ಪ್ರಧಾನ ಸುದ್ದಿ

ಉತ್ತರದಲ್ಲಿ ಮಾತಿನ ಅಬ್ಬರ: ಮೋದಿ, ಮುಲಾಯಂ, ಕೇಜ್ರಿ ಪ್ರಚಾರ ಭರಾಟೆ

ಉತ್ತರದಲ್ಲಿ ಮಾತಿನ ಅಬ್ಬರ: ಮೋದಿ,  ಮುಲಾಯಂ, ಕೇಜ್ರಿ ಪ್ರಚಾರ ಭರಾಟೆ
Published On :

ಲಖನೌ: ರಾಜಕೀಯ ಘಟಾನುಘಟಿಗಳ ಮೂರು ಬೃಹತ್ ರ್ಯಾಲಿಗಳಿಗೆ ಭಾನುವಾರ ಉತ್ತರಪ್ರದೇಶ ಸಾಕ್ಷಿಯಾಯಿತು. ಲಖನೌನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಅಲಹಾಬಾದ್‌ನಲ್ಲಿ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಹಾಗೂ ಕಾನ್ಪುರದಲ್ಲಿ ಆಪ್ ನಾಯಕ ಅರವಿಂದ ಕೇಜ್ರಿವಾಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಜಕೀಯವಾಗಿ ಪ್ರಾಮುಖ್ಯತೆ ಗಳಿಸಿರುವ ಉತ್ತರಪ್ರದೇಶದಲ್ಲಿ ಬರೋಬ್ಬರಿ 80 ಲೋಕಸಭಾ ಸೀಟುಗಳಿವೆ. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎನ್ನುವುದರಲ್ಲಿ ಈ ರಾಜ್ಯ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಎಲ್ಲರ ಕಣ್ಣು ಉ.ಪ್ರದೇಶದತ್ತ ನೆಟ್ಟಿದೆ. ರಾಜಕೀಯ ನಾಯಕರು ಪರಸ್ಪರ ದಾಳಿ-ಪ್ರತಿದಾಳಿ ನಡೆಸುತ್ತಾ ಮತದಾರ ಪ್ರಭುವನ್ನು ತಮ್ಮತ್ತ ಸೆಳೆಯಲು ಕಸರತ್ತು ಮಾಡುತ್ತಿರುವುದು ಭಾನುವಾರದ ರ್ಯಾಲಿಗಳಲ್ಲಿ ಕಂಡುಬಂತು.

ನಿಮ್ಮನ್ನು ನಮ್ಮೊಂದಿಗೆ ಹೋಲಿಸಲು ನಿಮಗೆಷ್ಟು ಧೈರ್ಯ?

ಉತ್ತರಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 150 ಗಲಭೆಗಳು ನಡೆದಿವೆ. ಆದರೆ ಗುಜರಾತ್‌ನಲ್ಲಿ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ. ಹೀಗಿರುವಾಗ ನಿಮ್ಮನ್ನು(ಮುಲಾಯಂ) ನಮ್ಮೊಂದಿಗೆ ಹೋಲಿಕೆ ಮಾಡಲು ನಿಮಗೆಷ್ಟು ಧೈರ್ಯ?
ಉ.ಪ್ರದೇಶದಲ್ಲಿ ಒಂದೇ ವರ್ಷದಲ್ಲಿ 20 ಸಾವಿರ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಹೀಗಿದ್ದರೂ ನೇತಾಜಿಯವರು, ಗುಜರಾತಲ್ಲಿ ನಾನೇನು ಕ್ರಮ ಕೈಗೊಂಡಿದ್ದೆ ಎಂದು ಪ್ರಶ್ನಿಸುತ್ತಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.