ಪ್ರಧಾನ ಸುದ್ದಿ

ನನ್ನ ಸ್ಪರ್ಧೆಯಿಂದಲೇ ಎತ್ತಿನಹೊಳೆಗೆ ಪ್ರಚಾರ

Published On :

ಮಂಗಳೂರು: ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಾಧಕ ಇಲ್ಲ. ನಾನು ಮಂಗಳೂರು ಲೋಕಸಭೆ ಟಿಕೆಟ್ ಆಕಾಂಕ್ಷಿ ಎಂದು ಗೊತ್ತಾದಾಗ ನೇತ್ರಾವತಿ, ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಮಹತ್ವ ಬಂತು ಎಂದು ಹರ್ಷ ಮೊಯ್ಲಿ ಹೇಳಿದರು.
ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಲಾಯಿತು. ಯೋಜನೆಗೆ ರಾಜಕೀಯ ಬಣ್ಣ ಬಳಿಯಲಾಯಿತು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.  ದಕ್ಷಿಣ ಕನ್ನಡ ಜಿಲ್ಲೆಗೆ ಹಾನಿಯಾಗುವ ಯಾವುದೇ ಯೋಜನೆಗಳನ್ನು ನಾನು ಬೆಂಬಲಿಸುವುದಿಲ್ಲ,  ಹಾನಿಯಾಗುತ್ತದೆ ಎಂಬುದನ್ನು ತಜ್ಞರು ಹೇಳಬೇಕಾಗುತ್ತದೆ. ಈ ಯೋಜನೆಯನ್ನು ತಜ್ಞರೇ ರೂಪಿಸಿದ್ದಾರೆ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ವೀರಪ್ಪ ಮೊಯ್ಲಿ ಅವರ ರಾಜಕೀಯ ಉದ್ದೇಶಕ್ಕೆ ಎತ್ತಿನಹೊಳೆ ಯೋಜನೆ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಮಗ ಮೊಯ್ಲಿ, ವೈಯಕ್ತಿಕ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು.
ತುಳು ಮತ್ತು ಇಂಗ್ಲೀಷ್‌ನಲ್ಲಿ ಗೋಷ್ಠಿ!: ಕೇಂದ್ರ ಸಚಿವ, ಕನ್ನಡದಲ್ಲಿ ಮಹಾಕಾವ್ಯಗಳನ್ನು, ಕಾದಂಬರಿಗಳನ್ನು ಬರೆದಿರುವ ಎಂ.ವೀರಪ್ಪ ಮೊಯ್ಲಿ, ಮಗ ಮಾತ್ರ ಇಂಗ್ಲಿಷ್‌ನಲ್ಲಿಯೇ ಗೋಷ್ಠಿ ನಡೆಸಿದರು. ಮಧ್ಯೆ ಮಧ್ಯೆ ತುಳು ಶಬ್ದಗಳನ್ನು ಬಳಸಿದರು. ಕನ್ನಡದ ಪ್ರಶ್ನೆಗಳು ಬಂದಾಗ ಇಂಗ್ಲಿಷ್‌ನಲ್ಲಿಯೇ ನಾನು ನೋಡುತ್ತೇನೆ ಎಂದಷ್ಟೇ ಉತ್ತರಿಸಿದರು!
ವಿವೇಚನ ಅಧಿಕಾರದಿಂದ ಎಡವಟ್ಟು !
ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ನಾಮಪತ್ರ ಸರಿಯಾಗಿಯೇ ಸಲ್ಲಿಸಿದ್ದೇನೆ. ಒಬ್ಬ ವ್ಯಕ್ತಿ ಮೇಲೆ ಸಂಪೂರ್ಣ ವಿವೇಚನಾಧಿಕಾರ ನೀಡಿದಾಗ ಇಂಥ ತಪ್ಪುಗಳು ಆಗುತ್ತವೆ. ಆದರೆ, ನಾನು ಇದನ್ನು ಪ್ರಶ್ನಿಸುವುದಿಲ್ಲ ಎಂದು ಆಭ್ಯರ್ಥಿ ಆಯ್ಕೆಯ ಆಂತರಿಕ ಚುನಾವಣೆಯಿಂದ ಹೊರ ಬಿದ್ದಿರುವ ಹರ್ಷ ಮೊಯ್ಲಿ ಹೇಳಿದರು.  ಆಂತರಿಕ ಚುನಾವಣೆ ಪ್ರಾಯೋಗಿಕ ಆದ್ದರಿಂದ ಮುಂದೆ ಇದೆಲ್ಲ ಸರಿಪಡಿಸಿಕೊಂಡು ಹೋಗುತ್ತಾರೆ. ನಾನು ಮೇಲ್ಮನವಿ ಸಲ್ಲಿಸುವುದಿಲ್ಲ. ಇನ್ನು ಇಲ್ಲಿಯೇ ಇರುತ್ತೇನೆ. ನಿಷ್ಠಾವಂತ ಕಾರ್ಯಕರ್ತನಾಗಿ ಇಲ್ಲಿನ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.