 ಲಕ್ಷ, ಗೃಹೋಪಯೋಗಿ ವಸ್ತುಗಳು 11.51 ಲಕ್ಷ.
ಒಟ್ಟು ಆಸ್ತಿ: 2.86 ಕೋಟಿ
ಅಕ್ರಮ ಆಸ್ತಿ: 1.86 ಕೋಟಿ. ಶೇ.201.53

-ಇರ್ಶಾದ್ ಅಹ್ಮದ್ ಶಂಶುದ್ದೀನ್, ಸಹಾಯಕ ಅಭಿಯಂತರ, ಬೆಳಗಾವಿ ಮಮಹಾನಗರ ಪಾಲಿಕೆ
ಬೆಳಗಾವಿಯಲ್ಲಿ ಮನೆ 40 ಲಕ್ಷ, ಮಹಾತೇಂಶ ನಗರದಲ್ಲಿ ಮನೆ 20 ಲಕ್ಷ, 8.95 ಲಕ್ಷ, 18 ಲಕ್ಷ, 8ಲಕ್ಷ ಮೌಲ್ಯದ ನಿವೇಶನಗಳು, 1 ಕೆ.ಜಿ 780 ಗ್ರಾಂ ಚಿನ್ನಾಭರಣ, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ 11.55 ಲಕ್ಷ, ವಿಮೆ 8.79 ಲಕ್ಷ.
ಒಟ್ಟು ಆಸ್ತಿ: 1.76 ಕೋಟಿ
ಅಕ್ರಮ ಆಸ್ತಿ: 1.37 ಕೋಟಿ ಶೇ.247.78

-ಇ.ಹಾಲೇಶಪ್ಪ, ಸಹಾಯಕ ಅಭಿಯಂತರ, ಕರ್ನಾಟಕ ರಾಜ್ಯ ನಿರ್ಮಾಣ ನಿಗಮ
ಶಿವಮೊಗ್ಗದ ವಿನೋಬಾ ನಗರದಲ್ಲಿ ಕಟ್ಟಡ ಮೌಲ್ಯ 70 ಲಕ್ಷ, ಬೆಂಗಳೂರಿನ ಬನಶಂಕರಿಯಲ್ಲಿ ನಿವೇಶನ 15 ಲಕ್ಷ, ಕಾರು ಹಾಗೂ ದ್ವಿಚಕ್ರ ವಾಹನಗಳು 5 ಲಕ್ಷ, ಗೃಹಬಳಕೆ ವಸ್ತುಗಳು 6 ಲಕ್ಷ, 120 ಗ್ರಾಂ ಚಿನ್ನಾಭರಣ.
ಒಟ್ಟು ಆಸ್ತಿ: 1.03 ಕೋಟಿ.
ಅಕ್ರಮ ಆಸ್ತಿ: 63.84 ಲಕ್ಷ. ಶೇ.127.69

-ಪರಮೇಶ್ವರಪ್ಪ ಎಚ್.ವಿಭೂತಿ, ಕಚೇರಿ ವ್ಯವಸ್ಥಾಪಕ, ಹುಬ್ಬಳ್ಳಿ ಧಾರವಾಣ ನಗರಾಭೀವೃದ್ಧಿ ಪ್ರಾಧಿಕಾರ
ಹುಬ್ಬಳ್ಳಿ ರೇಣುಕಾನಗರದಲ್ಲಿ ಮನೆ 20 ಲಕ್ಷ, ಗ್ರಾಮಾಂತರ ಪ್ರದೇಶದಲ್ಲಿ ಶೇತ್ಕಿ ಜಮೀನು 12.95 ಲಕ್ಷ, ಇನ್ನೋವಾ ಕಾರು 13 ಲಕ್ಷ, ಆಲ್ಟೋ ಕಾರು 1.6 ಲಕ್ಷ, 350 ಗ್ರಾಂ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು 6 ಲಕ್ಷ.
ಒಟ್ಟು ಆಸ್ತಿ: 85.22 ಲಕ್ಷ
ಅಕ್ರಮ ಆಸ್ತಿ: 71.72 ಲಕ್ಷ ಶೇ.166.80

- ಶರಣಬಸಪ್ಪ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್
ಗುಲ್ಬರ್ಗದಲ್ಲಿ ಮನೆ 10.89 ಲಕ್ಷ, ಸಂಚಾರಿ ಹೈಕೋರ್ಟ್ ಬಳಿ ಮನೆ 19.39 ಲಕ್ಷ, 1 ಕಾರು 2 ದ್ವಿಚಕ್ರ ವಾಹನಗಳು 4 ಲಕ್ಷ, ಗೃಹ ಬಳಕೆ ವಸ್ತುಗಳು 8.35 ಲಕ್ಷ.
ಒಟ್ಟು ಆಸ್ತಿ: 64.24 ಲಕ್ಷ
ಅಕ್ರಮ ಆಸ್ತಿ: 57.43 ಲಕ್ಷ ಶೇ.171.44

- ಶಿವಪುತ್ರಪ್ಪ ಹಲಚೇರಿ, ಕಚೇಪಿ ಅಧೀಕ್ಷಕರು ಕರ್ನಾಟಕ ಗೃಹ ಮಂಡಳಿ
ಚಿಂಚೋಳಿಯಲ್ಲಿ ಜಮೀನು 2.72 ಲಕ್ಷ, ಗುಲ್ಬರ್ಗಾದಲ್ಲಿ ಕಟ್ಟಡ 15 ಲಕ್ಷ, ಬೆಂಗಳೂರಿನಲ್ಲಿ ನಿವೇಶನ 8.50 ಲಕ್ಷ, 2 ದ್ವಿಚಕ್ರ ವಾಹನಗಳು, ಗೃಹೋಪಯೋಗಿ ವಸ್ತುಗಳು 6.46 ಲಕ್ಷ.
ಒಟ್ಟು ಆಸ್ತಿ: 1.12 ಕೋಟಿ.
ಅಕ್ರಮ ಆಸ್ತಿ: 81.80 ಲಕ್ಷ. ಶೇ.146.07

-ಸುಭಾಷ್ ಚಂದ್ರ ಶರ್ಮಾ, ಕಿರಿಯ ಅಭಿಯಂತರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ
ಶಹಾಪುರ ದೇವಿ ನಗರದಲ್ಲಿ ಕಟ್ಟಡ 30 ಲಕ್ಷ, ನಿವೇಶನ 2.67 ಲಕ್ಷ ಕೃಷಿ ಜಮೀನು 2.83 ಲಕ್ಷ, ಗುಲ್ಬರ್ಗಾದಲ್ಲಿ ನಿವೇಶನ 7.93 ಲಕ್ಷ, ಜೇವರ್ಗಿಯಲ್ಲಿ ಜಮೀನು 53.45 ಲಕ್ಷ. ಮಾರುತಿ ಸ್ವಿಫ್ಟ್ ಕಾರು 8.15 ಲಕ್ಷ, ಬುಲೇರೋ ವಾಹನ 7.29 ಲಕ್ಷ, 2 ದ್ವಿಚಕ್ರ ವಾಹನಗಳು ಅರ್ಧ ಕೆ.ಜಿ ಚಿನ್ನಾಭರಣ.
ಒಟ್ಟು ಆಸ್ತಿ: 99.62 ಲಕ್ಷ
ಅಕ್ರಮ ಆಸ್ತಿ: 73.32 ಲಕ್ಷ ಶೇ.278.81

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.